Advertisement
8 ಮಂದಿ ಗುಣಮುಖಇದೇ ವೇಳೆ 8 ಮಂದಿ ಗುಣಮುಖರಾಗಿದ್ದಾರೆ. ಕಣ್ಣೂರು ಜಿಲ್ಲೆಯಲ್ಲಿ 6, ಇಡುಕ್ಕಿ ಜಿಲ್ಲೆಯಲ್ಲಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ವಯನಾಡಿನಲ್ಲಿ ಕೊರೊನಾ ಪಾಸಿಟಿವ್ ವರದಿಯಾಗದಿರುವ ಕಾರಣ ಈ ತನಕ ಹಸುರು ವಲಯದಲ್ಲಿದ್ದ ವಯನಾಡ್ ಹೊಸ ಪ್ರಕರಣದಿಂದಾಗಿ ಕಿತ್ತಳೆ ವಲಯಕ್ಕೆ ಜಾರಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ವರೆಗೆ ಕೇರಳದಲ್ಲಿ 499 ಮಂದಿಗೆ ಸೋಂಕು ಬಾಧಿಸಿದ್ದು, ಪ್ರಸ್ತುತ 96 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ 21,894 ಮಂದಿ ನಿಗಾದಲ್ಲಿದ್ದಾರೆ. ಶನಿವಾರ ವಿವಿಧ ಆಸ್ಪತ್ರೆಗಳಿಗೆ ಶಂಕಿತ 80 ಮಂದಿಯನ್ನು ದಾಖಲಿಸಲಾಗಿದೆ. ಈ ತನಕ 31,183 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 30,358 ನೆಗೆಟಿವ್ ಆಗಿವೆ.
ಲಾಕ್‌ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 26 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 30 ಮಂದಿಯನ್ನು ಬಂಧಿಸಿ, 7 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವೆಳ್ಳರಿಕುಂಡ್, ಮೇಲ್ಪರಂಬ ಠಾಣೆಗಳಲ್ಲಿ ತಲಾ 4, ಮಂಜೇಶ್ವರ, ಚಿತ್ತಾರಿಕಲ್‌ನಲ್ಲಿ ತಲಾ 3, ವಿದ್ಯಾನಗರ, ನೀಲೇಶ್ವರ, ಚಂದೇರ, ಬೇಡಗಂ ಅಂಬಲತ್ತರಗಳಲ್ಲಿ ತಲಾ 2, ಕಾಸರಗೋಡು, ಚೀಮೇನಿ, ರಾಜಪುರಂ ಠಾಣೆಗಳಲ್ಲಿ ತಲಾ 1 ಪ್ರಕರಣ ದಾಖಲಾಗಿವೆ. ಜಿಲ್ಲೆಯಲ್ಲಿ ಈ ವರೆಗೆ 2,013 ಪ್ರಕರಣಗಳು ದಾಖಲಾಗಿವೆ. 2,529 ಮಂದಿಯನ್ನು ಬಂಧಿಸಿ, 830 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.