Advertisement

ಕಾಸರಗೋಡು ಜಿಲ್ಲಾ ಪಂಚಾಯತ್‌ ಬಜೆಟ್‌ ಮಂಡನೆ

07:10 AM Mar 23, 2018 | |

ಕಾಸರಗೋಡು: ಕಾಸರಗೋಡು ಜಿಲ್ಲೆಯ ಕೃಷಿ ಸಂಸ್ಕೃತಿಯ ಪುನರುಜ್ಜೀವನಕ್ಕೆ ಶಕ್ತಿ ತುಂಬಲು ಹಲವು ಯೋಜನೆಗಳ ಮೂಲಕ ಭತ್ತದ ಕೃಷಿಯ ವಿಸ್ತರಣೆ, ಕೃಷಿಕರಿಗೆ ಆರ್ಥಿಕ ಸಹಾಯ, ಕೃಷಿ ಉತ್ಪಾದನೆ ಹೆಚ್ಚಳ, ಜಿಲ್ಲೆಯ ಜಲಕ್ಷಾಮ ಪರಿಹಾರ ಮತ್ತು ಭಾಷಾ ಸಂಶೋಧನಾ ಕೇಂದ್ರಕ್ಕೆ ಒತ್ತು ನೀಡುವ 2018-19 ನೇ ಹಣಕಾಸು ವರ್ಷದ ಕಾಸರಗೋಡು ಜಿಲ್ಲಾ ಪಂಚಾಯತ್‌ನ ಮುಂಗಡ ಪತ್ರವನ್ನು ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ  ಶಾಂತಮ್ಮ ಫಿಲಿಪ್‌ ಗುರುವಾರ ಬೆಳಗ್ಗೆ ಮಂಡಿಸಿದರು.

Advertisement

ಪ್ಲಸ್‌ ಟು ಸಮತ್ವ ಶಿಕ್ಷಣದಲ್ಲಿ ಕನ್ನಡ ಕಲಿಕಾರ್ಥಿಗಳನ್ನು ಕೂಡಾ ಸೇರ್ಪಡೆಗೊಳಿಸುವುದಕ್ಕಾಗಿ ಕನ್ನಡ ಶಿಕ್ಷಣ ಸಾಮಗ್ರಿಗಳ ಲಭ್ಯತೆಗಾಗಿ ಮೊತ್ತವನ್ನು ಮೀಸಲಿಡಲಾಗಿದೆ. ಜಿಲ್ಲೆಯ ಸಾಹಿತ್ಯ – ಸಾಂಸ್ಕೃತಿಕ ರಂಗದಲ್ಲಿ ಕೀರ್ತಿಯನ್ನು ಗಳಿಸಿದ ಡಾ|ಕಯ್ನಾರ ಕಿಞ್ಞಣ್ಣ ರೈ ಮತ್ತು ವಿದ್ವಾನ್‌ ಪಿ.ಕೇಳು ನಾಯರ್‌ ಅವರಂತಹವರ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಕನ್ನಡ, ಮಲಯಾಳ ಭಾಷೆಗಳಲ್ಲಿ ಶಿಕ್ಷಣ ಸಂಶೋಧನಾ ಕಾರ್ಯಗಳನ್ನು ನಡೆಸುವುದಕ್ಕಾಗಿ ಜಿಲ್ಲಾ ಪಂಚಾಯತ್‌ ನೇತೃತ್ವದಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಪ್ರಕ್ರಿಯೆ ಆರಂಭಿಸಲು ಒತ್ತು ನೀಡಲಾಗಿದೆ.


ಭತ್ತದ ಕೃಷಿಯ ವಿಸ್ತರಣೆಯನ್ನು ಗುರಿಯಾಗಿರಿಸಿಕೊಂಡು ಕೂಲಿ ಖರ್ಚಿನ ವಿಭಾಗದಲ್ಲಿ ಕೃಷಿಕರಿಗೆ ಆರ್ಥಿಕ ಸಹಾಯವನ್ನು ನೀಡುವುದಕ್ಕೆ 60 ಲಕ್ಷ ರೂ. ಮೀಸಲಿಡಲಾಗಿದೆ. ಕೃಷಿಕರಿಗೆ ಬೀಜಗಳ ಸರಳವಾದ ಲಭ್ಯತೆಗಾಗಿ ನೆಟ್ಟು ಬೆಳೆಸುವಂತಹ ವಸ್ತುಗಳ ಪ್ರೋತ್ಸಾಹ ಎಂಬ ಯೋಜನೆಯನ್ನು ಜಾರಿಗೊಳಿಸಲಾಗುವುದು. ಜಿಲ್ಲಾ ಪಂಚಾಯತ್‌ನ ನೇತೃತ್ವದಲ್ಲಿ ಜಿಲ್ಲೆಯ ಹಲವು ಭಾಗಗಳಲ್ಲಿ ನಿರ್ಮಿಸಿದ ಚೆಕ್‌ ಡ್ಯಾಂಗಳ ನವೀಕರಣ ಕೈಗೆತ್ತಿಕೊಳ್ಳಲಾಗುವುದು. ನೂರಾರು ಕುಟುಂಬಗಳಿಗೆ ಈ ಯೋಜನೆಯು ಸಹಾಯಕವಾಗುವ ಭರವಸೆ ವ್ಯಕ್ತಪಡಿಸಲಾಗಿದೆ. 

ಜಿಲ್ಲೆಯ ನೀರಾವರಿ ಸೌಕರ್ಯಗಳ ಕೊರತೆಯನ್ನು ನೀಗಿಸಲು ಪರಿಸರ ಸ್ನೇಹಿ ಕಿರು ಅಣೆಕಟ್ಟುಗಳನ್ನು ನಿರ್ಮಿಸಲು 1.36 ಕೋಟಿ ರೂ. ಮೀಸಲಿಡಲಾಗಿದೆ. ಕರಾವಳಿ ಪ್ರದೇಶದ ಜನರ ಜೀವನೋಪಾಯಕ್ಕೆ ಸಹಕಾರಿ ಯಾಗುವಂತಹ ಮೀನು ಕಾರ್ಮಿಕರ ಗ್ರೂಪ್‌ಗ್ಳಿಗೆ ಬಲೆ ನೀಡುವುದಕ್ಕೆ ಮೊತ್ತ ಮೀಸಲಿಟ್ಟಿರುವುದರಿಂದ ಈ ವಲಯಕ್ಕೆ ನವಚೇತನ ಲಭಿಸಲಿದೆ. ಜಿಲ್ಲೆಯ ಹಾಲು ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಲು ಹೈನು ಕೃಷಿಕರಿಗೆ ಆರ್ಥಿಕ ಸಹಾಯವನ್ನು ನೀಡುವ ಯೋಜನೆಗಾಗಿ 1.40 ಕೋಟಿ ರೂ. ಮೀಸಲಿಡಲಾಗಿದೆ.

ಬದಿಯಡ್ಕದಲ್ಲಿ ಕೋಳಿ ಮರಿಗಳ ಉತ್ಪಾದನೆಯ ಉದ್ದೇಶದೊಂದಿಗೆ “ಹಾಚ್ಚರಿ’ ಸ್ಥಾಪಿಸುವುದಕ್ಕೆ 75 ಲಕ್ಷ ರೂ. ಮೀಸಲಿಡಲಾಗಿದೆ. ಬರಗಾಲದ ಹಿಡಿತದಲ್ಲಿರುವ ಜಿಲ್ಲೆಯ ಪ್ರದೇಶದ ರಕ್ಷಣಾ ಕಾರ್ಯಗಳನ್ನು ಕಾರ್ಯಗತಗೊಳಿಸುವುದರ ಅಂಗವಾಗಿ ದೀರ್ಘ‌ಕಾಲದ ಯೋಜನೆಗಳಿಗೆ ಜಿಲ್ಲಾ ಪಂಚಾಯತ್‌ ರೂಪು ನೀಡುವುದು. ಕಾರಡ್ಕ, ಕಾಸರಗೋಡು, ಮಂಜೇಶ್ವರ ಬ್ಲಾಕ್‌ಗಳ ಜಲಸಂರಕ್ಷಣೆ ಕಾರ್ಯಗಳಿಗೆ ವಿಶೇಷ ಜಂಟಿ ಯೋಜನೆಯ ಜತೆಗೆ ಜಿಲ್ಲೆಯ ಹಲವು ಪ್ರದೇಶಗಳ ಬಾವಿಗಳ ರೀಚಾರ್ಜಿಂಗ್‌ ಸಹಿತ ಇತರ ಜಲ ಸಂರಕ್ಷಣೆ ಯೋಜನೆಗಾಗಿ 1.5 ಕೋಟಿ ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ ಕ್ಯಾನ್ಸರ್‌ ಪ್ರತಿರೋಧ ಕಾರ್ಯಗಳಿಗೆ ಶಕ್ತಿ ತುಂಬಲು ಜಿಲ್ಲಾ ಪಂಚಾಯತ್‌ ಜಾರಿಗೊಳಿಸಿದ “ಕಾಸರಗೋಡು – ಬಿ ಪೊಸಿಟೀವ್‌’ ಎಂಬ ಯೋಜನೆಯನ್ನು ಯಶಸ್ವಿಗೊಳಿಸಲು ಮೊತ್ತವನ್ನು ಮೀಸಲಿಡಲಾಗಿದೆ. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಜಿಲ್ಲಾ ಮಟ್ಟದ ಮೋನಿಟರಿಂಗ್‌ ವ್ಯವಸ್ಥೆಯನ್ನು ಇನ್ನಷ್ಟು ಯಶಸ್ವಿಗೊಳಿಸಲಾಗುವುದು.

ಎಂಡೋಸಲ್ಫಾನ್‌ ದುರಂತವನ್ನನು ಭವಿಸುವವರ ಕ್ಷೇಮ ಕಾರ್ಯಗಳನ್ನು ಈ ವರ್ಷದಲ್ಲಿಯೂ ಮುಂದುವರಿಸಲಾಗುವುದು. ಮಾನಸಿಕ ಕಾಯಿಲೆಯಿಂದ ಬಳಲುವವರನ್ನು ಮುಖ್ಯ ವಾಹಿನಿಗೆ ಕರೆತರಲು “ಕಾಸರಗೋಡು ಜಿಲ್ಲಾ ಅಂಗವಿಕಲ ಸ್ನೇಹಿ ಸಮಗ್ರ ಯೋಜನೆ’ ಗಾಗಿ ಮೊತ್ತವನ್ನು ಮೀಸಲಿಡಲಾಗಿದೆ. ಜಿಲ್ಲೆಯ ಹೈಸ್ಕೂಲ್‌, ಹೈಯರ್‌ ಸೆಕೆಂಡರಿ ಶಾಲೆಗಳಲ್ಲಿ ಮೂಲ ಸೌಕರ್ಯವನ್ನು ಉತ್ತಮಗೊಳಿಸಲು, ಕುಡಿಯುವ ನೀರು, ಶುಚಿತ್ವ, ಸೊತ್ತು ಸಂರಕ್ಷಣೆಗಾಗಿ ಮೊತ್ತವನ್ನು ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ವಿಭಾಗದ ಯುವಜನರ ಕಲಾತ್ಮಕವಾದ ಸಾಮರ್ಥ್ಯವನ್ನು ಪ್ರೋತ್ಸಾಹಿಸುವುದಕ್ಕೆ ಕಲಾ ಸಮಿತಿಗಳನ್ನು ರಚಿಸಲು ಮೊತ್ತ ಮೀಸಲಿಡಲಾಗಿದೆ. ಜಿಲ್ಲೆಯ ಕ್ರೀಡಾ ರಂಗವನ್ನು ಬಲಪಡಿಸಲು ಆಟದ ಬಯಲುಗಳನ್ನು ನಿರ್ಮಿಸುವುದಕ್ಕಾಗಿ ಯೋಜನೆಗಳನ್ನು ಆಯೋಜಿಸಲಾಗಿದೆ. ಡಯಟ್‌ನಲ್ಲಿ ಇತಿಹಾಸ ಮ್ಯೂಸಿಯಂ ಸ್ಥಾಪಿಸುವುದಕ್ಕೆ ಮೊತ್ತವನ್ನು ಮೀಸಲಿಡಲಾಗಿದೆ. ವಸತಿ ರಹಿತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ 2000 ದಷ್ಟು ವಸತಿಗಳ ನಿರ್ಮಾಣಕ್ಕಾಗಿ 8 ಕೋಟಿ ರೂ. ಮೀಸಲಿರಿಸಿದೆ. ಸಾರಿಗೆ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ರಸ್ತೆಗಳ ಗುಣಮಟ್ಟವನ್ನು ಉತ್ತಮ ಪಡಿಸಲು ಮೊತ್ತ ಮೀಸಲಿಡಲಾಗಿದೆ.

Advertisement

ಮಹಿಳೆಯರಿಗಾಗಿ ಷೀ ಲಾಂಜ್‌  
ಮಹಿಳಾ ಪ್ರಯಾಣಿಕರಿಗೆ ಪ್ರಯಾಣದ ಸಂದರ್ಭದಲ್ಲಿ ಮುಖ್ಯ ನಗರೀಕರಣ ಕೇಂದ್ರಗಳಲ್ಲಿ ವಿಶ್ರಾಂತಿ ಪಡೆಯಲು ಟಾಯ್ಲೆಟ್‌, ವಿಶ್ರಾಂತಿ ಕೊಠಡಿ, ಸ್ತನ್ಯಪಾನ ಕೇಂದ್ರ ಮುಂತಾದವುಗಳ ನಿರ್ಮಾಣಕ್ಕಾಗಿ 75 ಲಕ್ಷ ರೂ., ಜಿಲ್ಲೆಯ ಪ್ರಮುಖ ಶಾಲೆಗಳ ಹೆಣ್ಣು ಮಕ್ಕಳಿಗೆ ವಿಶ್ರಾಂತಿ ಪಡೆಯಲು ಪ್ರತ್ಯೇಕ ಸೌಕರ್ಯ ವೊದಗಿಸಲು ಸ್ತಿÅà ಸ್ನೇಹಿ ಕೇಂದ್ರ ನಿರ್ಮಾಣಕ್ಕೆ 85 ಲಕ್ಷ ರೂ., ಜಿಲ್ಲೆಯ ಹೈಸ್ಕೂಲ್‌, ಹೈಯರ್‌ ಸೆಕೆಂಡರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಸೌಕರ್ಯಕ್ಕಾಗಿ ನಾಪ್‌ಕಿನ್‌ ವೆಂಡಿಂಗ್‌ ಮಿಷನ್‌ ಸ್ಥಾಪಿಸಿದ ಸ್ಥಳಗಳಲ್ಲಿ ಇನ್ಸಿನೇಟರ್‌ ಸ್ಥಾಪನೆಗಾಗಿ 20 ಲಕ್ಷ ರೂ., ಮಹಿಳೆಯರ ಉದ್ಯೋಗ ವರಮಾನ ಹೆಚ್ಚಳಕ್ಕಾಗಿ ಸೊÌàದ್ಯೋಗ ಉದ್ದಿಮೆಗಳನ್ನು ಪ್ರಾರಂಭಿಸಲು 10 ಲಕ್ಷ ರೂ.ಯನ್ನು ಮೀಸಲಿಡಲಾಗಿದೆ.ಬಜೆಟ್‌ ಅಧಿವೇಶನದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ.ಬಶೀರ್‌ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.

ಜಲಜೀವನ 
ತೋಡುಗಳಲ್ಲಿ ಚೆಕ್‌ ಡ್ಯಾಂ ನಿರ್ಮಾಣ, ಕಲ್ಲಿನ ತಡೆಗೋಡು, ತೆಂಗಿನ ಬುಡ ಬಿಡಿಸುವುದು, ಮಳೆ ನೀರಿನ ಹೊಂಡ ನಿರ್ಮಾಣ, ಬಾವಿ ರಿಚಾರ್ಜಿಂಗ್‌, ಜೈವಿಕ ಬೇಲಿ, ಅರಣ್ಯೀಕರಣ, ಹುಲ್ಲು ನೆಟ್ಟು ಬೆಳೆಸುವುದು, ಕೆರೆ, ತೋಡು, ಜಲ ಸಂರಕ್ಷಣೆ, ಪುನರುಜಿcàವನ, ನಿರ್ಮಾಣಗಳನ್ನು ಪೂರ್ತಿಗೊಳಿಸುವುದು, ಬರ ರಹಿತ ಜಿಲ್ಲೆಯನ್ನಾಗಿ ಬದಲಾಯಿಸುವ “ಜಲ ಜೀವನ’ ಯೋಜನೆಗಾಗಿ 50 ಲಕ್ಷ ರೂ. ಮೀಸಲಿಡಲಾಗಿದೆ.

ಜಿಲ್ಲೆಯ ತೃತೀಯ ಲಿಂಗಿಯರನ್ನು ಪತ್ತೆಹಚ್ಚಿ ಅವರಿಗೆ ಸೊÌàದ್ಯೋಗ ಉದ್ದಿಮೆ ಯನ್ನು ಪ್ರಾರಂಭಿಸಲು ನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಲು 5 ಲಕ್ಷ ರೂ., ಕ್ಯಾನ್ಸರ್‌ ಮುಕ್ತ ಜಿಲ್ಲೆ ರಾಜ್ಯದಲ್ಲೇ ಪ್ರಥಮವಾಗಿ ನೂತನ ಯೋಜನೆಯಾಗಿದೆ. ಇದಕ್ಕಾಗಿ 15ಲಕ್ಷ ರೂ. ಮೀಸಲಿಡಲಾಗಿದೆ.

ಯಾರೂ ಗಮನಿಸದೆ ಇರುವ ವೃದ್ಧರಿಗೆ ಉತ್ತಮ ಆಹಾರ ನೀಡಿ ಆರೋಗ್ಯವನ್ನು ಸಂರಕ್ಷಿಸಲು ವೃದ್ಧರಿಗೆ ಪೌಷ್ಠಿಕ ಆಹಾರ ಯೋಜನೆಗಾಗಿ 40 ಲಕ್ಷ ರೂ. ಮೀಸಲಿರಿದೆ.

ಮಾಲಿನ್ಯ ಮುಕ್ತ ಕಾಸರಗೋಡು
ಸಂಪೂರ್ಣ ಮಾಲಿನ್ಯ ರಹಿತ ಜಿಲ್ಲೆಗಾಗಿ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿಯೂ ಎಂ.ಸಿ.ಎಫ್‌, ಸ್ಥಾಪನೆ, ಬ್ಲಾಕ್‌ಗಳನ್ನು ಕೇಂದ್ರೀಕರಿಸಿ ಆರ್‌.ಆರ್‌.ಎಫ್‌. ಸ್ಥಾಪನೆ, ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿಯೂ ಹಸಿರು ಕ್ರಿಯಾ ಸೇನೆ ರಚನೆ, ಬ್ಲಾಕ್‌ಗಳನ್ನು ಕೇಂದ್ರೀಕರಿಸಿ ಪ್ಲಾಸ್ಟಿಂಗ್‌ ಶೆಡ್ಡಿಂಗ್‌ ಯೂನಿಟ್‌ ಸ್ಥಾಪನೆ ಮೊದಲಾದವುಗಳಿಗಾಗಿ 80 ಲಕ್ಷ ರೂ. ಮೀಸಲಿಡಲಾಗಿದೆ.

ಪರಿಶಿಷ್ಟ ವಿಭಾಗಕ್ಕೆ ಸೇರಿದ ಕೊರಗರ ಆರೋಗ್ಯ ಸಂರಕ್ಷಣೆಯನ್ನು ಖಾತರಿಪಡಿಸಲು 3.99 ಲಕ್ಷ ರೂ., ಆಟದ ಬಯಲು, ಎಲ್ಲಾ ಪಂಚಾಯತ್‌ಗಳಲ್ಲಿ ಮಿನಿಸ್ಟೇಡಿಯಂ ನಿರ್ಮಾಣ, ಕ್ರೀಡಾ ತರಬೇತಿ ವೇದಿಕೆ, ತರಬೇತಿ ಶಿಬಿರಗಳನ್ನು ಆಯೋಜಿಸಿ ಜಿಲ್ಲೆಗೆ ಉತ್ತಮ ಕ್ರೀಡಾ ಸಂಸ್ಕೃತಿಯನ್ನು ರಚಿಸಲು 30 ಲಕ್ಷ ರೂ. ಕಾದಿರಿಸಲಾಗಿದೆ. ಮಕ್ಕಳನ್ನು ದೀರ್ಘಾವಧಿ ದೃಷ್ಟಿಕೋನದಿಂದ ಬೆಳೆಸುವುದು, ಎಲ್ಲಾ ಪಂಚಾಯತ್‌ಗಳಲ್ಲಿಯೂ ಬಾಲ ಸ್ನೇಹಿ ಸೌಕರ್ಯವನ್ನೊದಗಿಸಲು 25 ಲಕ್ಷ ರೂ. ಮೀಸಲಿಡಲಾಗಿದೆ.

ಕಿರು ವಿಮಾನ ನಿಲ್ದಾಣ  
ಪೆರಿಯದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಾಥಮಿಕ ಕಾರ್ಯಗಳನ್ನು ಪ್ರಾರಂಭಿಸುವುದು, ವಾಯುಯಾನ ರಂಗದಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರಥಮ ಉದ್ಯಮ-ಪ್ರವಾಸೋದ್ಯಮ ಕೈಗಾರಿಕಾ ವಲಯದಲ್ಲಿ ಮಹತ್ವದ ಪ್ರಗತಿಯನ್ನುಂಟುಮಾಡಲು 5 ಲಕ್ಷ ರೂ. ಮೀಸಲಿರಿಸಲಾಗಿದೆ.

ಕಾಟಾಚಾರದ ಬಜೆಟ್‌ : ಶ್ರೀಕಾಂತ್‌
ಕಾಸರಗೋಡು ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ ಮುಂಗಡಪತ್ರ ಕಾಟಾಚಾರದ ಬಜೆಟ್‌ ಎಂದು ಬಿಜೆಪಿಯ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್‌ ಹೇಳಿದರು. ಜಿಲ್ಲಾ ಪಂಚಾಯತ್‌ ಯೋಜಿಸಿರುವ ಏರ್‌ಸ್ಟ್ರಿಪ್‌ ಯೋಜನೆ ಸಾಕಾರಗೊಳ್ಳುವಂತಹದಲ್ಲ. ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡದೆ ದುಬಾರಿ ಏರ್‌ಸ್ಟ್ರಿಪ್‌ನಂತಹ ಯೋಜನೆಗಳು ಜನರನ್ನು ಮರುಳ‌ುಗೊಳಿಸುವಂತಹದ್ದು ಎಂದಿದ್ದಾರೆ.

ಅಂಗೈಯಲ್ಲಿ ಅರಮನೆ : ಡಾ|ವಿ.ಪಿ.ಪಿ. ಮುಸ್ತಫ
ಬಜೆಟ್‌ ಪ್ರಸ್ತಾವನೆಗಳಲ್ಲಿ ಉದ್ಯೋಗ ಕಲ್ಪಿಸಲು ಯಾವುದೇ ಯೋಜನೆಗಳನ್ನು ಹಾಕಿಕೊಳ್ಳದೆ ಕನಸುಗಳನ್ನು ಕಟ್ಟಿಕೊಡಲಾಗಿದೆ.ಈ ಕನಸುಗಳು ಸಾಕಾರಗೊಳ್ಳುವಂತಹದಲ್ಲ. ಜಿಲ್ಲಾ ಪಂಚಾಯತ್‌ನಿಂದ ಸಾಧ್ಯವಾಗುವ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಎಷ್ಟು ಸಾಧ್ಯವೋ ಅಷ್ಟು ಯೋಜನೆಗಳನ್ನು ರೂಪಿಸಬೇಕೇ ಹೊರತು ಈ ಬಜೆಟ್‌ ಪ್ರಸ್ತಾಪಗಳಲ್ಲಿ ಕೈಗೂಡಲು ಸಾಧ್ಯವಿಲ್ಲದ ಯೋಜನೆಗಳನ್ನು ಮಂಡಿಸಿ ನಿರಾಸೆಯನ್ನು ನೀಡಿದೆ ಎಂದು ಡಾ|ವಿ.ಪಿ.ಪಿ.ಮುಸ್ತಫ ಹೇಳಿದರು.

ಚಿತ್ರ : ಶ್ರೀಕಾಂತ್‌ ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next