Advertisement
60,000 ಕೋ. ರೂ. ವೆಚ್ಚ ಅಂದಾಜಿಸಿರುವ ಈ ಯೋಜನೆಯ ಸಮಗ್ರ ಯೋಜನ ವರದಿಯನ್ನು ಮುಂದಿನ ವಾರ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು. ಆ ಮೂಲಕ ಈ ಯೋಜನೆಗೆ ಅಗತ್ಯದ ಭೂಸ್ವಾಧೀನ ಇತ್ಯಾದಿ ಪ್ರಕ್ರಿಯೆಗಳಿಗೂ ಚಾಲನೆ ನೀಡಲಾಗುವುದು. ಯೋಜನೆ ಸಾಕ್ಷಾತ್ಕಾರಗೊಂಡಲ್ಲಿ ಕಾಸರಗೋಡಿನಿಂದ ತಿರುವನಂತಪುರಕ್ಕೆ 4-5 ಗಂಟೆ ಅವಧಿಯಲ್ಲಿ ತಲುಪಬಹುದು. ಈಗ ಕಾಸರಗೋಡಿ ನಿಂದ ತಿರುವನಂತಪುರಕ್ಕೆ ರೈಲಿನಲ್ಲಿ ತಲುಪಲು 15 ತಾಸುಗಳು ಬೇಕು. ಫ್ರೆಂಚ್ ಎಂಜಿನಿಯರಿಂಗ್ ಸಂಸ್ಥೆಯಾದ “ಸೈಸೂ’ ಈ ಯೋಜನೆ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಪ್ರೋಜೆಕ್ಟ್ ವರದಿ ತಯಾರಿಸಿದೆ. ಅದಕ್ಕಾಗಿ ಆ ಸಂಸ್ಥೆಯೊಂದಿಗೆ 27 ಕೋಟಿ ರೂ. ಗಳ ಒಡಂಬಡಿಕೆಗೂ ಸಹಿ ಹಾಕಲಾಗಿದೆ. ಈ ಯೋಜನೆಗೆ ಭಾರತೀಯ ರೈಲ್ವೇ ಇಲಾಖೆ ಈಗಾಗಲೇ ತಾಂತ್ರಿಕ ಅಂಗೀಕಾರ ನೀಡಿದೆ. ವೆಚ್ಚವನ್ನೂ ಸಮಾನವಾಗಿ ವಹಿಸಿಕೊಳ್ಳಲು ರೈಲ್ವೇ ಅಭಿವೃದ್ಧಿ ನಿಗಮವೂ ಒಡಂಬಡಿಕೆ ಮಾಡಿಸಿಕೊಂಡಿದೆ. ಇನ್ನು ಟ್ರಾಫಿಕ್ ಪ್ರೊಜೆಕ್ಷನ್ ವರದಿಗೂ ಅಂಗೀಕಾರ ಲಭಿಸಲು ಬಾಕಿ ಇದೆ. Advertisement
ಕಾಸರಗೋಡು –ತಿರುವನಂತಪುರ ಹೈಸ್ಪೀಡ್ ರೈಲು: ಮುಂದಿನ ವರ್ಷ ಕಾಮಗಾರಿ ಆರಂಭ
12:53 AM May 07, 2019 | Sriram |
Advertisement
Udayavani is now on Telegram. Click here to join our channel and stay updated with the latest news.