ಪಕ್ಕದ ಮನೆಯವರೊಬ್ಬರು ಯಾವಾಗಲೂ ನನ್ನನ್ನು ಕೇಳುತ್ತಿದ್ದ ಪ್ರಶ್ನೆಯೆಂದರೆ, ಎಷ್ಟು ಊರು, ಎಷ್ಟು ದೇವಸ್ಥಾನಕ್ಕೆ ಹೋಗ್ತಿàರಿ, ಬೋರ್ ಬರೋ ದಿಲ್ವಾ ಎಂದು. ಆಗ ಅವರಿಗೆ ಹಾಗೇನೂ ಇಲ್ಲ. (ಸ್ವಲ್ಪ ಸಿಟ್ಟು ಬಂದಿದ್ದರೂ ವಿನಯ ಪೂರ್ವಕ ವಾಗಿ) ಯಾಕೆ ಬೋರ್ ಆಗುತ್ತೆ?’ ಎಂದು ಮರು ಪ್ರಶ್ನೆ ಹಾಕಿದ್ದೆ.
ನಿಧಾನವಾಗಿ ನನ್ನೊಳಗೇ ಆ ಪ್ರಶ್ನೆ ಕಾಡತೊಡಗಿತು. ಹೌದಾ, ದೇವಸ್ಥಾನಗಳಿಗೆ ಹೋದರೆ, ಪುಣ್ಯ ಕ್ಷೇತ್ರ ಗಳಿಗೆ ಹೋದರೆ ಬೋರ್ ಆಗುತ್ತಾ ಎನಿಸತೊಡಗಿತು.
ನಾನು ಹಲವು ಪುಣ್ಯ ಕ್ಷೇತ್ರಗಳಿಗೆ ಹೋಗಿದ್ದೇನೆ. ಹೆಸರು ಹೇಳುವುದಾದರೆ ಹಲವಾರು ಹೇಳಬೇಕು. ಕೆಲವು ಸ್ಥಳಗಳಿಗೆ ಆಗಾಗ್ಗೆ, ವರ್ಷಕ್ಕೊಮ್ಮೆಯಾದರೂ ಹೋಗಬೇಕೆನಿಸಿದ್ದಿದೆ, ಹೋಗುತ್ತಿದ್ದೇನೆ. ಅಲ್ಲಿ ಏನಿದೆಯೋ ನನಗೂ ಗೊತ್ತಿಲ್ಲ. ನನಗೆ ದೊಡ್ಡ ದೊಡ್ಡ ಮಾತುಗಳಲ್ಲಿ ಅದನ್ನು ಹೇಳಲು ಬಾರದು.
ಆದರೆ ಅಲ್ಲಿಗೆ ಹೋದಾಗ ಸಿಗುವ ಖುಷಿಯನ್ನು ಹೇಳುವುದು ಕಷ್ಟ. ಉದಾಹರಣೆಗೆ ವಾರಾಣಾಸಿಗೆ ಎರಡು ಬಾರಿ ಹೋಗಿದ್ದೆ. ಅಲ್ಲಿ ಕಾಶೀ ವಿಶ್ವನಾಥನನ್ನು ಕಂಡು ಕೈ ಮುಗಿದು ನಮಸ್ಕರಿಸಿ, ಗಂಗಾ ತಟದಲ್ಲಿ ಹೋಗಿ ಕುಳಿತುಕೊಂಡರೆ ಮನಸ್ಸಿನ ಭಾರವೆಲ್ಲಾ ಕಳೆದುಕ ೊಂಡಂತೆ ಅನ್ನಿಸುತ್ತದೆ. ಅದು ದೇವರ ಪ್ರಭಾವವೋ, ನಮ್ಮ ಮನಸ್ಸಿನ ಭಾವನೆಯೋ ಗೊತ್ತಿಲ್ಲ. ಅಲ್ಲಿ ಅರ್ಧ ಗಂಟೆ ತಣ್ಣಗೆ ಕುಳಿತು ಬಂದರೆ ಹೊಸ ಶಕ್ತಿ ಬಂದಂತೆ ಆಗುತ್ತದೆ. ನಮ್ಮ ಹಿರಿಯರು ಇದನ್ನೇ ಕಾರಣಿಕ ಎನ್ನುತ್ತಿದ್ದುದ್ದೇನೋ? ನಾವೀಗ ಪಾಸಿಟಿವ್ ಎನರ್ಜಿ ಎನ್ನುತ್ತೇವೆ. ಅದೂ ಇದೇ ಇರಬೇಕು. ಮನಸ್ಸಿನ ಏನೇ ದುಃಖವಿದ್ದರೂ ಅಲ್ಲಿಗೆ ಹೋಗಿ ಬಂದರೆ ಎಲ್ಲವನ್ನೂ ನಿಭಾಯಿಸುವ ಧೈರ್ಯ ಬರುತ್ತದೆ. ದೇವರು ಇದ್ದಾರೆ, ಸಹಕರಿಸುತ್ತಾರೆ ಎಂಬ ಅಭಿಪ್ರಾಯವೂ ಮನಸ್ಸಿನಲ್ಲಿ ಮೂಡು ತ್ತದೆ. ಇದು ತೀರ್ಥಕ್ಷೇತ್ರಗಳಿಂದ ನನ ಗಾಗುತ್ತಿರುವ ಪ್ರಯೋಜನ. ದೇವರು ಸಿಕ್ಕರೇ, ಸಿಗಲಿಲ್ಲವೇ ಎಂಬ ಚಿಂತೆಗೆ ನಾನು ಹೋಗುವುದಿಲ್ಲ. ದೇವರು ಕಾಣ ಬೇಕೆಂಬ ಹಂಬಲದಿಂದಲೂ ಹೋಗುವು ದಿಲ್ಲ, ಮನಸ್ಸಿನ ನೆಮ್ಮದಿಗಾಗಿಯಷ್ಟೇ ನನ್ನ ಭೇಟಿ.
- ರಘೋತ್ತಮ, ಕುಂದಾಪುರ