Advertisement

ರಾಜ್ಯ ಪ್ರದರ್ಶನ ಮೇಳದಲ್ಲಿ ಗಮನ ಸೆಳೆಯುತ್ತಿರುವ ಕಾಸರಗೋಡಿನ ಸ್ಟಾಲ್‌ಗ‌ಳು

09:52 PM Jan 27, 2020 | Sriram |

ಕಾಸರಗೋಡು: ತಿರುವನಂತಪುರದಲ್ಲಿ ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ಹರಿತ ಕೇರಳಂ ಮಿಷನ್‌ ಪ್ರದರ್ಶನ ಮೇಳದಲ್ಲಿ ಕಾಸರಗೋಡಿನ ವೈಶಿಷ್ಟ್ಯವುಳ್ಳ ಸ್ಟಾಲ್‌ಗ‌ಳು ಗಮನ ಸೆಳೆಯುತ್ತಿವೆ.

Advertisement

ಪ್ಲಾಸ್ಟಿಕ್‌ ಬಳಕೆಗೆ ಪರ್ಯಾಯ ವ್ಯವ ಸ್ಥೆಯ ಬಗ್ಗೆ ಸಮಗ್ರ ಮಾಹಿತಿ ತಿಳಿಸುವ ಕಾಸರಗೋಡು ಜಿಲ್ಲೆಯ ಸ್ಟಾಲ್‌ಗ‌ಳು ಇಂದಿನ ಅನಿವಾರ್ಯ ಪರಿಸ್ಥಿತಿಗೆ ಮಹತ್ವ ನೀಡುತ್ತಿವೆ. ದಿನನಿತ್ಯ ಬಳಸುವ ಪ್ಲಾಸ್ಟಿಕ್‌ ಸಾಮಗ್ರಿಗಳು ಪ್ರಕೃತಿಗೆ ಮಾರಕವಾಗಿರುವುದು ಮತ್ತು ಪ್ರಕೃತಿಗೆ ಪೂರಕವಾಗಿರುವ ಸಾಮಗ್ರಿಗಳನ್ನೇ ಪ್ಲಾಸ್ಟಿಕ್‌ಗೆ ಬದಲಾಗಿ ಬಳಸುವ ಬಗೆಗಗಳನ್ನು ಇಲ್ಲಿ ವೈಜ್ಞಾನಿಕ ರೀತಿ ತಿಳಿಸಲಾಗುತ್ತಿದೆ.

ಮಡಿಕೈ ಗ್ರಾಮ ಪಂಚಾಯತ್‌ನಲ್ಲಿ “ಪಾಪ್ಲ’ ಎಂಬ ಹೆಸರಿನಲ್ಲಿ ಆರಂಭಿಸಿರುವ ಅಡಿಕೆ ಹಾಳೆಯ ತಟ್ಟೆ ನಿರ್ಮಾಣ ಘಟಕದ ಉತ್ಪನ್ನಗಳು ಈ ಸ್ಟಾಲ್‌ನ ಪ್ರಧಾನ ಆಕರ್ಷಣೆಯಾಗಿವೆ. ಮಡಿಕೈ ನಿವಾಸಿ ದೇವ ಕುಮಾರ್‌ ದಂಪತಿ ಹಾಳೆಯಿಂದ ತಯಾರಿಸಿದ ತಟ್ಟೆ, ಲೋಟ, ಪಾತ್ರೆಗಳು ಮುಟ್ಟಪ್ಪಾಳೆ ಇತ್ಯಾದಿಗಳ ಮೂಲಕ ಗಮನ ಸೆಳೆದಿದ್ದಾರೆ. ಬೇಡಗಂ ಕುಂಡಂಕುಳಿಯ ಅಪ್ಪಾರನ್‌ ಪಾರ್ಕ್‌ ಕುಟುಂಬಶ್ರೀ ಘಟಕದ ವತಿಯಿಂದ ನಿರ್ಮಿಸಲಾದ ಬಟ್ಟೆ ಚೀಲಗಳು, ಎ.ಆರ್‌.ಸಿ. ಕರಕುಶಲ ವಸ್ತುಗಳು, ಮುನ್ನಾಡ್‌ನ‌ ಆರ್ಟಿಸ್ಟ್‌ ರಾಘವನ್‌ ಅವರು ಹಾಳೆಯಲ್ಲಿ ನಿರ್ಮಿಸಿದ ಗೋಡೆಯಲ್ಲಿ ತೂಗಿಹಾಕುವ ಅಲಂಕಾರ ವಸ್ತುಗಳು, ಕೇರ ಕ್ರಾಫ್ಟ್‌ ಎಂಬ ಹೆಸರಿನಲ್ಲಿ ಆರ್ಟಿಸ್ಟ್‌ ಲೋಹಿತಾಕ್ಷನ್‌ ನಿರ್ಮಿಸುವ ಗೆರಟೆ ಶಿಲ್ಪಗಳು, ದೀಪಗಳು, ಪೆನ್‌ ಸ್ಟಾಂಡ್‌, ಕಾಂಞಂಗಾಡ್‌ ನಗರಸಭೆಯ ಮೂಲಕ ನಿರ್ಮಿಸಲಾದ ಬಟ್ಟೆ ಚೀಲ, ಕಾಲೊರೆಸುವ ಬಟ್ಟೆ ಇತ್ಯಾದಿಗಳು ಈ ಸ್ಟಾಲ್‌ನ ಗರಿಮೆ ಹೆಚ್ಚಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next