Advertisement
ದಾಲ್ ಸರೋವರದ ದಂಡೆಯಲ್ಲಿರುವ ಶೇರ್-ಎ- ಕಾಶ್ಮೀರ್ ಅಂತಾರಾಷ್ಟ್ರೀಯ ಸಭಾಂಗಣ(ಎಸ್‌ಕೆಐಸಿಸಿ) ದಲ್ಲಿ ಬೆಳಗ್ಗೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ಜನರನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಕಾರ್ಯ ಕ್ರಮದಲ್ಲಿ ಭಾಗಿಯಾಗುವವರಿಗೆ 3 ದಿನಗಳ ಮುಂಚೆಯೇ ಯೋಗ ಭಂಗಿಗಳ ಬಗ್ಗೆ ತರಬೇತಿ ನೀಡಲಾಗಿದೆೆ. ಪ್ರಧಾನಿ ಭೇಟಿ ಹಿನ್ನೆಲೆ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ದಶಕದಿಂದ ಪ್ರತೀವರ್ಷ ಜೂ.21ರಂದು ದೇಶದ ವಿವಿಧೆಡೆ ಯೋಗ ದಿನದ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
“ಯೋಗ- ಸ್ವ ಹಿತ, ಸಮಾಜದ ಹಿತಕ್ಕಾಗಿ’ ಎಂಬ ಪರಿಕಲ್ಪನೆ ವ್ಯಾಪ್ತಿಯಲ್ಲಿ ಈ ಬಾರಿಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ವೈಯಕ್ತಿಕವಾಗಿ ಮಾತ್ರವಲ್ಲದೇ ಸಾಮಾಜಿಕ ಯೋಗಕ್ಷೇಮವನ್ನೂ ಉತ್ತೇಜಿಸುವಲ್ಲಿ ಯೋಗದ ಪಾತ್ರವನ್ನು ಈ ಥೀಮ್ ಸಾರುತ್ತಿದೆ ಎಂದು ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಪ್ರತಾಪ್ ರಾವ್ ಜಾಧವ್ ಹೇಳಿದ್ದಾರೆ.