Advertisement

ಕಾಸರಗೋಡು: ವಿಶ್ವ ಏಡ್ಸ್‌ ದಿನಾಚರಣೆ

11:27 PM Dec 02, 2020 | mahesh |

ಕಾಸರಗೋಡು: ವಿಶ್ವ ಏಡ್ಸ್‌ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಜರಗಿತು.

Advertisement

ಎನ್‌ವೈಕೆ ಸುರಕ್ಷಾ ಪ್ರಾಜೆಕ್ಟ್, ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ಜಂಟಿ ವತಿಯಿಂದ ನೂತನ ಬಸ್‌ ನಿಲ್ದಾಣ ಬಳಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಏಡ್ಸ್‌ ನಿಯಂತ್ರಣ ಅಧಿಕಾರಿ ಡಾ| ಟಿ.ಕೆ.ಆಮಿನಾ ರೆಡ್‌ ರಿಬ್ಬನ್‌ ವಿತರಣೆ ನಡೆಸಿ ಉದ್ಘಾಟಿಸಿದರು. ಜಿಲ್ಲಾ ಟಿಬಿ, ಎಚ್‌ಐವಿ ಸಂಚಾಲಕ ರತೀಶ್‌ ವಿ. ಅಧ್ಯಕ್ಷತೆ ವಹಿಸಿದ್ದರು. ಐಸಿಡಿಎಸ್‌ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾ ರಾಣಿ ರಂಜಿತ್‌ ಏಡ್ಸ್‌ ದಿನ ಸಂದೇಶ ನೀಡಿದರು. ಡಿಎನ್‌ಎಸ್‌ಎ ವಿಭಾಗ ಅಧಿಕಾರಿ ಕೆ.ದಿನೇಶ್‌, ಆರೋಗ್ಯ ವಾಣಿ ನಿರ್ದೇಶಕ ಮೋಹನನ್‌ ಮಾಂಗಾಡ್‌, ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸೂನಾ ಎಸ್‌.ಚಂದ್ರನ್‌, ಕಾಸರಗೋಡು ಜನಮೈತ್ರಿ ಪೊಲೀಸ್‌ ಅಧಿಕಾರಿ ಮಧು ಕಾರಕಡವತ್‌, ಕುಂಞಿಕೃಷ್ಣನ್‌ ಉಪಸ್ಥಿತರಿದ್ದರು.

ಎನ್‌ವೈಕೆ ಸುರಕ್ಷಾ ಪ್ರಾಜೆಕ್ಟ್ ಮೆನೇಜರ್‌ ಪಿ.ಶ್ರೀಜಿತ್‌ ಸ್ವಾಗತಿಸಿದರು. ಔಟ್‌ ರೀಚ್‌ ವರ್ಕರ್‌ ನಾರಾಯಣ ಪೆರಡಾಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next