Advertisement

ಕಾಸ್ ಗಂಜ್ ಪ್ರಕರಣದ ಪ್ರಮುಖ ಆರೋಪಿಯನ್ನು ಎನ್ ಕೌಂಟರ್ ಮೂಲಕ ಹತ್ಯೆಗೈದ ಯುಪಿ ಪೊಲೀಸರು

09:42 AM Feb 21, 2021 | Team Udayavani |

ಲಕ್ನೋ: ಕಾಸ್ ಗಂಜ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮೋತಿ ಸಿಂಗ್ ನನ್ನು ಉತ್ತರಪ್ರದೇಶ ಪೊಲೀಸರು  ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ ಎಂದು ಜೀನ್ಯೂಸ್ ವರದಿ ಮಾಡಿದೆ.

Advertisement

ಸಿಧ್ ಪುರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ನನ್ನು ಹತ್ಯೆಗೈದು, ಇನ್ಸ್ ಪೆಕ್ಟರ್ ಅವರನ್ನು ಕೂಡ ಗಂಭೀರ ಗಾಯಗೊಳಿಸಿದ್ದ ಮೋತಿ ಸಿಂಗ್, ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ. ಇದನ್ನು ಕಾಸ್ ಗಂಜ್ ಎನ್ ಕೌಂಟರ್ ಪ್ರಕರಣ ಎಂದೇ ಪರಿಗಣಿಸಲಾಗಿತ್ತು.

ಮೋತಿ ಸಿಂಗ್ ಲಿಕ್ಕರ್ ಮಾಫಿಯಾದ ಕಿಂಗ್ ಪಿನ್ ಆಗಿದ್ದ. ಸಿಧ್ ಪುರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಹಾಗೂ ಇನ್ಸ್ ಪೆಕ್ಟರ್  ವಾರೆಂಟ್ ನೀಡಲು ಕಾಸ್ ಗಂಜ್ ಗ್ರಾಮದ ನಾಗ್ಲಾ ಧೀಮರ್ ಗೆ ತೆರಳಿದ್ದ ವೇಲೆ ಮೋತಿ ಸಿಂಗ್ ಹಾಗೂ ಆತನ ಸಹಚರರು ಪೊಲೀಸರ ಮೇಲೆ ದಾಳಿ ನಡೆಸಿದ್ದರು. ಕಾನ್ಸ್ ಟೇಬಲನ್ನು ಹೊಡೆದು  ಕೊಂದ ಬಳಿಕ, ಇನ್ಸ್ ಪೆಕ್ಟರ್ ನನ್ನು ಗಂಭೀರ ಗಾಯಗೊಳಿಸಿದ್ದರು.

ಇದೀಗ ಉತ್ತರಪ್ರದೇಶ ಪೊಲೀಸರು ಮೋತಿ ಸಿಂಗ್ ನನ್ನು ಎನ್ ಕೌಂಟರ್ ಮೂಲಕ ಹೊಡೆದುರುಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next