Advertisement

ಇಂದು-ನಾಳೆ ಕಾಸರಗೋಡು ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನ

01:20 AM Jan 19, 2019 | |

ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ.19 ಹಾಗೂ 20 ರಂದು ನೀರ್ಚಾಲು ಮಹಾಜನ ವಿದ್ಯಾಸಂ ಸ್ಥೆಯ ಆವರಣದಲ್ಲಿ ನಡೆಯಲಿದೆ.

Advertisement

ಕಾರ್ಯಕ್ರಮದ ಅಂಗವಾಗಿ ಜ.19 ರಂದು ಬೆಳಗ್ಗೆ 8.30ಕ್ಕೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ರಾಷ್ಟ್ರ ಧ್ವಜಾರೋ ಹಣಗೈಯ್ಯುವರು. ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್‌.ವಿ.ಭಟ್‌ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಗೈಯ್ಯವರು, ಎಸ್‌.ನಾರಾಯಣ ಭಟ್‌ ಕನ್ನಡ ಧ್ವಜಾರೋಹಣಗೈಯ್ಯುವರು. ಬಳಿಕ 9.30ಕ್ಕೆ ನೀರ್ಚಾಲು ವಿಷ್ಣುಮೂರ್ತಿ ನಗರದಿಂದ ಸಮ್ಮೇಳನದ ಸರ್ವಾ ಧ್ಯಕ್ಷರಾದ ಡಾ| ಪಿ. ಶ್ರೀಕೃಷ್ಣ ಭಟ್‌ ಅವರನ್ನು ವೈಭವೋಪೇತ ಮೆರವಣಿಗೆ ಯೊಂದಿಗೆ ಸಮ್ಮೇಳನ ನಗರಿಗೆ ಸ್ವಾಗತಿಸಲಾಗುವುದು. 

ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಮೆರವಣಿಗೆ ಉದ್ಘಾಟಿಸುವರು.ಬೆಳಗ್ಗೆ 10.30ರಿಂದ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಮನು ಬಳಿಗಾರ್‌ ಉದ್ಘಾಟಿ ಸುವರು. ಸಮ್ಮೇಳನದ ಅಧ್ಯಕ್ಷ ಡಾ.ಪಿ.ಶ್ರೀಕೃಷ್ಣ ಭಟ್‌ ಅಧ್ಯಕ್ಷತೆ ವಹಿಸು ವರು. ಶಾಸಕ ಎನ್‌.ಎ. ನೆಲ್ಲಿಕುನ್ನು ಪುಸ್ತಕ ಮಳಿಗೆ, ಜಿ.ಪಂ. ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್‌ ಅವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಬ್ಲಾ.ಪಂ. ಸದಸ್ಯ ಅವಿನಾಶ ರೈ, ಗ್ರಾ.ಪಂ.ಸದಸ್ಯ ಶಂಕರ ಡಿ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೆ. ಕೈಲಾಸಮೂರ್ತಿ, ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಡಾ| ರಮಾನಂದ ಬನಾರಿ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂ ದ್ರನಾಥ ಬಲ್ಲಾಳ್‌ ಕೆ.ಆರ್‌. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂ ಧಕ, ಸಮ್ಮೇಳನದ ಕಾರ್ಯಾಧ್ಯಕ್ಷ  ಜಯದೇವ ಖಂಡಿಗೆ, ಸಂಘಟನಾ ಸಮಿತಿ ಉಪಾಧ್ಯಕ್ಷ ವೆಂಕಟರಾಜ ಸಿ.ಎಚ್‌|, ಶಿವಪ್ರಕಾಶ್‌ ಎಂ.ಕೆ, ಮೀನಾಕ್ಷಿ ಎಚ್‌.ಎನ್‌., ವಿಶಾಲಾಕ್ಷಿ ಬಿ.ಕೆ ಮೊದಲಾದವರು ಉಪಸ್ಥಿತರಿರುವರು.

ಸಮ್ಮೇಳನದ ಅಧ್ಯಕ್ಷ ಡಾ.ಪಿ.ಶ್ರೀಕೃಷ್ಣ ಭಟ್‌ ಅವರ ಅವಲೋಕನ-ಸಾಹಿತ್ಯ ಶಾಸ್ತ್ರ ಸಮೀಕ್ಷೆ, ಹಿರಿಯ ಸಾಹಿತಿ ಡಾ.ಹರಿಕೃಷ್ಣ ಭರಣ್ಯ ಸಂಗ್ರಹಿಸಿರುವ ಹವಿಗನ್ನಡದ ಸವಿ ನಾಟಕಗಳು, ಪ್ರೊ| ವಿ.ಬಿ. ಅರ್ತಿಕಜೆ ಹಾಗೂ ಡಾ.ಹರಿಕೃಷ್ಣ ಭರಣ್ಯ ಸಂಪಾದಿಸಿರುವ ಹವ್ಯಕ ಹಾಡುಗಳ ಸಂಗ್ರಹ ತುಪ್ಪಶನ ಉಂಬಲೆ ಮತ್ತು ನಿವೃತ್ತ ಶಿಕ್ಷಕ ಎಂ.ತಿಮ್ಮಣ್ಣ ಭಟ್‌ ಧರ್ಮತ್ತಡ್ಕ ಬರೆದಿರುವ ಶ್ರೀಕೃಷ್ಣ ಪರಂಧಾಮ ಯಕ್ಷಗಾನ ಪ್ರಸಂಗ ಕೃತಿ ಹಾಗೂ ಕಾಟುಕುಕ್ಕೆ ಶಾಲಾ ವಿದ್ಯಾರ್ಥಿನಿ ಪ್ರಿಯ ಎಸ್‌. ಬರೆದಿರುವ ಪ್ರತಿಬಿಂಬ ಕವನ ಸಂಕಲನಗಳ ಬಿಡುಗಡೆ ಈ ಸಂದರ್ಭ ನಡೆಯಲಿದೆ. ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್‌. ವಿ. ಭಟ್‌ ಪ್ರಾಸ್ತಾವಿಕವಾಗಿ ಮಾತನಾಡುವರು.

Advertisement

ಅಪರಾಹ್ನ 1.30ಕ್ಕೆ ನೀರ್ಚಾಲು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 2 ರಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ರಾಜಾ ಸ್ವದಾಸ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಬಳಿಕ ಸಂಜೆ 5 ರಿಂದ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಧರ್ಮತ್ತಡ್ಕ ಶಾಲಾ ವಿದ್ಯಾರ್ಥಿಗಳ ಕೊಂಬು ಮೀಸೆ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ. ಸಂಜೆ 5.45 ರಿಂದ ನೃತ್ಯ ವೈವಿಧ್ಯ ನಡೆಲಿದೆ.

ಸಮ್ಮೇಳನದ ಅಧ್ಯಕ್ಷ, 
ಡಾ| ಪಿ.ಶ್ರೀಕೃಷ್ಣ ಭಟ್‌ 

12ನೇ ಗಡಿನಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುತ್ತಿರುವ ಡಾ.ಪಿ.ಶ್ರೀಕೃಷ್ಣ ಭಟ್‌ ಅವರು ಮೂಲತಃ  ಕುಂಬಾxಜೆ ಪುತ್ರೋಡಿಯವರು. ಪ್ರಾಥಮಿಕ ಶಿಕ್ಷಣವನ್ನು ಅಗಲ್ಪಾಡಿ ಶ್ರೀ ಅನ್ನಪೂ ರ್ಣೇಶ್ವರಿ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ ಡಾ| ಪಿ. ಶ್ರೀಕೃಷ್ಣ ಭಟ್‌, 1963ರಲ್ಲಿ ರಾಷ್ಟ್ರ ಭಾಷಾ ಪ್ರವೀಣ ಪದವಿ ಪಡೆದರು. ಬಳಿಕ ಧಾರವಾಡದ ಕರ್ನಾಟಕ ವಿವಿಯಿಂದ ಕನ್ನಡ ಬಿ.ಎ.ಹಾಗೂ ಎಂ.ಎ. ಪದವಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಿಂದ 1988ರಲ್ಲಿ ಪಿ.ಎಚ್‌.ಡಿ. ಪಡೆದರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸಂಶೋಧನಾ ವಿಭಾಗವನ್ನು 1990ರಲ್ಲಿ ಕಾರ್ಯಪ್ರವೃತ್ತ  ಗೊಳಿಸುವಲ್ಲಿ ಡಾ| ಪಿ. ಶ್ರೀಕೃಷ್ಣ ಭಟ್‌ ಅವರ ಶ್ರಮ ಮಹತ್ರವದ್ದು. 

ಕಲ್ಲಿಕೋಟೆ  ಹಾಗೂ    ಕಣ್ಣೂರು  ವಿವಿಗಳ ಕನ್ನಡ ಅಧ್ಯಯನ ಮಂಡಳಿಗಳಲ್ಲಿ ಅಧ್ಯಕ್ಷರಾಗಿ, ಸದಸ್ಯರಾಗಿ, ಕೌನ್ಸಿಲ್‌ ಸದಸ್ಯರಾಗಿ 2012ರ ವರೆಗೆ ಕಾರ್ಯಪ್ರವೃತ್ತ¤ ರಾಗಿದ್ದರು. 2007 ರಿಂದ 13ರ ವರೆಗೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಮಂಗಳೂರು, ಮೈಸೂರು, ಕರ್ನಾಟಕ, ಬೆಂಗಳೂರು, ಮಧು ರೈ ವಿವಿಗಳ ಕನ್ನಡ ಪರೀûಾ ಮಂಡ ಳಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಪ್ರೊ|ಪಿ.ಶ್ರೀಕೃಷ್ಣ ಭಟ್‌ರದು. ಕೇರಳ ಶಾಲಾ ಪಠ್ಯಪುಸ್ತಕ ರಚ ನಾ ಮಮಡಳಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾ ಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಸಂಪೂರ್ಣ ಸಾಕ್ಷ ರತಾ ಯೋಜನೆಯಡಿ ಕನ್ನಡ ಪಠ್ಯ ಪುಸ್ತಕ ರಚನಾ ಸಮಿತಿ, ಸಮತ್ವ ಪುಸ್ತಕ ರಚನಾ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next