Advertisement
45 ಮೀಟರ್‌ನಲ್ಲಿ ಚತುಷ್ಪಥ ರಸ್ತೆ ಎಂಬ ಹಿಂದಿನ ತೀರ್ಮಾನವನ್ನು ಬದಲಾಯಿಸಿ ಮುಂದಿನ ದಿನಗಳಲ್ಲಿ ವಾಹನ ದಟ್ಟಣೆ ಅಧಿಕವಾಗುವ ಹಿನ್ನೆಲೆಯಲ್ಲಿ ಷಟ³ಥ ರಸ್ತೆ ನಿರ್ಮಿಸುವ ತೀರ್ಮಾನಕ್ಕೆ ಸರಕಾರ ಬಂದಿರುತ್ತದೆ. ನೂತನ ತೀರ್ಮಾನದಂತೆ ಎರಡು ಭಾಗಗಳಲ್ಲಾಗಿ 21 ಮೀಟರ್ ಅಗಲದಲ್ಲಿ ಷಟ³ಥ ರಸ್ತೆ ನಿರ್ಮಿಸಲಾಗುವುದು. 15 ಮೀಟರ್ ಅಗಲದಲ್ಲಿ ಚತುಷ್ಪಥ ರಸ್ತೆ ನಿರ್ಮಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಡಿವೈಡರ್, ಕಾಲು ದಾರಿಗಳ ಅಗಲವನ್ನು ಎರಡರಿಂದ ಮೂರು ಮೀಟರ್ ಕಡಿಮೆಗೊಳಿಸಲಾಗುವುದು. ಈ ಹಿಂದೆ ನಾಲ್ಕರಿಂದ ಐದು ಮೀಟರ್ ಅಗಲದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಎರಡೂ ಬದಿಗಳಲ್ಲಿರುವ ಸರ್ವೀಸ್ ರಸ್ತೆಗಳ ಅಗಲವನ್ನು 7 ಮೀಟರ್‌ನಿಂದ ಐದೂವರೆ ಮೀಟರ್‌ಗೆ ಇಳಿಸಲು ತೀರ್ಮಾನಿಸಲಾಗಿದೆ.
Related Articles
ಕಾಸರಗೋಡಿನಿಂದ ತಿರುವನಂತಪುರದ ವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯಂತೆ ಅಗತ್ಯದ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಸುಮಾರು ಶೇ. 65ರಷ್ಟು ಪೂರ್ಣಗೊಂಡಿದೆ. ರಸ್ತೆ ಬದಿಯಲ್ಲಿ ಹಾಕಿರುವ ಅಂಗಡಿಗಳು, ವಿವಿಧ ಸಂಸ್ಥೆಗಳು ಫಲಕಗಳನ್ನು, ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಬಗ್ಗೆ ಕೆಲವರಿಗೆ ನೋಟಿಸ್ ಕೂಡ ಬಂದಿದೆ.ಕೆಲವು ದಿನಗಳಿಂದ ರಾಷ್ಟಿÅàಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ರಸ್ತೆ ಬದಿಯಲ್ಲಿ ಹಾಕಿರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸುತ್ತಿದ್ದಾರೆ. ಸಂಬಂಧಪಟ್ಟವರಿಗೆ ಫಲಕಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಫಲಕಗಳನ್ನು ತೆರವುಗೊಳಿಸದ ಅಂಗಡಿಗಳ, ಸಂಸ್ಥೆಗಳ ಫಲಕಗಳನ್ನು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತೆರವುಗೊಳಿಸಿ ಕೊಂಡೊಯ್ಯುತ್ತಿದ್ದಾರೆ. ರಸ್ತೆ ಬದಿಯ ಗೂಡಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ.
Advertisement