Advertisement
ಈಗಾಗಲೇ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸೋಮವಾರ ‘ಜಲ ಶಕ್ತಿ ಅಭಿಯಾನ’ಕ್ಕೆ ಚಾಲನೆ ನೀಡಿದ್ದು, ಈ ಅಭಿಯಾನದ ಮೂಲಕ ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರ ಜಲಮೂಲಗಳ ಪುನಃಶ್ಚೇತನ, ನೀರಿನ ಮರುಬಳಕೆ, ಜಲಾನಯನ ಅಭಿವೃದ್ಧಿ ಹಾಗೂ ಅರಣ್ಯೀಕರಣ ನಡೆಯಲಿದೆ. ಸೆ. 15ರ ವರೆಗೆ ದೇಶದ 256 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಇದರಲ್ಲಿ ಕಾಸರ ಗೋಡು ಮತ್ತು ಪಾಲ್ಗಾಟ್ ಜಿಲ್ಲೆ ಒಳಗೊಂಡಿದೆ.
Related Articles
Advertisement
ಕಾಸರಗೋಡು ಜಿಲ್ಲೆಯ ಉಸ್ತುವಾರಿ ವಹಿಸಿರುವ ಅಧಿಕಾರಿಗಳಿಗೆ ನೆರವಾಗಲು ಆಯಾ ಜಿಲ್ಲಾಡಳಿತ ಕೂಡ ಇಬ್ಬರು ಸದಸರ್ಯನ್ನು ಈ ಕೆಲಸಕ್ಕೆ ನೇಮಕ ಮಾಡಬೇಕಾಗಿದೆ. ಈ ಇಬ್ಬರು ಸದಸ್ಯರು ಕೇಂದ್ರ ತಂಡದೊಂದಿಗೆ ಕೈಜೋಡಿಸಲಿದ್ದಾರೆ.
ಪ್ರಧಾನಿಯಾಗಿ ಎರಡನೇ ಭಾರಿ ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ ದೇಶದ ಜನತೆಗೆ ಕಳೆದ ರವಿವಾರವಷ್ಟೇ ಕರೆ ನೀಡಿದ್ದರು.
ನೀರಿಗಾಗಿ ಹಾಹಾಕಾರ
256 ಜಿಲ್ಲೆಗಳ 1,598 ವಲಯಗಳನ್ನು ಕೇಂದ್ರೀಕರಿಸಿ ಜಲ ಸಂರಕ್ಷಣೆ ಕೈಗೊಳ್ಳುವ ಯೋಜನೆಯಾಗಿರುವ ಜಲಶಕ್ತಿ ಅಭಿಯಾನದಿಂದ ದೇಶದಲ್ಲಿ ತೀವ್ರವಾಗಿ ನೀರಿನ ಅಭಾವ ಎದುರಿಸುತ್ತಿರುವ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಅಗತ್ಯದ ಕ್ರಮ ಸಾಕಾರಗೊಳ್ಳಲಿದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ನೀರಿನ ಸಮಸ್ಯೆ ತೀವ್ರ ಬಿಗಡಾಯಿಸಿದ್ದು, ನೀರಿಗಾಗಿ ಹಾಹಾಕಾರವಿದೆ. ಈ ವರ್ಷ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಭಾರೀ ಕುಸಿದಿದ್ದು, ಕಳೆದ ವರ್ಷ ಈ ಕಾಲಘಟ್ಟದಲ್ಲಿ ಲಭಿಸಿದ ಮಳೆಯ ಶೇ.30 ಕೂಡಾ ಈ ಬಾರಿ ಲಭಿಸಿಲ್ಲ ಎಂದು ಅಂದಾಜಿಸಲಾಗಿದೆ.