Advertisement

ಕಾಸರಗೋಡು ಲೋಕಸಭಾ ಕ್ಷೇತ್ರ: ತ್ರಿಕೋನ ಹಣಾಹಣಿ

08:44 PM Apr 14, 2019 | sudhir |

ಕಾಸರಗೋಡು: ಕಾಸರಗೋಡು ಲೋಕಸಭಾ ಕೇತ್ರದಲ್ಲಿ ಒಂಭತ್ತು ಮಂದಿ ಅಭ್ಯರ್ಥಿಗಳಿದ್ದರೂ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ.

Advertisement

ಎನ್‌ಡಿಎಯ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು, ಎಲ್‌ಡಿಎಫ್‌ನ ಸಿಪಿಎಂ ಅಭ್ಯರ್ಥಿ ಕೆ.ಪಿ.ಸತೀಶ್ಚಂದ್ರನ್‌, ಯುಡಿಎಫ್‌ನ ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆಯ ಕಣವಾಗಿರುವ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಪ್ರಚಾರ ಕಾವೇರುತ್ತಿದೆ. ಸಿಪಿಎಂನ ಭದ್ರಕೋಟೆ ಎಂದೇ ಪರಿಗಣಿಸಿರುವ ಈ ಕ್ಷೇತ್ರದಲ್ಲಿ ಈ ಬಾರಿಯೂ ಗೆಲುವು ಶತಸಿದ್ಧ. ಈ ಮೂಲಕ ಗೆಲುವಿನ ಓಟ ಮುಂದುವರಿಯಲಿದೆ ಎಂದು ಸಿಪಿಎಂ ಅಭ್ಯರ್ಥಿ ಪಿ.ಕೆ.ಸತೀಶ್ಚಂದ್ರನ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಅದೇ ವೇಳೆ ಕಾಸರಗೋಡು ಕ್ಷೇತ್ರವನ್ನು ಸಿಪಿಎಂನಿಂದ ಕಸಿದು ಕೊಳ್ಳುವುದು ಖಚಿತ ಎನ್ನುತ್ತಾರೆ ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆಯಿಂದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿಯ ಗೆಲುವು ಸಾಧಿಸುವುದಾಗಿ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಖಚಿತ ಭರವಸೆ ವ್ಯಕ್ತಪಡಿಸುತ್ತಾರೆ. ಈ ಮೂವರು ಅಭ್ಯರ್ಥಿಗಳಿಗೂ ಗೆಲುವಿನ ನಿರೀಕ್ಷೆಯನ್ನು ಹೊಂದಿದ್ದು, ತಮ್ಮದೇ ಆದ ಲೆಕ್ಕಾಚಾರ ಮುಂದಿಡುತ್ತಿದ್ದಾರೆ.

ಅಭಿವೃದ್ಧಿ ಮಂತ್ರ
ಹಿಂದಿನ ಕಾಂಗ್ರೆಸ್‌ ನೇತೃತ್ವದ ಐಕ್ಯರಂಗ ಸರಕಾರ ಕಾಸರಗೋಡಿನ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ನೀಡಿದೆ. ಈ ಹಿನ್ನೆಲೆಯಲ್ಲಿ ಡಾ|ಪ್ರಭಾಕರನ್‌ ಆಯೋಗ ನೇಮಿಸಿದೆ. ಆಯೋಗ ಶಿಫಾರಸಿನಂತೆ ಸಾಕಷ್ಟು ಅನುದಾನ ಕಾಸರಗೋಡಿಗೆ ಬಿಡುಗಡೆಗೊಳಿಸಿದೆ. ಕಾಸರಗೋಡಿನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ, ವೈದ್ಯಕೀಯ ಕಾಲೇಜು, ಎಚ್‌ಎಎಲ್‌ ಮೊದಲಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಹೇಳುತ್ತಿದ್ದಾರೆ.

Advertisement

ಹಾಲಿ ಸಂಸದ ಪಿ.ಕರುಣಾಕರನ್‌ ಕಾಸರಗೋಡು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ನಡೆಸಿದ್ದು, ಕರುಣಾಕರನ್‌ ಮಾಡಿರುವ ಅಭಿವೃದ್ಧಿ ಕೆಲಸದಿಂದ ಈ ಬಾರಿಯೂ ಗೆಲುವು ಸುಲಭವಾಗಲಿದೆ ಎಂದು ಕೆ.ಪಿ.ಸತೀಶ್ಚಂದ್ರನ್‌ ಅವರು ಭರವಸೆ ವ್ಯಕ್ತಪಡಿಸುತ್ತಾರೆ.ಕಾಸರಗೋಡು ಜಿಲ್ಲೆಯನ್ನೇ ನಡುಗಿಸಿದ ಎಂಡೋಸಲ್ಫಾನ್‌ ಸಿಂಪಡಣೆ, ಅಡಿಕೆ ಬೆಳೆ ಪ್ರಸ್ತಾಪ, ಕಸ್ತೂರಿ ರಂಗನ್‌ ವರದಿ, ಬೆಲೆಯೇರಿಕೆ, ಭ್ರಷ್ಟಾಚಾರ, ಶಬರಿಮಲೆ ಇವೇ ಮೊದಲಾದವು ಚುನಾವಣಾ ಪ್ರಚಾರದಲ್ಲಿ ಸ್ಥಾನ ಪಡೆದಿದೆ.

ಕಾಸರಗೋಡಿನ ವಾಣಿಜ್ಯ ಬೆಳೆ, ಸಾವಿರಾರು ಮಂದಿಯ ಜೀವನಕ್ಕೆ ದಾರಿ ತೋರಿದ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ. ಅಡಿಕೆ ಕೃಷಿಕರ ಸಂರಕ್ಷಣೆಗಾಗಿ ಎಡರಂಗ ಸರಕಾರ ಮತ್ತು ಐಕ್ಯರಂಗ ಸರಕಾರ ಅಡಿಕೆ ಪ್ಯಾಕೇಜ್‌ ಘೋಷಿಸಿದೆ. ಆದರೆ ಈ ವರೆಗೂ ಅಡಿಕೆ ಕೃಷಿಕರಿಗೆ ಒಂದು ಪೈಸೆಯೂ ಲಭಿಸಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ಎಂಡೋಸಲ್ಫಾನ್‌ ಸಿಂಪಡನೆ
ಎಂಡೋಸಲ್ಫಾನ್‌ ಸಿಂಪಡನೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ 11 ಗ್ರಾಮ ಪಂಚಾಯತ್‌ಗಳಲ್ಲಿ ದುಷ್ಪರಿಣಾಮ ಬೀರಿದ್ದು, ಎಂಡೋ ಸಂತ್ರಸ್ತರಿಗೆ ಮಾನವ ಹಕ್ಕು ಆಯೋಗ ಶಿಫಾರಸಿನಂತೆ ನೆರವು ನೀಡಬೇಕೆಂದು ನಿರಂತರ ಹೋರಾಟ ನಡೆದಿದ್ದರೂ, ರಾಷ್ಟ್ರೀಯ ಮಾನವ ಹಕ್ಕು ಶಿಫಾರಸಿನಂತೆ ಬಹುಪಾಲು ಆದೇಶಗಳು ಜಾರಿಯಾಗಿಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ.
ಒಟ್ಟಾರೆ ಈ ಚುನಾವಣೆಯಲ್ಲಿ ‌§ಳೀಯ ಸಮಸ್ಯೆಗಳ ಜೊತೆ ರಾಷ್ಟ್ರೀಯ ಸಮಸ್ಯೆಗಳು ಪ್ರಚಾರದಲ್ಲಿ ಪ್ರಮುಖ ಅಸ್ತÅವಾಗಿದೆ.

ಭಾಷಾ ಅಲ್ಪಸಂಖ್ಯಾತರ ಸಮಸ್ಯೆ
ಕಾಸರಗೋಡು ಲೋಕಸಭಾ ಕ್ಷೇತ್ರ ಸಪ್ತಭಾಷೆಗಳ ಸಂಗಮ ಭೂಮಿ. ಇಲ್ಲಿನ ಭಾಷಾ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ಸಮಸ್ಯೆಗಳು ಹಲವು. ಕಾಸರಗೋಡಿನಲ್ಲಿ ಭಾಷಾ ಅಲ್ಪಸಂಖ್ಯಾತರು ಸಮಸ್ಯೆಗೆ ಸಿಲುಕಿದಾಗ ಭಾಷಾ ಅಲ್ಪಸಂಖ್ಯಾತರ ಪರವಾಗಿ ಹೋರಾಡಿ ವಿವಿಧ ಸವಲತ್ತುಗಳನ್ನು, ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರು ಹೇಳುತ್ತಾರೆ. ಪಿಎಸ್‌ಸಿ ಗೆ ಮಲಯಾಳ ಕಡ್ಡಾಯಗೊಳಿಸಿದ ಸರಕಾರದ ನೀತಿಯ ವಿರುದ್ಧ ಹೋರಾಡಿ ಈ ಆದೇಶವನ್ನು ಹಿಂತೆಗೆದುಕೊಳ್ಳಲು ಬಿಜೆಪಿ ಯಶಸ್ವಿಯಾಗಿದೆ ಎಂದು ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಪ್ರಮುಖ ವಿಷಯವಾಗಿ ಭಾಷಾ ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶದಲ್ಲಿ ಬಳಸಿಕೊಳ್ಳುತ್ತಿದೆ. ಶಬರಿಮಲೆ ವಿಷಯ ಕೂಡಾ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಆಚಾರ ಅನುಷ್ಠಾನಗಳ ರಕ್ಷಣೆಗೆ ಕಟಿಬದ್ಧ ಎಂಬ ಪ್ರಚಾರವನ್ನೂ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next