Advertisement
ಕುವೈತ್‌ನಿಂದ ಆಗಮಿಸಿದ್ದ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 38 ವರ್ಷದ ವ್ಯಕ್ತಿ, ಮಹಾರಾಷ್ಟ್ರದಿಂದ ಬಂದ ಚೆರುವತ್ತೂರು ಗ್ರಾಮ ಪಂಚಾಯತ್‌ನ 33 ವರ್ಷದ ವ್ಯಕ್ತಿ ಮತ್ತು ಪುಲ್ಲೂರು ಪೆರಿಯ ಗ್ರಾ.ಪಂ.ನ 63 ವರ್ಷದ ವ್ಯಕ್ತಿ ಬಾಧಿತರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾಣ ಎ.ವಿ. ರಾಮದಾಸ್ ತಿಳಿಸಿದ್ದಾರೆ.
ಕೇರಳದಲ್ಲಿ ರವಿವಾರ 107 ಮಂದಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಅವರಲ್ಲಿ 71 ಮಂದಿ ವಿದೇಶದಿಂದ, 28 ಮಂದಿ ಇತರ ರಾಜ್ಯಗಳಿಂದ ಬಂದವರು. ಸಂಪರ್ಕದಿಂದ 8 ಮಂದಿಗೆ ಸೋಂಕು ಬಾಧಿಸಿದೆ. ರಾಜ್ಯದಲ್ಲಿ ಒಟ್ಟು 1,095 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 803 ಮಂದಿ ಗುಣಮುಖರಾಗಿದ್ದಾರೆ.
Related Articles
ತಮಿಳುನಾಡಿನಿಂದ ಬಂದು ಕ್ವಾರಂಟೈನ್‌ನಲ್ಲಿರುವಾಗ ಮೃತಪಟ್ಟ ಆಯುರ್ವೇದ ವೈದ್ಯ ತಳಂಗರೆ ಗಝಲಿ ನಗರದ ರಾಮಚಂದ್ರನ್ ವೈದ್ಯರ್ (76) ಅವರಿಗೆ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಮೃತ ದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.
Advertisement
ಮಾಸ್ಕ್ ಧರಿಸದ 217 ಮಂದಿವಿರುದ್ಧ ಕೇಸು
ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ರವಿವಾರ 217 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 5,105 ಮಂದಿಯ ವಿರುದ್ಧ ಕೇಸು ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.