Advertisement

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

12:37 PM May 07, 2024 | |

ವಿಜಯಪುರ: ವಿಜಯಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಿರೂರ ಮತಗಟ್ಟೆಯಲ್ಲಿ ಮತಯಂತ್ರದಲ್ಲಿನ ದೋಷದ ಪರಿಣಾಮ ಮತದಾನ ಒಂದು ಗಂಟೆ ತಡವಾಗಿ ಆರಂಭಗೊಂಡ ಘಟನೆ ಜರುಗಿದೆ.

Advertisement

ಮುದ್ದೇಬಿಹಾಳ ತಾಲೂಕಿನ ಹಿರೂರು ಗ್ರಾಮದ ಸರ್ಕಾರಿ ಹಿರಿ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ-3 ರಲ್ಲಿ ಮತಯಂತ್ರ ಕೈ ಕೊಟ್ಟಿದೆ. ಪರಿಣಿತ ತಂತ್ರಜ್ಞರು ಆಗಮಿಸಿ ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಬೆಳಿಗ್ಗೆ 8 ನಂತರ ಮತದಾನ ಪ್ರಕ್ರಿಯೆ ಆರಂಭಗೊಂಡಿತು.

ಮತಯಂತ್ರದ ಕಂಟ್ರೋಲ್ ಯುನಿಟ್ ನಲ್ಲಿ ಸಮಸ್ಯೆ ಕಂಡುಬಂದ ಕಾರಣ ಬೆಳಗ್ಗೆ 5-30 ಕ್ಕೆ ನಡೆಯಬೇಕಿದ್ದ ಅಣಕು ಮತದಾನ 7 ಕ್ಕೆ ನಡೆದರೆ, ವಾಸ್ತವಿಕ ಮತದಾನ 8 ಕ್ಕೆ ಚಾಲನೆ ಪಡೆಯಿತು.

ಮತಯಂತ್ರ ಕಂಟ್ರೋಲ್ ಯುನಿಟ್ ತಾಂತ್ರಿಕ ದೋಷದ ಪರಿಣಾಮ ಮತದಾನ ಮಾಡಲು ಬೆಳಿಗ್ಗೆ 7 ಗಂಟೆಗೂ ಮೊದಲೇ ಮತಗಟ್ಟೆಗೆ ಆಗಮಿಸಿದ್ದ ಮತದಾರರು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಲೋಪ ಸರಿಪಡಿಸುವಲ್ಲಿ ವಿಳಂಬವಾದ ಕಾರಣ ಸಾಲಿನಲ್ಲಿ ನಿಲ್ಲಲಾಗದ ಹಾಗೂ ಸಮಯಕ್ಕಾಗಿ ಕಾಯಲಾಗದ ಕೆಲವು ಮತದಾರರು ಮತದಾನ ಮಾಡದೇ ಮನೆಗೆ ಮರಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next