Advertisement

Kashmir: ಲೋಕ ಚುನಾವಣೆ ಬಳಿಕ ಕಾಶ್ಮೀರ ವಿಧಾನಸಭೆ ಚುನಾವಣೆ ಸಾಧ್ಯತೆ

01:34 AM Jan 11, 2024 | Team Udayavani |

ಶ್ರೀನಗರ: ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭೆ ಚುನಾವಣೆ ಬಳಿಕವೇ ಅಲ್ಲಿ ವಿಧಾನಸಭೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‌ ಚುನಾವಣೆಗಳು ನಡೆಯುವ ಸಾಧ್ಯತೆ ಅಧಿಕವಾಗಿದೆ. 2023 ನ.19ರಂದೇ ಅಲ್ಲಿನ 19 ನಗರಪಾಲಿಕೆ ಆಯೋಗಗಳು, 57 ನಗರಪಾಲಿಕೆ ಸಮಿತಿಗಳ, ಪಂಚಾಯತ್‌ಗಳ ಅಧಿಕಾರದ ಅವಧಿ ಮುಕ್ತಾಯಗೊಂಡಿತ್ತು. ಸದ್ಯ ಅಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಎಂಬ ಹೊಸ ಆಡಳಿತ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದೆ. 2020ರಲ್ಲಿ ಆ ಮಂಡಳಿಗಳಿಗೆ ಚುನಾವಣೆ ನಡೆದಿತ್ತು. ಡಿ.11ರಂದು ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದ ಕೇಂದ್ರ ನಿರ್ಧಾರ ಸಮರ್ಥಿಸಿ ತೀರ್ಪು ನೀಡುವ ಸಂದರ್ಭದಲ್ಲಿ 2024ರ ಸೆಪ್ಟಂಬರ್‌ ಒಳಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಬಗ್ಗೆ ಚುನಾವಣ ಆಯೋಗ, ಕೇಂದ್ರ ಸರಕಾರಕ್ಕೆ ನೋಟಿಸ್‌ ನೀಡಿತ್ತು. ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರವೂ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

Advertisement

ಇವಿ ಎಂಗಳ ನಿಯೋಜನೆ, ಭದ್ರತಾ ಪಡೆಗಳ ಲಭ್ಯತೆ, ಚುನಾವಣೆ ನಡೆಸಲು ಸಿಬಂದಿ ಸೇರಿದಂತೆ ಹಲವು ಅಂಶಗಳನ್ನು ಗಮನ ದಲ್ಲಿ ಇರಿಸಿಕೊಂಡು ಲೋಕಸಭೆ ಚುನಾವಣೆ ಬಳಿಕವೇ ಅಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯೇ ಹೆಚ್ಚು.

ಮತ್ತಷ್ಟು ಅರ್ಜಿ: ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದುಗೊಳಿದ ಕೇಂದ್ರದ ತೀರ್ಮಾನ ಸಮರ್ಥಿಸಿ ಡಿ.11ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಅದನ್ನು ಮತ್ತೂಮ್ಮೆ ಪರಿಶೀಲಿಸುವಂತೆ ಇನ್ನೂ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next