ಕಾಸರಗೋಡು: ಕಾಸರಗೋಡು ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 500 ಬಾಟಿಲಿ ಮದ್ಯ ವಶಪಡಿಸಿಕೊಂಡು ತಳಂಗರೆ ಕೊಪ್ಪಲ್ ಕಾಲನಿ ನಿವಾಸಿ ಮಾಧವನ್ ಅವರ ಪುತ್ರ ರಮೇಶನ್(39)ನನ್ನು ಬಂಧಿಸಲಾಗಿದೆ. ಈತನ ವಶದಲ್ಲಿದ್ದ 85 ಲೀಟರ್ ಮದ್ಯ ವಶಪಡಿಸಲಾಗಿದೆ. 500 ಬಾಟಿಲಿಗಳಲ್ಲಿ ಮದ್ಯ ತುಂಬಿಸಲಾಗಿತ್ತು.
Advertisement
ವಿದ್ಯಾರ್ಥಿನಿಗೆ ಕಿರುಕುಳ : ಸೆರೆ ಬೆಳ್ಳೂರು: ಮೂರನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ಆಟೋ ರಿಕ್ಷಾ ಚಾಲಕ ನಾಟೆಕಲ್ಲು ಸಮೀಪದ ದಿನೇಶ್(26)ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಶಾಲೆಯಿಂದ ಮನೆಗೆ ಬಾಲಕಿಯನ್ನು ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದಾಗ ಕಿರುಕುಳ ನೀಡಿದ್ದಾಗಿ ದೂರು ನೀಡಲಾಗಿತ್ತು.
ಕುಂಬಳೆ: ರೈಲು ಗಾಡಿ ಢಿಕ್ಕಿ ಹೊಡೆದು ಶಿರಿಯ ರೈಲು ಹಳಿಯಲ್ಲಿ ಅಪರಿಚಿತ ವ್ಯಕ್ತಿ ಸಾವಿಗೀಡಾದ ಘಟನೆ ನಡೆದಿದೆ. ಸುಮಾರು 50 ವರ್ಷ ಪ್ರಾಯದ ಈ ವ್ಯಕ್ತಿ ಪ್ಯಾಂಟ್, ಶರ್ಟ್ ಧರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಳು ಸಾಗಾಟ ಲಾರಿ ವಶಕ್ಕೆ
ಮಂಜೇಶ್ವರ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಉಪ್ಪಳ ಪರಿಸರದಿಂದ ವಶಪಡಿಸಿಕೊಂಡಿದ್ದು, ಈ ಸಂಬಂಧ ಚಾಲಕ ಮಂಗಳೂರು ಬಿ.ಸಿ.ರೋಡ್ ನಿವಾಸಿ ಅಬ್ದುಲ್ ರಝಾಕ್(46) ನನ್ನು ಬಂಧಿಸಿದ್ದಾರೆ.
Related Articles
ಕಾಸರಗೋಡು: ಕಟ್ಟಡದಿಂದ ಬಿದ್ದು ಪೈಂಟಿಂಗ್ ಕಾರ್ಮಿಕ ಉತ್ತರ ಪ್ರದೇಶ ನಿವಾಸಿ, ವಿದ್ಯಾನಗರ ಪನ್ನಿಪ್ಪಾರದಲ್ಲಿ ವಾಸ್ತವ್ಯ ಹೂಡಿರುವ ರಾಜು(36) ಸಾವಿಗೀಡಾದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಬಸ್‌ನಿಂದ ಮದ್ಯ ವಶಕ್ಕೆಕುಂಬಳೆ: ಮಂಗಳೂರಿನಿಂದ ಕಾಸರಗೋಡಿಗೆ ಸಾಗಿಸುತ್ತಿದ್ದ 18 ಬಾಟಿÉ ಮದ್ಯವನ್ನು ಹೊಸಬೆಟ್ಟಿನಿಂದ ಅಬಕಾರಿ ದಳ ವಶಪಡಿಸಿದೆ. ಈ ಸಂಬಂಧ ಮಂಗಳೂರು ನಗರ ಕಟ್ಟೆ ನಿವಾಸಿ ನಾಗರಾಜ್(23)ನನ್ನು ಬಂಧಿಸಲಾಗಿದೆ. ಅಪಘಾತದಲ್ಲಿ ಸಾವು : 18 ಲಕ್ಷ ರೂ. ನಷ್ಟ ಪರಿಹಾರ
ಕಾಸರಗೋಡು: 2015 ಎಪ್ರಿಲ್ 15 ರಂದು ಪೊಯಿನಾಚಿ ಜಂಕ್ಷನ್‌ನಲ್ಲಿ ಟಾಟಾ ವ್ಯಾಗ್ನರ್ ಢಿಕ್ಕಿ ಹೊಡೆದು ಸಾವಿಗೀಡಾದ ಪರವನಡ್ಕ ದೇಳಿ ಜಂಕ್ಷನ್ ನಿವಾಸಿ ಜಯಪ್ರಕಾಶ್(40) ಅವರ ಕುಟುಂಬಕ್ಕೆ 18 ಲಕ್ಷ ರೂ. ನಷ್ಟ ಪರಿಹಾರ ನೀಡುವಂತೆ ಕಾಸರಗೋಡು ಪ್ರಿನ್ಸಿಪಲ್ ಎಂಎಸಿಟಿ ನ್ಯಾಯಾಲಯ ತೀರ್ಪು ನೀಡಿದೆ. ಗೂಡಂಗಡಿಗೆ ಬೆಂಕಿ : ಬಂಧನ
ಕಾಸರಗೋಡು: ಚಟ್ಟಂಚಾಲ್‌ನಲ್ಲಿ ಐದು ಗೂಡಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಚಟ್ಟಂಚಾಲ್ ಘಟಕ ಅಧ್ಯಕ್ಷ ಅಬ್ದುಲ್ ಖಾದರ್ ಕಣ್ಣಂಬಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಬಂಧನವನ್ನು ಪ್ರತಿಭಟಿಸಿ ಚಟ್ಟಂಚಾಲ್‌ನಲ್ಲಿ ಹರತಾಳ ನಡೆಸಲಾಯಿತು.