Advertisement

Kasaragod ಕಡಲ್ಕೊರೆತ: ಮೂಸೋಡಿಯಲ್ಲಿ ಮನೆ ಸಮುದ್ರ ಪಾಲು ಭೀತಿ

12:37 AM Jul 23, 2024 | Team Udayavani |

ಕಾಸರಗೋಡು: ಕಡಲ್ಕೊರೆತ ತೀವ್ರಗೊಂಡ ಪರಿಣಾಮವಾಗಿ ಉಪ್ಪಳ ಮೂಸೋಡಿಯಲ್ಲಿ ಇಸ್ಮಾಯಿಲ್‌ ಅವರ ಮನೆ ಸಮುದ್ರ ಪಾಲಾಗುವ ಸ್ಥಿತಿಗೆ ತಲುಪಿದೆ.

Advertisement

ಮನೆಯ ಅಡಿಪಾಯ ಕೊರೆದು ಹೋಗಿದ್ದು, ಯಾವುದೇ ಸಮಯದಲ್ಲಿ ಕುಸಿಯುವ ಸಾಧ್ಯತೆಯಿದೆ. ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಇದೇ ಪರಿಸರದಲ್ಲಿ ಕೆಲವು ದಿನಗಳ ಹಿಂದೆ ಮೂಸಾ ಅವರ ಮನೆ ಸಮುದ್ರ ಪಾಲಾಗಿತ್ತು.

ಉಪ್ಪಳ ಬಳಿಯ ಐಲ ಬಂಗ್ರದಲ್ಲಿ ಮೀನುಗಾರಿಕೆಯ ಬಲೆಗಳನ್ನು ಸಂಗ್ರಹಿಸಿಡುವ ಶೆಡ್‌ ಸಮುದ್ರ ಪಾಲಾಗುವ ಭೀತಿಯಲ್ಲಿದ್ದು, ಬಲೆಗಳನ್ನು ಸ್ಥಳಾಂತರಿಸಲಾಗಿದೆ. ಕಳೆದ ಹಲವು ದಿನಗಳಿಂದ ಈ ಪ್ರದೇಶದಲ್ಲಿ ಸಮುದ್ರ ಅಲೆಗಳ ಆರ್ಭಟ ಹೆಚ್ಚಾಗಿದೆ. ಇಲ್ಲಿನ ರಸ್ತೆ ಕೂಡ ಅಪಾಯದಂಚಿನಲ್ಲಿದೆ. ಹನುಮಾನ್‌ ನಗರ, ಮೂಸೋಡಿ, ಶಾರದಾ ನಗರ, ತೃಕ್ಕನ್ನಾಡು ಮೊದಲಾದೆಡೆಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next