ಕೇರಳ ರಾಜ್ಯದಲ್ಲಿ ರವಿವಾರ 15 ಪ್ರಕರಣ ದೃಢವಾಗಿದ್ದು, ರಾಜ್ಯದಲ್ಲಿ ಈ ವರೆಗೆ ಒಟ್ಟು 67 ಮಂದಿಯಲ್ಲಿ ಸೋಂಕು ದೃಢವಾಗಿದೆ.
Advertisement
ರಾಜ್ಯದಲ್ಲಿ ಕೋವಿಡ್ 19 ಸೋಂಕಿನಿಂದ ನಿಗಾದಲ್ಲಿರುವವರ ಸಂಖ್ಯೆ 762ಕ್ಕೆ ಏರಿದೆ. ಆಸ್ಪತ್ರೆಗಳಲ್ಲಿ 41 ಮಂದಿ ನಿಗಾದಲ್ಲಿದ್ದು, ಇನ್ನುಳಿದವರು ಮನೆಗಳಲ್ಲಿದ್ದಾರೆ.
Related Articles
Advertisement
ಕಾಸರಗೋಡಿನಲ್ಲಿ 144 ಸೆಕ್ಷನ್ ಜಾರಿಕಾಸರಗೋಡು: ಕೋವಿಡ್ 19 ವೈರಸ್ ಹರಡುತ್ತಿರುವ ಹಿನ್ನೆಲೆ ಯಲ್ಲಿ ಕಾಸರಗೊಂಡು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಆದೇಶ ಹೊರಡಿಸಿದ್ದಾರೆ. ರವಿವಾರ ರಾತ್ರಿ 9ರಿಂದ ಜಾರಿಗೆ ಬಂದಿದ್ದು ಮುಂದಿನ ಆದೇಶ ಬರುವ ತನಕ ಸೆಕ್ಷನ್ ಜಾರಿಯಲ್ಲಿರುವುದು. ವ್ಯಾಪಾರ ಸಂಸ್ಥೆಗಳು, ಬಾರ್ಬರ್ ಅಂಗಡಿಗಳು, ಬ್ಯೂಟಿ ಪಾರ್ಲರ್‌ಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಬಾರದು. ಅನಗತ್ಯ ಪ್ರಯಾಣ ಮಾಡಬಾರದು ಎಂದು ಸೂಚಿಸಲಾಗಿದೆ. ಬೆಳಗ್ಗೆ 11ರಿಂದ ಸಂಜೆ 5 ಗಂಟೆಯ ವರೆಗೆ ಹಾಲು, ಪೆಟ್ರೋಲ್ ಬಂಕ್, ಮೆಡಿಕಲ್ ಅಂಗಡಿಗಳು, ರೇಶನ್ ಅಂಗಡಿಗಳ ಸಹಿತ ಅಗತ್ಯ ವಸ್ತುಗಳ ಅಂಗಡಿಗಳು ಕಾರ್ಯಾಚರಿಸಲಿವೆ. 5 ಸಹಾಯವಾಣಿ
ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ 5 ಹೆಲ್ಪ್ಲೈನ್ 24 ತಾಸು ಲಭ್ಯವಾಗಲಿವೆ. ಕೋವಿಡ್ 19 ಸೋಂಕು ಸಂಬಂಧ ಎಲ್ಲ ಸಹಾಯಗಳಿಗೆ ಇವನ್ನು ಸಂಪರ್ಕಿಸಬಹುದು. ರೋಗಬಾಧೆಯ ಶಂಕೆಯಿದ್ದಲ್ಲಿ ಆಸ್ಪತ್ರೆಗೆ ನೇರವಾಗಿ ಭೇಟಿ ನೀಡುವ ಬದಲು ಸಹಾಯ ಕೇಂದ್ರಕ್ಕೆ ಕರೆ ಮಾಡಿ ಸಲಹೆ ಪಡೆಯಬಹುದು. ದೂರವಾಣಿ ಸಂಖ್ಯೆಗಳು: 046 72209901, 046 72209902, 046 72209903, 046 72209904, 046 72209906