Advertisement

ಆರೋಗ್ಯ,ನಗರ ಅಭಿವೃದ್ಧಿ,ಮೂಲ ಸೌಕರ್ಯಕ್ಕೆ ಆದ್ಯತೆ

12:30 AM Feb 16, 2019 | Team Udayavani |

ಕಾಸರಗೋಡು: ನಗರ ಅಭಿವೃದ್ಧಿ, ಆರೋಗ್ಯ, ಮೂಲ ಸೌಕರ್ಯ ಮತ್ತು ಜನರ ಕ್ಷೇಮಕ್ಕೆ ಆದ್ಯತೆ ನೀಡಿರುವ ಕಾಸರಗೋಡು ನಗರಸಭೆಯ 2019-20ನೇ ಸಾಲಿನ ಮುಂಗಡ ಪತ್ರವನ್ನು ಫೆ. 15 ರಂದು ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷ ಎಲ್‌.ಎ. ಮಹಮೂದ್‌ ಮಂಡಿಸಿದರು.

Advertisement

ಮೂಲ ಸೌಕರ್ಯ ವಲಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಉದ್ದೇಶಿಸಲಾಗಿದ್ದು, ನಗರದ ಪ್ರಮುಖ ರಸ್ತೆಗಳನ್ನು ನವೀಕರಿಸಲು, ದುರಸ್ತಿಗೊಳಿಸಲು ಆದ್ಯತೆ ನೀಡಲಾಗಿದ್ದು, ಇದಕ್ಕಾಗಿ ವಿವಿಧ ಮೂಲಗಳಿಂದ 11 ಕೋಟಿ ರೂ. ಕ್ರೋಡೀಕರಿಸಲಾಗುವುದು. ಆರೋಗ್ಯ ವಲಯದಲ್ಲಿ ವಿಶೇಷ ಗಮನ ಹರಿಸಲಾಗಿದೆ. ಕಳೆದ ವರ್ಷದಂತೆ ಜನರಲ್‌ ಆಸ್ಪತ್ರೆ, ಆಯುರ್ವೇದ, ಹೋಮಿಯೋ ಆಸ್ಪತ್ರೆ, ನಗರಸಭಾ ಆರೋಗ್ಯ ಕೇಂದ್ರ ಎಂಬಿವುಗಳ ಸಮಗ್ರ ಅಭಿವೃದ್ಧಿಗೆ ಅಗತ್ಯದ ಯೋಜನೆಗಳಿಗೆ ರೂಪು ನೀಡಲಾಗಿದೆ.

ಮೀನುಗಾರಿಕಾ ವಲಯ  
ಮೀನು ಕಾರ್ಮಿಕರ ಕ್ಷೇಮಕ್ಕೆ, ಮೀನು ಉದ್ದಿಮೆ ವಲಯದ ಸಮಗ್ರ ಅಭಿವೃದ್ಧಿಗೆ ಅಗತ್ಯ ವಾದ ಯೋಜನೆಗಳನ್ನು ರೂಪೀಕರಿಸಿ ಜಾರಿಗೆ ತರಲಾ ಗುವುದು. ಹಿಂದಿನ ವರ್ಷಗಳಂತೆ ಮೀನು ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಅಗತ್ಯಕ್ಕೆ ಪೀಠೊ ಪಕರಣ ಸೇರಿದಂತೆ ಕಲಿಕೋಪಕರಣಗಳನ್ನು ನೀಡ ಲಾಗುವುದು. ಮೀನು ಕಾರ್ಮಿಕರಿಗೆ ದೋಣಿ, ಬಲೆ ನೀಡಲಾಗುವುದು. ಅರ್ಹರಾದ ಮೀನು ಕಾರ್ಮಿಕರ ಕುಟುಂಬಗಳಿಗೆ ಮನೆ ದುರಸ್ತಿಗೆ ಆರ್ಥಿಕ ಸಹಾಯ ನೀಡಲಾಗುವುದು.

ಕುಟುಂಬಶ್ರೀ  
ಯುವತಿಯರಿಗೆ ಸೊÌàದ್ಯೋಗ ಕಲ್ಪಿಸಲು 25 ಲಕ್ಷ ರೂ. ವೆಚ್ಚ ಅಂದಾಜಿನ ಪವರ್‌ ಲಾಂಡ್ರಿ  ಯೂನಿಟ್‌ ಪ್ರಾರಂಭಿಕ ನಿರ್ವಹಣಾ ಹಂತದಲ್ಲಿದೆ. ಡಿಟಿಪಿ ಸೆಂಟರ್‌ ಸ್ಥಾಪಿಸಲಾಗುವುದು. ಹರಿತ ಕ್ರಿಯಾ ಸೇನೆಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಲಾಗುವುದು. ಮನೆಗಳಿಗೆ ತೆರಳಿ ಅಜೈವಿಕ ಮಾಲಿನ್ಯಗಳನ್ನು ಸಂಗ್ರಹಿಸಿ ಶೆಡ್ಡಿಂಗ್‌ ಯೂನಿಟ್‌ಗೆ ತಲುಪಿಸಲು ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಸಂಬಂಧಪಟ್ಟ ಸಮೀಕ್ಷೆ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ.

ಸಾಂಸ್ಕೃತಿಕ, ಕ್ರೀಡೆ  
ಕಾಸರಗೋಡಿನ ಸಮಷ್ಟಿ ಕಲೆಗಳನ್ನು ಪ್ರೋತ್ಸಾಹಿ ಸಲು ಪ್ರತಿಭೆಗಳನ್ನು ಗುರುತಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಮುನಿಸಿಪಲ್‌ ಲೈಬ್ರರಿಯ ರೆಫರೆನ್ಸ್‌ ವಿಭಾಗದಲ್ಲಿ    ನೂತನ   ತಂತ್ರಜ್ಞಾನ ಅಳವಡಿಸಿ ನವೀಕರಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಯುವತಿ, ಯುವಕರಿಗೆ, ವಿದ್ಯಾರ್ಥಿಗಳಿಗೆ ಕಾರ್ಯಾ ಗಾರ, ಚಿತ್ರ ಪ್ರದರ್ಶನ, ಕವಿತೆ, ಕಥೆ, ಚಿತ್ರ ರಚನೆ ಸ್ಪರ್ಧೆಗಳನ್ನು, ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

Advertisement

ನಗರದ ಕ್ರೀಡಾ ಕ್ಲಬ್‌ಗಳನ್ನು ನಗರಸಭೆಯಲ್ಲಿ ನೋಂದಾವಣೆ ಮಾಡಿ ನ್ಪೋರ್ಟ್ಸ್ ಕಿಟ್‌ಗಳನ್ನು ವಿತರಣೆ ಮಾಡುವ ಕಾರ್ಯ ನಿರ್ವಹಣ ಹಂತದಲ್ಲಿದೆ. ನ್ಪೋರ್ಟ್ಸ್ ಕೌನ್ಸಿಲ್‌ ಹಾಗೂ ಸರಕಾರದ ಸಹಾಯದಿಂದ ಮುನಿಸಿಪಲ್‌ ಸ್ಟೇಡಿಯಂ ನವೀಕರಿಸಲಾಗುವುದು.

ಸಿ.ಸಿ. ಟಿ.ವಿ, ಚರಂಡಿ, ಶಿಕ್ಷಣ, ಕೈಗಾರಿಕೆ  
ನಗರದ ಹೊಸ  ಬಸ್‌  ನಿಲ್ದಾಣ,  ಹಳೆ    ಬಸ್‌  ನಿಲ್ದಾಣ, ಜನರಲ್‌ ಆಸ್ಪತ್ರೆ ಆಸುಪಾಸು ಮೊದಲಾದೆಡೆಗಳಲ್ಲಿ ಸಿ.ಸಿ. ಟಿ.ವಿ. ಸ್ಥಾಪಿಸಲಾಗಿದೆ. ನಗರದ  ವಿವಿಧ ಭಾಗಗಳಲ್ಲಿ   ಶುಚಿತ್ವ   ಹಾಗೂ ಕಾನೂನು ವ್ಯವಸ್ಥೆ ಕಾಪಾಡಲು ಸಿ.ಸಿ. ಟಿ.ವಿ. ಕೆಮರಾ ಸ್ಥಾಪಿಸಲು ಎರಡನೇ ಹಂತದ ಕಾರ್ಯಕ್ರಮದ ಎಸ್ಟಿಮೇಟ್‌ ಸಿದ್ಧಪಡಿಸಲು ಟೆಲಿಕಮ್ಯೂನಿಕೇಶನ್‌ ಇಲಾಖೆಗೆ ಪತ್ರ ಸಿದ್ಧಪಡಿಸಿ ಸಲ್ಲಿಸಲು ಎಂಜಿನಿಯರಿಂಗ್‌ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಇಂಡಸ್ಟ್ರಿಯಲ್‌ ಎಸ್ಟೇಟ್‌ನಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು, ಶೆಡ್‌ಗಳ ಕಾಮಗಾರಿಗೆ 25 ಲಕ್ಷ ರೂ. ಮೀಸಲಿರಿಸಲಾಗಿದೆ.

ನಗರದ ವಿದ್ಯಾಲಯಗಳ ಅಭಿವೃದ್ಧಿಗೆ ಸಹಾಯ ಒದಗಿಸಲಾಗುವುದು. ಸರ್ವಶಿಕ್ಷಾ ಅಭಿಯಾನ್‌ ಯೋಜನೆಗೆ ನಗರಸಭೆಯ ಪಾಲು ಆಗಿ 25 ಲಕ್ಷ ರೂ.ಗಳನ್ನು ಫಂಡ್‌ನಿಂದ 21,05,000 ರೂ. ಮೀಸಲಿರಿಸಲಾಗಿದೆ. 

ನಗರದ ಚರಂಡಿಗಳನ್ನು ನವೀಕರಿಸಲು ವಿಶೇಷ ಗಮನ ಹರಿಸಲಾಗುವುದು. ಸಮಗ್ರ ಚರಂಡಿ ಯೋಜನೆ ಗುರಿಯಾಗಿದೆ. ಇದಕ್ಕಾಗಿ ವಿವಿಧ ಏಜೆನ್ಸಿಗಳೊಂದಿಗೆ ಕೈಜೋಡಿಸಿ ಕಾರ್ಯಗಳಿಗೆ ಅಗತ್ಯದ ರೂಪು ನೀಡಲಾಗುವುದು ಎಂದು ಬಜೆಟ್‌ನಲ್ಲಿ ಸೂಚಿಸಲಾಗಿದೆ.ಬಜೆಟ್‌ ಅಧಿವೇಶನದಲ್ಲಿ ನಗರಸಭಾ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದರು.

ಪರಿಶಿಷ್ಟ  ಜಾತಿ ಅಭಿವೃದ್ಧಿ  
ನಗರಸಭೆಯ ಪರಿಶಿಷ್ಟ ಜಾತಿ ಕಾಲನಿಗಳಲ್ಲಿ ರಸ್ತೆ, ಕಾಲುದಾರಿ, ಚರಂಡಿ, ಪ್ರಾದೇಶಿಕ ಜಲ ಸಂಪನ್ಮೂಲಗಳನ್ನು ಬಳಸಿ ಹಾಗೂ ಇನ್ನಿತರ ಸಂಪನ್ಮೂಲಗಳಿಂದ ಕುಡಿಯುವ ನೀರಿನ ಸೌಕರ್ಯ ಒದಗಿಸುವ ಯೋಜನೆ ಜಾರಿಗೆ ತರಲಾಗುವುದು. ಪರಿಶಿಷ್ಟ   ಜಾತಿ ಕುಟುಂಬಗಳ ಅರ್ಹರಾದ ಸದಸ್ಯರಿಗೆ ವಿವಾಹಕ್ಕೆ ಆರ್ಥಿಕ ಸಹಾಯ ನೀಡಲಾಗುವುದು. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಗತ್ಯಕ್ಕಾಗಿ ಲ್ಯಾಪ್‌ಟಾಪ್‌, ಪೀಠೊಪಕರಣಗ‌ಳನ್ನು ಒದಗಿಸಲಾಗುವುದು. ಕೊಪ್ಪಲ್‌ ಸೇತುವೆ ನಿರ್ಮಾಣ ಪ್ರಾಥಮಿಕ ಹಂತದಲ್ಲಿದೆ. ಪೂರ್ತಿಗೊಳಿಸಲು ಒಟ್ಟು 53 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದೆ. ಕೃಷಿ ವಲಯದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುವುದು ಅದಕ್ಕಾಗಿ 35 ಲಕ್ಷ ರೂ. ಮೀಸಲಿರಿಸಲಾಗಿದೆ.

ವಾರ್ಡ್‌ ಮಟ್ಟದ  ಅಭಿವೃದ್ಧಿ
ನಗರಸಭೆಯ 38 ವಾರ್ಡ್‌ಗಳಲ್ಲಿ ವಿವಿಧ ಕಾಮಗಾರಿಗಳಿಗಾಗಿ ಯೋಜನೆಯ ಮೊತ್ತದಿಂದ ಪ್ರತಿ ವಾರ್ಡ್‌ಗೆ ಕಳೆದ ವರ್ಷದಂತೆ ತಲಾ 8 ಲಕ್ಷ ರೂ. ಗಳಂತೆ ಮಂಜೂರು ಮಾಡಲಾಗಿದೆ. ಇದಕ್ಕಾಗಿ 3.04 ಕೋಟಿ ರೂ. ಮೀಸಲಿರಿಸಲಾಗಿದೆ. ನಗರಸಭಾ ಪ್ರದೇಶದಲ್ಲಿ ಕ್ಷೇಮ ಪಿಂಚಣಿ ಯೋಜನೆಗಳನ್ನು, ಹಿರಿಯ ನಾಗರಿಕ ಪಾಲಿಯೇಟಿವ್‌ ಕೇರ್‌ ಎಂಬಿವುಗಳ ಚಟುವಟಿಕೆ ಉತ್ತಮ ಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು. ಸೆಕೆಂಡರಿ ಪಾಲಿಯೇಟಿವ್‌ನ ಚಟುವಟಿಕೆಗಳಿಗೆ ಈ ಬಾರಿಯೂ ಮೊತ್ತ ಮೀಸಲಿರಿಸಲಾಗಿದೆ. ಶಾರೀರಿಕ ಹಾಗೂ ಮಾನಸಿಕ ಸವಾಲುಗಳನ್ನು ಎದುರಿಸುತ್ತಿರುವವರಿಗಿರುವ ಬಡ್ಸ್‌ ರಿಹ್ಯಾಬಿಲಿಟೇಶನ್‌ ಸೆಂಟರ್‌ನ ಪ್ರಾಥಮಿಕ ಸೌಕರ್ಯಗಳನ್ನು ಉತ್ತಮಪಡಿಸಲಾಗುವುದು. ಟೀಚರ್‌, ಹೆಲ್ಪರ್‌ಗೆ ಅಧಿಕ ವೇತನ ನೀಡಲು ಮೊತ್ತವನ್ನು ಮೀಸಲಿರಿಸಲಾಗಿದೆ. ಅಂಗನವಾಡಿಯ ಪೌಷ್ಟಿಕ ಆಹಾರ ವ್ಯವಸ್ಥೆಯನ್ನು ಉತ್ತಮಗೊಳಿಸಲು, ಅಂಗನವಾಡಿ ಕಟ್ಟಡಗಳನ್ನು ನವೀಕರಿಸಲು ಯೋಜನೆಗಳನ್ನು ಜಾರಿಗೊಳಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next