ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 66 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. 50 ಮಂದಿ ಗುಣ ಮುಖರಾಗಿದ್ದಾರೆ. 57 ಮಂದಿಗೆ ಸಂಪರ್ಕ ದಿಂದ ಸೋಂಕು ತಗಲಿದೆ. ಐವರು ಇತರ ರಾಜ್ಯಗಳಿಂದ ಹಾಗೂ ನಾಲ್ವರು ವಿದೇಶ ದಿಂದ ಬಂದವರು.
ಕೇರಳದಲ್ಲಿ 962 ಪ್ರಕರಣ
ಕೇರಳದಲ್ಲಿ ಸೋಮವಾರ 962 ಮಂದಿಗೆ ಸೋಂಕು ದೃಢವಾಗಿದೆ. ತಿರುವನಂತಪುರ, ಆಲಪ್ಪುಳದ ಇಬ್ಬರು ಮೃತಪಟ್ಟಿದ್ದಾರೆ.
ಮಂಜೇಶ್ವರ: ಪೊಲೀಸರಿಗೆ ಸೋಂಕು ಮಂಜೇಶ್ವರ ಠಾಣೆಯ ಎಲ್ಲ ಸಿಬಂದಿಯನ್ನು ತಪಾಸಣೆಗೊಳಪಡಿಸಿದ್ದು, ಇಬ್ಬರು ಪೊಲೀಸರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಅವರಿಗೆ ಸಂಪರ್ಕದಿಂದ ಸೋಂಕು ತಗಲಿರಬೇಕೆಂದು ಶಂಕಿಸಲಾಗಿದೆ. ಸಿಐ, ಎಸ್‌ಐ ಸಹಿತ ಸುಮಾರು 15 ಮಂದಿ ಪೊಲೀಸರು ಕ್ವಾರಂಟೈನ್‌ನಲ್ಲಿದ್ದಾರೆ. ಚಂದೇರದ ಸಿಪಿಒ, ಹೊಸದುರ್ಗ ಸಿವಿಲ್ ಪೊಲೀಸ್ ಆಫೀಸರ್, ಬೇಕಲದ ಪಿಂಕ್ ಪೊಲೀಸ್ ಬಾಧಿತರಾಗಿದ್ದಾರೆ.