Advertisement

ಶ್ರೀನಗರದ ಮೊದಲ ಮಲ್ಟಿಪ್ಲೆಕ್ಸ್‌ ಲೋಕಾರ್ಪಣೆ

07:33 PM Sep 20, 2022 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಬರೋಬ್ಬರಿ 32 ವರ್ಷಗಳ ನಂತರ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರವನ್ನು ಮಂಗಳವಾರ ಲೋಕಾರ್ಪಣೆ ಮಾಡಲಾಗಿದೆ. ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಚಿತ್ರಮಂದಿರ ಲೋಕಾರ್ಪಣೆಗೊಳಿಸಿದರು.

Advertisement

ಐನಾಕ್ಸ್‌ ನಿರ್ವಹಣೆಯಲ್ಲಿರುವ ಈ ಮಲ್ಟಿಪ್ಲೆಕ್ಸ್‌ನಲ್ಲಿ ಮೂರು ಸಿನಿಮಾ ತೆರೆಗಳಿದ್ದು, 520 ಮಂದಿಗೆ ಆಸನ ವ್ಯವಸ್ಥೆಯಿದೆ. ಫ‌ುಡ್‌ ಕೋರ್ಟ್‌ ಕೂಡ ಇದರಲ್ಲಿದೆ. ಮಲ್ಟಿಪ್ಲೆಕ್ಸ್‌ ಲೋಕಾರ್ಪಣೆಗೊಂಡ ಮೊದಲ ದಿನ ಬಾಲಿವುಡ್‌ ನಟ ಆಮೀರ್‌ ಖಾನ್‌ ನಟನೆಯ “ಲಾಲ್‌ ಸಿಂಗ್‌ ಛಡ್ಡಾ’ವನ್ನು ಪ್ರದರ್ಶಿಸಲಾಗಿದೆ. ಸೆ.30ರಿಂದ ಈ ಮಲ್ಟಿಪ್ಲೆಕ್ಸ್‌ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಆಗ ಹೃತಿಕ್‌ ರೋಷನ್‌ ಹಾಗೂ ಸೈಫ್ ಅಲಿ ಖಾನ್‌ ನಟನೆಯ “ವಿಕ್ರಮ್‌ ವೇದ’ ಸಿನಿಮಾವನ್ನು ಹಾಕಲಾಗುವುದು ಎಂದು ತಿಳಿಸಲಾಗಿದೆ.

ಶ್ರೀನಗರದಲ್ಲಿ ಈ ಹಿಂದೆ 1989-90ರ ಕಾಲದಲ್ಲಿ ಸಿನಿಮಾ ಮಂದಿರಗಳಿದ್ದವು. ಆದರೆ ಆ ಸಮಯಕ್ಕೆ ಉಗ್ರರ ಕಾಟ ಹೆಚ್ಚಾದ ಹಿನ್ನೆಲೆ ಸಿನಿಮಾ ಮಂದಿರವನ್ನು ಮುಚ್ಚಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next