Advertisement

ಕಾಸರಗೋಡು: 18 ಮಂದಿಗೆ ಕೋವಿಡ್

10:01 AM May 29, 2020 | mahesh |

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ ಓರ್ವ ಮಹಿಳೆ ಸಹಿತ 18 ಮಂದಿಗೆ ಕೋವಿಡ್ ಸೋಂಕು ಖಚಿತವಾಗಿದೆ. ಅವರಲ್ಲಿ 13 ಮಂದಿಯೂ ಮಹಾರಾಷ್ಟ್ರದಿಂದ ಆಗಮಿಸಿದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್‌ ತಿಳಿಸಿದ್ದಾರೆ. ಕುವೈಟ್‌ನಿಂದ ಆಗಮಿಸಿದ ಇಬ್ಬರು, ಕತಾರ್‌ನಿಂದ ಬಂದ ಒಬ್ಬರು, ಶಾರ್ಜಾ ದಿಂದ ಆಗಮಿಸಿದ ಒಬ್ಬರು, ತಮಿಳುನಾಡಿನಿಂದ ಬಂದ ಒಬ್ಬರಲ್ಲಿ ಸೋಂಕು ಖಚಿತವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಕೋವಿಡ್‌ ರೋಗ ಖಚಿತಗೊಂಡ 67 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

3,616 ಮಂದಿ ನಿಗಾದಲ್ಲಿ
ಜಿಲ್ಲೆಯ ಒಟ್ಟು 3,616 ಮಂದಿ ನಿಗಾದಲ್ಲಿದ್ದಾರೆ. ಬುಧವಾರ 39 ಮಂದಿಯನ್ನು ಐಸೊ ಲೇಶನ್‌ ವಾರ್ಡಿಗೆ ದಾಖಲಿಸಲಾಗಿದೆ. 407 ಮಂದಿಯ ಸ್ಯಾಂಪಲ್‌ ತಪಾಸಣೆ ಲಭಿಸಿಲ್ಲ.

ಗಂಭೀರ ಸಮಸ್ಯೆ
ಕೋವಿಡ್‌ ಸೋಂಕಿನ ಹರಡುವಿಕೆಯ 3ನೇ ಹಂತದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ.
ರಾಮದಾಸ್‌ ತಿಳಿಸಿದರು. ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆ ತಿಳಿಸಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ಸೋಂಕಿನ ಸಾಮಾಜಿಕ ಹರಡುವಿಕೆಯನ್ನು ತಡೆಗಟ್ಟುವಂತೆ ಅವರು ಸಲಹೆ ಮಾಡಿದ್ದಾರೆ.

ಕೇರಳದಲ್ಲಿ 84 ಮಂದಿಗೆ ಸೋಂಕು
ಕೇರಳದಲ್ಲಿ ಗುರುವಾರ ಒಟ್ಟು 84 ಮಂದಿ ಯನ್ನು ಕೊರೊನಾ ಬಾಧಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ. ಒಂದೇ ದಿನ ಇಷ್ಟು ಸಂಖ್ಯೆಯಲ್ಲಿ ರೋಗ ದೃಢವಾಗಿರುವುದು ಇದೇ ಪ್ರಥಮ. ಇದೇ ವೇಳೆ ತೆಲಂಗಾಣದ ವ್ಯಕ್ತಿಯೊಬ್ಬರು ತಿರುವನಂತಪುರದಲ್ಲಿ ಸಾವಿಗೀಡಾಗಿದ್ದಾರೆ.

ಗೃಹ ನಿಗಾದಲ್ಲಿದ್ದ ಮಹಿಳೆ ಸಾವು ಕಾಸರಗೋಡು ಜಿಲ್ಲೆಗೆ ಗೋವಾದಿಂದ
ಬಂದು ನಿಗಾದಲ್ಲಿದ್ದ ಮಹಿಳೆ ಸಾವಿಗೀಡಾ ಗಿದ್ದಾರೆ. ಮಧುಮೇಹ ರೋಗಿಯಾಗಿದ್ದ ಮಂಜೇಶ್ವರದ ಟಿ.ಎಸ್‌. ಮೊದೀನ್‌ ಅವರ ಪತ್ನಿ ಆಮಿನಾ (63) ಮೃತಪಟ್ಟವರು. ಗೋವಾದಲ್ಲಿ ಮಗಳ ಮನೆಯಿಂದ ತಲಪಾಡಿ ಮೂಲಕ ಮಂಜೇಶ್ವರಕ್ಕೆ ಬಂದಿದ್ದ ಅವರು ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ದೇಶದಂತೆ ಮನೆಯಲ್ಲಿ ನಿಗಾದಲ್ಲಿದ್ದರು. ಅವರು ಮೇ 27ರಂದು ನಿಧನ ಹೊಂದಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next