Advertisement
ಕಳೆದ ಒಂದು ವಾರದಲ್ಲಿ ಒಟ್ಟು ಏಳು ಮಂದಿ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಈ ವರ್ಷ ಆರಂಭವಾದಾಗಿನಿಂದ ಇಲ್ಲಿ ವರೆಗೆ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 17 ಮಂದಿ ಬಹುಸಂಖ್ಯಾಕರಾಗಿದ್ದರೆ ಎಂಟು ಮಂದಿ ಅಲ್ಪಸಂಖ್ಯಾಕ ವರ್ಗಕ್ಕೆ ಸೇರಿದವರಾಗಿದ್ದಾರೆ. ಶ್ರೀನಗರವೊಂದರಲ್ಲೇ 10 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಪುಲ್ವಾಮಾ ಘಟನೆ ಮತ್ತು ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂದೆಗೆದ ಮೇಲೆ, ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಸಾಮಾನ್ಯ ಸ್ಥಿತಿಗೆ ಮರಳುವ ಲಕ್ಷಣ ತೋರಿದ್ದವು. ಈ ಹಿಂದೆ ಕಾಣುತ್ತಿದ್ದ ಕಲ್ಲುತೂರಾಟದಂಥ ಘಟನೆಗಳು ತೀರಾ ಎನ್ನುವಷ್ಟರ ಮಟ್ಟಿಗೆ ಕಡಿಮೆಯಾಗಿವೆ. ಪ್ರವಾಸೋದ್ಯಮವೂ ಚಿಗುರಿಕೊಳ್ಳುತ್ತಿದೆ. ಆದರೆ ಪಾಕಿಸ್ಥಾನ ಪ್ರೇರಿತ ಉಗ್ರರು ಈ ಸಾಮಾನ್ಯ ಸ್ಥಿತಿಯನ್ನು ಸಹಿಸುತ್ತಿಲ್ಲ. ಜಮ್ಮು ಕಾಶ್ಮೀರವೂ ದೇಶದ ಇನ್ನೊಂದು ರಾಜ್ಯದಂತೆ ಸಾಮಾನ್ಯ ಸ್ಥಿತಿಗೆ ಮರಳಿದರೆ ಪಾಕಿಸ್ಥಾನ ಸರಕಾರಕ್ಕೆ ಹೊಟ್ಟೆ ಕಿಚ್ಚು ಹೆಚ್ಚು. ಹೀಗಾಗಿಯೇ ಉಗ್ರರನ್ನು ಛೂ ಬಿಟ್ಟು ಇಂಥ ಕೆಲಸ ಮಾಡಿಸುತ್ತಿದೆ.
Related Articles
Advertisement
ಹಿಂದೆಗೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಉಗ್ರರ ದೊಡ್ಡ ಮಟ್ಟದ ರಂಪಾಟಗಳು ಹೆಚ್ಚಾಗಿ ನಡೆಯುತ್ತಿಲ್ಲ. ಆದರೂ ನಾಗರಿಕರ ಹತ್ಯೆ ಮಾಡುವ ಮೂಲಕ ಉಗ್ರರು ಬೇರೊಂದು ರೀತಿಯಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಹೀಗಾಗಿ ಭದ್ರತಾ ಪಡೆಗಳು ಮತ್ತು ಪೊಲೀಸರು ಉಗ್ರರ ಮೇಲುಗೈ ಆಗಲು ಯಾವುದೇ ಕಾರಣಕ್ಕೂ ಬಿಡಬಾರದು.