Advertisement
ಸಂಸ್ಥೆಯ ಮುಖ್ಯಸ್ಥ ಅಬ್ದುಲ್ ಹಮೀದ್ ಫಯಾಜ್‌ರನ್ನೂ ವಶಕ್ಕೆ ಪಡೆಯಲಾಗಿದೆ.35ಎ ವಿಧಿಯ ಮಾನ್ಯತೆ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವದ್ದು. ಇದರ ಬೆನ್ನಿಗೆ ಕಣಿವೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಭದ್ರತೆ ಹೆಚ್ಚಿಸಲಾಗಿದೆ. ಸುಮಾರು 10 ಸಾವಿರ ಅರೆಸೇನಾ ಪಡೆ ಸಿಬಂದಿಯನ್ನು ಕಾಶ್ಮೀರಕ್ಕೆ ರವಾನಿಸಲಾಗಿದೆ.
ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್‌ರನ್ನೂ ವಶಕ್ಕೆ ಪಡೆದು ಕೋಥಿಬಾಘ ಪೊಲೀಸ್ ಠಾಣೆ ಯಲ್ಲಿ ಇರಿಸಲಾಗಿದೆ.
ಘಟನೆಯನ್ನು ಪಿಡಿಪಿ ಮುಖ್ಯಸ್ಥೆ ಮಹೆಬೂಬಾ ಮುಫ್ತಿ ಖಂಡಿಸಿದ್ದಾರೆ. ಯಾಸೀನ್ ಮಲಿಕ್ ವಶ ಅಕ್ರಮ, ಬಲವಂತದ ಕ್ರಮ ಎಂದು ಹುರಿಯತ್ ಕಾನ್ಫರೆನ್ಸ್‌ನ ಮುಖ್ಯಸ್ಥ ಮಿರ್ವೈಜ್ ಉಮರ್ ಫಾರೂಕ್ ಖಂಡಿಸಿದ್ದಾರೆ.