Advertisement

ಕಾಸರಗೋಡು: ಮಿನಿ ವಿಮಾನ ನಿಲ್ದಾಣ ಯೋಜನೆಗೆ ಮರು ಜೀವ

06:00 AM Sep 22, 2018 | |

ಕಾಸರಗೋಡು: ಪ್ರವಾಸೋದ್ಯಮ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ಕಾಸರಗೋಡಿ ನಲ್ಲಿ ಆರಂಭಿಸಿಲು ಉದ್ದೇಶಿಸಿದ ಏರ್‌ ಸ್ಟಿಪ್‌(ಮಿನಿ ವಿಮಾನ ನಿಲ್ದಾಣ) ಯೋಜನೆಗೆ ಮರು ಜೀವ ಲಭಿಸಿದೆ. 

Advertisement

ಕಣ್ಣೂರು ವಿಮಾನ ನಿಲ್ದಾಣ ಯೋಜನೆಯ ಕಾಮಗಾರಿ ಪೂರ್ತಿ ಗೊಂಡ ಬೆನ್ನಲ್ಲೇ ಕಾಸರಗೋಡು ಜಿಲ್ಲೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ ಚಾಲನೆ ಲಭಿಸಲಿದೆ. ಬೃಹತ್‌ ರನ್‌ವೇ ಅಗತ್ಯವಿಲ್ಲದ ಕಿರು ವಿಮಾನಗಳ ಸೇವೆ ಆರಂಭಿಸುವ ರೀತಿಯಲ್ಲಿ ನಿಲ್ದಾಣವನ್ನು ನಿರ್ಮಿಸಲು ಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಪ್ರವಾಸಿ ಭೂಪಟದಲ್ಲಿ ಸ್ಥಾನ ಪಡೆದಿರುವ ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯನ್ನು ಕೇಂದ್ರವಾಗಿರಿಸಿ ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ಧಿಗೊಳಿಸುವ ಮತ್ತು ಇನ್ನಷ್ಟು ಪ್ರವಾಸಿಗರನ್ನು ಕಾಸರಗೋಡಿಗೆ ಸ್ವಾಗತಿಸುವ ಉದ್ದೇಶವನ್ನು ಇರಿಸಿಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಿಸುವ ಬಹುತೇಕ ತೀರ್ಮಾನಕ್ಕೆ ಬರಲಾಗಿದೆ.

ಕಾಸರಗೋಡಿನಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸುವ ಸಾಧ್ಯತೆಯ ಕುರಿತಾಗಿ ಸಮಗ್ರ ಅಧ್ಯಯನ ನಡೆಸಲು ನಾಗರಿಕ ವ್ಯೋಮಯಾನದ ಹೊಣೆಗಾರಿಕೆ ಹೊಂದಿರುವ ಕಮಿಷನರ್‌ ಕೆ.ಆರ್‌.ಜ್ಯೋತಿಲಾಲ್‌ ನೇತೃತ್ವದಲ್ಲಿ ವಿಶೇಷ ಸಮಿತಿಗೆ ರೂಪು ನೀಡಿ ಸರಕಾರ ಅಧಿಸೂಚನೆ ಹೊರಡಿಸಿದೆ. ಕಾಸರಗೋಡು ಜಿಲ್ಲಾಧಿಕಾರಿ ಡಾ|ಡಿ.ಸಜಿತ್‌ ಬಾಬು, ಬಿಆರ್‌ಡಿಸಿ ಎಂ.ಡಿ. ಟಿ.ಕೆ.ಮನ್ಸೂರು, ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಸ್ಥೆಯಾದ ಸಿಯಾಲ್‌ ಪ್ರತಿನಿಧಿ, ರಾಜ್ಯ ವಿತ್ತ ಖಾತೆ ಪ್ರತಿನಿಧಿಗಳು ಸಮಿತಿ ಸದಸ್ಯರಾಗಿದ್ದಾರೆ. ಒಂದು ತಿಂಗಳೊಳಗಾಗ ಅಧ್ಯಯನ ವರದಿ ಸಲ್ಲಿಸುವಂತೆ ಸಮಿತಿಗೆ ಸರಕಾರ ನಿರ್ದೇಶಿಸಿದೆ. ಪ್ರವಾಸೋದ್ಯಮ ರಂಗದ ಸಮಗ್ರ ಅಭಿವೃದ್ಧಿಯನ್ನು ಪರಿಗಣಿಸಿ ಈ ಹೊಸ ಯೋಜನೆಗೆ ರೂಪು ನೀಡಲಾಗಿದೆ. ಜಿಲ್ಲೆಯ ಪೆರಿಯಾದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಮೀಪ ಪ್ರದೇಶವನ್ನು ಕಿರು ವಿಮಾನ ನಿಲ್ದಾಣಕ್ಕಾಗಿ ಪರಿಗಣಿಸಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ 80 ಎಕ್ರೆ ಸ್ಥಳದ ಅಗತ್ಯವಿದೆ. ಆ ಪೈಕಿ 28.5 ಎಕ್ರೆ ಸ್ಥಳ ಈಗಾಗಲೇ ಆ ಪ್ರದೇಶದಲ್ಲಿದೆ. ಅದಲ್ಲದೆ 28.5 ಎಕ್ರೆ ಸ್ಥಳವನ್ನು ಹೊಸದಾಗಿ ಸ್ವಾಧೀನಪಡಿಸಬೇಕಾಗಿ ಬರಲಿದೆ.

25 ರಿಂದ 40 ಪ್ರಯಾಣಿಕರು ಏಕ ಕಾಲದಲ್ಲಿ ಸಂಚರಿಸಬಹುದಾದ ಕಿರು ವಿಮಾನಗಳನ್ನು ಇಳಿಸಲು ಸಾಧ್ಯವಾಗುವ ರೀತಿಯ ಕಿರು ವಿಮಾನ ನಿಲ್ದಾಣವನ್ನು ಇಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ವರ್ಷಗಳ ಹಿಂದೆಯೇ ಈ ಯೋಜನೆ ಸರಕಾರದ ಪರಿಗಣನೆಯಲ್ಲಿತ್ತು. ಬಳಿಕ ಸರಕಾರ ಈ ಯೋಜನೆಯನ್ನು ಕೈಬಿಟ್ಟಿತ್ತು. ಆದರೆ ಇದೀಗ ಮತ್ತೆ ಸರಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಕುರಿತು ಉತ್ಸುಕವಾಗಿದೆ.

ತೋಟಗಾರಿಕಾ ನಿಗಮದ ಬೋವಿಕ್ಕಾನ ಮುದಲಪ್ಪಾರದಲ್ಲಿರುವ ಕಾಸರಗೋಡು ಎಸ್ಟೇಟ್‌ ಪರಿಸರದಲ್ಲಿರುವ ಸ್ಥಳವನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಿಗಣಿಸಲಾಗುತ್ತಿದೆ. ತೋಟಗಾರಿಕಾ  ನಿಗಮದ ಸ್ವಾಧೀನದಲ್ಲಿದ್ದ 80 ಎಕ್ರೆ ಸ್ಥಳವನ್ನು ಈ ಹಿಂದೆ ಎಲ್‌.ಬಿ.ಎಸ್‌. ಎಂಜಿನಿಯರಿಂಗ್‌ ಕಾಲೇಜು ಸ್ಥಾಪಿಸಲು ಮಂಜೂರು ಮಾಡಿತ್ತು. ಎಂಡೋಸಲ್ಫಾನ್‌ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ತೋಟಗಾರಿಕಾ ನಿಗಮ(ಪ್ಲಾಂಟೇಶನ್‌ ಕಾರ್ಪೊರೇಶನ್‌) ಕಚೇರಿ ಪರಿಸರದಲ್ಲಿ 25 ಎಕ್ರೆ ಸ್ಥಳವನ್ನೂ ನೀಡಿತ್ತು. 

Advertisement

ತೋಟಗಾರಿಕಾ ನಿಗಮದ ಮುಳಿಯಾರು ಎಸ್ಟೇಟ್‌ನ ಕೈಕೆಳಗಿರುವ ಮುದಲಪ್ಪಾರ, ಬೋವಿಕ್ಕಾನ, ಆಲೂರು ಎಸ್ಟೇಟ್‌ಗಳಲ್ಲಿ ನೂರಾರು ಹೆಕ್ಟರ್‌ ಪ್ರದೇಶ ಬಂಜರು ಭೂಮಿಯಾಗಿ ಉಳಿದಿದೆ.

ಕಮಿಷನರ್‌ ಕೆ.ಆರ್‌.ಜ್ಯೋತಿಲಾಲ್‌ಕಾಸರಗೋಡು ಜಿಲ್ಲಾಧಿಕಾರಿ ಡಾ|ಡಿ.ಸಜಿತ್‌ ಬಾಬು, ಬಿಆರ್‌ಡಿಸಿ ಎಂ.ಡಿ. ಟಿ.ಕೆ.ಮನ್ಸೂರು, ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಸ್ಥೆಯಾದ ಸಿಯಾಲ್‌ ಪ್ರತಿನಿಧಿ, ರಾಜ್ಯ ವಿತ್ತ ಖಾತೆ ಪ್ರತಿನಿಧಿಗಳು ಸಮಿತಿ ಸದಸ್ಯರಾಗಿದ್ದಾರೆ. ಈ ತಂಡ ಒಂದು ತಿಂಗಳೊಳಗೆ ಅಧ್ಯಯನ ವರದಿಯನ್ನು ಸಲ್ಲಿಸಲು ಸರಕಾರ ನಿರ್ದೇಶಿಸಿದೆ.

ಮುಲ್ಲಚ್ಚೇರಿಯಡ್ಕಂ, ಅಡ್ಕಂ, ಮೂಲಯಡ್ಕಂ, ಆಲನಡ್ಕಂ, ಮೈಕುಳಿ ಮೊದಲಾದ ಸ್ಥಳಗಳು ವಿಶಾಲವಾಗಿ ನೆನೆಗುದಿಗೆ ಬಿದ್ದಿದೆ. 

ಆಲನಡ್ಕದ ಮಯಿಲಾಡುಂಪಾರ ಪ್ರದೇಶದಲ್ಲಿ ನೂರಾರು ಎಕ್ರೆ ಸ್ಥಳವೂ ಇದೆ. ಈ ಪ್ರದೇಶಗಳಿಗೆ ಸರಕಾರ ನೇಮಿಸಿರುವ ಪಂಚ ಸದಸ್ಯರ ನಿಯೋಗ ಶೀಘ್ರದಲ್ಲೇ ಸಂದರ್ಶಿಸಿ ಅಧ್ಯಯನ ನಡೆಸಲಿದೆ.

ಜಿಲ್ಲಾ ಪಂಚಾಯತ್‌ ಬಜೆಟ್‌ನಲ್ಲಿ  ಘೋಷಣೆ 
ಕಾಸರಗೋಡು ಜಿಲ್ಲಾ ಪಂಚಾಯತ್‌ ಕಳೆದ ಮುಂಗಡ ಪತ್ರದಲ್ಲಿ ಏರ್‌ ಸ್ಟಿÅಪ್‌ ನಿರ್ಮಿಸುವ ಕುರಿತು ಘೋಷಿಸಿತ್ತು. ಇದೀಗ ಇದರ ಸಾಧ್ಯತೆಯ ಬಗ್ಗೆ ಸರಕಾರ ಅಧ್ಯಯನ ನಡೆಸಲು ಐವರ ಸಮಿತಿಯನ್ನು ರಚಿಸಿರುವುದರಿಂದ ಮತ್ತೆ ಯೋಜನೆ ಸಾಕಾರದ ಬಗ್ಗೆ ಗರಿ ಬಿಚ್ಚಿದೆ.

ಈ ಹಿಂದೆ ಜಿಲ್ಲಾ ಪಂಚಾಯತ್‌ ಏರ್‌ ಸ್ಟಿÅಪ್‌ ಎಂಬ ಆಶಯವನ್ನು ಮುಂದಿಟ್ಟಾಗ ವಿವಿಧ ಸಂಘಸಂಸ್ಥೆಗಳು, ಬೃಹತ್‌ ಉದ್ಯಮಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಹಿಂದಿನ ಸರಕಾರ ಇದಕ್ಕಾಗಿ ಏರ್‌ ಸ್ಟಿÅಪ್‌ ಸ್ಥಾಪಿಸಲು 80 ಎಕರೆ ಸ್ಥಳವನ್ನು ಮಂಜೂರು ಮಾಡಿತ್ತು. ತೋಟಗಾರಿಕಾ ನಿಗಮದ ಸ್ಥಳವನ್ನು ಇದಕ್ಕಾಗಿ ಕಾದಿರಿಸಲಾಗಿತ್ತು. ಕೇಂದ್ರ ವಿಶ್ವವಿದ್ಯಾಲಯ, ಬೇಕಲ ಕೋಟೆ ಮೊದಲಾದವುಗಳ ಪಕ್ಕದ ಪ್ರದೇಶದಲ್ಲಿ ಏರ್‌ ಸ್ಟಿÅಪ್‌ ಸ್ಥಾಪಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಗೊಳಿಸಲು ತೀರ್ಮಾನಿಸಲಾಗಿತ್ತು.

ಮುಳಿಯಾರು ಪರಿಗಣನೆ 
ಕಿರು ವಿಮಾನ ನಿಲ್ದಾಣ ಸ್ಥಾಪಿಸಬೇಕೆಂಬ ಆಶಯ ವಾಗಿದ್ದರೂ ಸಾಕಷ್ಟು ಸೌಕರ್ಯ ಗಳಿರುವ ವಿಮಾನ ನಿಲ್ದಾಣ ನಿರ್ಮಿಸ ಬೇಕೆಂಬ ಕಲ್ಪನೆ ಮೂಡಿತು.ಪೆರಿಯಾದಲ್ಲಿ ಸ್ಥಳಾವಕಾಶ ಕೊರತೆಯಿದೆ. ಈಹಿನ್ನೆಲೆಯಲ್ಲಿ ತೋಟಗಾರಿಕಾ ನಿಗಮದ ಸ್ವಾಧೀನದಲ್ಲಿರುವ ಮುಳಿಯಾರುಎಸ್ಟೇಟ್‌ ಸ್ಥಳವನ್ನು ಪರಿಗಣಿಸಲಾಗಿದೆ. ಇದೀಗ 300 ಎಕ್ರೆ ಸ್ಥಳದಲ್ಲಿ ನಿಲ್ದಾಣ ಸ್ಥಾಪಿಸುವ ಕುರಿತು ಪರಿಗಣಿಸಲಾಗಿದೆ.

 ಅಧಿಸೂಚನೆ
ಮಹತ್ವಾಕಾಂಕ್ಷೆಯ ಮಿನಿ ವಿಮಾನ ನಿಲ್ದಾಣ(ಏರ್‌ ಸ್ಟಿÅಪ್‌) ಕಾಸರಗೋಡಿನಲ್ಲಿ ಸ್ಥಾಪಿಸುವ ಕುರಿತು ಸರಕಾರ ಉತ್ಸುಕವಾಗಿದ್ದು, ಈ ಹಿನ್ನೆಲೆಯಲ್ಲಿ ಸಾಧ್ಯತೆ ವರದಿ ಸಲ್ಲಿಕೆಗೆ ಸರಕಾರ ಐವರು ಸದಸ್ಯರನ್ನು ನೇಮಿಸಿದೆ. ನಾಗರಿಕ ವ್ಯೋಮಯಾನದ ಹೊಣೆಗಾರಿಕೆ ಹೊಂದಿರುವ ಕಮಿಷನರ್‌ ಕೆ.ಆರ್‌.ಜ್ಯೋತಿಲಾಲ್‌ ನೇತೃತ್ವದಲ್ಲಿ ವಿಶೇಷ ಸಮಿತಿಗೆ ರೂಪು ನೀಡಿ ಸರಕಾರ ಅಧಿಸೂಚನೆ ಹೊರಡಿಸಿದೆ
– ಎ.ಜಿ.ಸಿ.ಬಶೀರ್‌
ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next