Advertisement

ಬಂಧಿತರಲ್ಲಿ ಹೆಚ್ಚಿನವರು ಕಲ್ಲು ತೂರಾಟಗಾರರು

11:33 PM Oct 14, 2019 | mahesh |

ಹೊಸದಿಲ್ಲಿ: ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದ್ದು, ಕೇವಲ 6 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಾತ್ರವೇ ನಿಷೇಧಾಜ್ಞೆ ಜಾರಿಯಲ್ಲಿದೆ. ವಿಶೇಷ ಸ್ಥಾನ ಮಾನ ರದ್ದಾದ ಬಳಿಕ ಒಂದು ಸಾವಿರಕ್ಕಿಂತ ಕಡಿಮೆ ಜನರು ಮಾತ್ರ ಪೊಲೀಸರ ವಶ ದಲ್ಲಿದ್ದು, ಆ ಪೈಕಿ 800 ಮಂದಿ ಕಲ್ಲು ತೂರಾ ಟಗಾರರು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಸೋಮವಾರ ಇಂಡಿಯಾ ಟುಡೇ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ವಿವಿಧ ವಿಚಾರಗಳ ಕುರಿತು ಮಾತ ನಾಡಿದ್ದು, ಕಾಶ್ಮೀರದಲ್ಲಿ ಕೈ ಗೊಂಡ ನಿರ್ಧಾರಗಳನ್ನು ಸಮರ್ಥಿಸಿ ಕೊಂಡಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಅವರು ಇದೇ ಮೊದಲ ಬಾರಿಗೆ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದಾರೆ.

ಗೃಹಬಂಧನದಲ್ಲಿ ಇಲ್ಲ: ಮಾಜಿ ಸಿಎಂ ಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್‌ ಅಬ್ದುಲ್ಲಾರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ವಶದಲ್ಲಿರಿಸಿ ಕೊಳ್ಳ ಲಾಗಿದೆ. ಆದರೆ, ಒಮರ್‌ರ ತಂದೆ ಫಾರೂಕ್‌ ಅಬ್ದುಲ್ಲಾ ಅವರು ಗೃಹಬಂಧನ ದಲ್ಲಿ ಇಲ್ಲ. ಅವರು ಮುಕ್ತವಾಗಿ ಮನೆ ಯಿಂದ ಹೊರಹೋಗಬಹುದಾಗಿದೆ ಎಂದೂ ಶಾ ತಿಳಿಸಿದ್ದಾರೆ.

ಭಿನ್ನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್‌ ಅವರ ಪತಿ ಪರಕಳ ಪ್ರಭಾಕರ್‌ ಅವರು ಕೇಂದ್ರದ ಬಿಜೆಪಿ ಸರಕಾರದ ಆರ್ಥಿಕ ನೀತಿಗಳನ್ನು ಟೀಕಿಸಿ ಲೇಖನ ಬರೆದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅಮಿತ್‌ ಶಾ, “ಭಾರತದ ರಾಜ ಕೀಯದಲ್ಲಿ ಇಂಥ ಕೆಳಮಟ್ಟದ ಪದ್ಧತಿಗಳನ್ನು ನಾನು ನೋಡಿಲ್ಲ. ಪತಿ ಮತ್ತು ಪತ್ನಿ ಒಂದೇ ಅಭಿ ಪ್ರಾಯ ಹೊಂದಿರಬೇಕು ಎಂಬ ನಿಯ ಮವಿದೆಯೇ? ತಮ್ಮನ್ನು ತಾವು ಪ್ರಗತಿ ಪರರು ಎಂದು ಹೇಳಿ ಕೊಳ್ಳುವವರಿಂದ ಇಂಥ ಪ್ರಶ್ನೆಯೇ? ಪ್ರತಿಯೊಬ್ಬರಿಗೂ ಅವರವರ ಅಭಿಪ್ರಾಯ ಮಂಡಿಸಲು ಅವಕಾಶ ಇರ ಬೇಕಲ್ಲವೇ’ ಎಂದು ಮರುಪ್ರಶ್ನೆ ಹಾಕಿದ್ದಾರೆ.

ಲಾಭಕ್ಕಾಗಿ ಜೈಲಿಗೆ ತಳ್ಳಲಿಲ್ಲ ರಾಜಕೀಯ ಲಾಭಕ್ಕಾಗಿ ನಾವೇನೂ ಚಿದಂಬರಂರನ್ನು ಜೈಲಿಗೆ ತಳ್ಳಲಿಲ್ಲ ಎಂದೂ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ. ಸಿಬಿಐ ಅಥವಾ ಇ.ಡಿ. ಯಂಥ ತನಿಖಾ ಸಂಸ್ಥೆಗಳು ಗೃಹ ಸಚಿವಾ ಲಯದ ಅಡಿ ಕಾರ್ಯನಿರ್ವಹಿಸುತ್ತಿಲ್ಲ. ಚಿದಂಬರಂ ಅವರು ಗೃಹ ಸಚಿವರಾಗಿದ್ದಾಗಲೂ ಸಿಬಿಐ ಗೃಹ ಇಲಾಖೆಯಡಿ ಇರ ಲಿಲ್ಲ, ಈಗಲೂ ಇಲ್ಲ ಎಂದಿದ್ದಾರೆ ಶಾ.

Advertisement
Advertisement

Udayavani is now on Telegram. Click here to join our channel and stay updated with the latest news.

Next