Advertisement

ಕಾಸರಗೋಡು ಚುನಾವಣೆ ಖರ್ಚು- ವೆಚ್ಚ : ತರಬೇತಿ ಕಾರ್ಯಕ್ರಮ

02:49 PM Apr 10, 2019 | Team Udayavani |

ಬದಿಯಡ್ಕ: ಅಭ್ಯರ್ಥಿಗಳ ಹೆಸರಲ್ಲಿ ಚುನಾವಣೆ ಸಂಬಂಧ ಜಾಹೀರಾತು ನೀಡುವುದಿದ್ದಲ್ಲಿ , ಅ ಕುರಿತು ಸಮಗ್ರ ಮಾಹಿತಿ ಚುನಾವಣೆ ಆಯೋಗಕ್ಕೆ ಸ್ಪಷ್ಟವಾಗಿ ತಿಳಿಸಬೇಕು. ಅಭ್ಯರ್ಥಿಯ ಚುನಾವಣೆ ಖರ್ಚು – ವೆಚ್ಚ ಸ್ಪಷ್ಟವಾಗಿ ದಾಖಲಿಸಬೇಕು ಎಂದು ಚುನಾವಣೆಯ ಜಿಲ್ಲಾ ಮಟ್ಟದ ಖರ್ಚು – ವೆಚ್ಚ ನಿರೀಕ್ಷಕ ಪ್ರಮೋದ್‌ ಕುಮಾರ್‌ ತಿಳಿಸಿದರು.

Advertisement

ಜಿಲ್ಲಾ ಯೋಜನೆ ಸಮಿತಿ ಸಭಾಂಗಣದಲ್ಲಿ ನಡೆದ ಅಭ್ಯರ್ಥಿಗಳ ಮತ್ತು ಏಜೆಂಟರಿಗೆ ಈ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಭ್ಯರ್ಥಿಗಳ ಈವರೆಗಿನ ಪ್ರಚಾರದ ಖರ್ಚು – ವೆಚ್ಚಗಳನ್ನು ಎ. 13, 17, 21 ರಂದು ನಡೆಸಲಾಗುವ ಪರಿಶೀಲನೆಯಲ್ಲಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗರಿಷ್ಠ ಮಟ್ಟದಲ್ಲಿ ವೆಚ್ಚ ನಡೆಸುವ ಮೊಬಲಗು 70 ಲಕ್ಷ ರೂ. ಆಗಿದೆ ಎಂದವರು ನುಡಿದರು. ಖರ್ಚು – ವೆಚ್ಚಗಳ ನೋಡೆಲ್‌ ಅಧಿಕಾರಿ ಕೆ. ಸತೀಶನ್‌ ತರಗತಿಗೆ ನೇತೃತ್ವ ನೀಡಿದರು. ಕಾಸರಗೋಡು ವಿಧಾನಸಭೆ ಕ್ಷೇತ್ರ ಮಟ್ಟದ ಖರ್ಚು – ವೆಚ್ಚ ಅಧಿಕಾರಿ ಟಿ.ಇ. ಜನಾರ್ದನನ್‌ ಮತ್ತೀತರ ಸಿಬ್ಬಂದಿ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next