Advertisement

ಗಮನ ಸೆಳೆಯುತ್ತಿರುವ “ಕಾಸರಗೋಡು ಕನೆಕ್ಟ್’ಆ್ಯಪ್‌

01:00 AM Mar 08, 2019 | Harsha Rao |

ಕಾಸರಗೋಡು: ಸರಕಾರಿ ಕಚೇರಿಗಳ ಕುರಿತು ಎಲ್ಲ ಮಾಹಿತಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾದ “ಕಾಸರಗೋಡು ಕನೆಕ್ಟ್’ ಆ್ಯಪ್‌ ಗಮನ ಸೆಳೆಯುತ್ತಿದೆ.
ಸರಕಾರಿ ಸೇವೆಗಳಿಗೆ, ಇನ್ನಿತರ ಅಗತ್ಯಗಳಿಗೆ ಸಿಬಂದಿ ಹೆಸರು, ಮೊಬೈಲ್‌ ನಂಬ್ರ, ಹುದ್ದೆ ಇತ್ಯಾದಿ ಈ ಆ್ಯಪ್‌ ಮೂಲಕ ಸಾರ್ವಜನಿಕರಿಗೆ ಲಭ್ಯವಾಗಲಿದೆ. 

Advertisement

ಅಲ್ಲದೆ ಸರಕಾರಿ ಸೇವೆಗಳಲ್ಲಿ ಸಾರ್ವಜನಿಕರು ತೃಪ್ತರೋ ಅಲ್ಲವೋ ಎಂಬ ವಿಚಾರ ಫೆೈವ್‌ಸ್ಟಾರ್‌ ರೇಟಿಂಗ್‌ ಸೌಲಭ್ಯ ಮೂಲಕ ದಾಖಲಿಸಬಹುದಾಗಿದೆ. ತೃಪ್ತಿಕರ ಅಲ್ಲದೇ ಇದ್ದಲ್ಲಿ ಜಿಲ್ಲಾ ಧಿಕಾರಿ ಅವರಿಗೆ ದೂರು ದಾಖಲಿಸಬಹುದಾಗಿದೆ. 

ಇದಕ್ಕಾಗಿ ಆ್ಯಪ್‌ನಲ್ಲಿ “ದೂರು’ ಎಂಬ ಆಪ್ಶನ್‌ ಒದಗಿಸಲಾಗಿದೆ. ಜತೆಗೆ ಸರಕಾರಿ ಸಿಬಂದಿ ಡ್ನೂಟಿ ವೇಳೆಯ ನಡವಳಿಕೆ ಅರಿತುಕೊಳ್ಳಲು, ಸಿಬಂದಿ ಕಚೇರಿಗೆ ಹಾಜರಾಗಿದ್ದಾರೋ ಎಂಬ ಬಗ್ಗೆ ತಿಳಿದುಕೊಳ್ಳುವುದಕ್ಕೆ ಜಿಲ್ಲಾಧಿಕಾರಿ ಅವರಿಗೆ ಈ ಆ್ಯಪ್‌ ಮೂಲಕ ಸಾಧ್ಯವಾಗಲಿದೆ. ಸಿಬಂದಿ ಕಚೇರಿಗೆ ತಲಪಿ ಯೂಸರ್‌ ಐ.ಡಿ., ಪಾಸ್‌ ವರ್ಡ್‌ ಬಳಸಿ ಆ್ಯಪ್‌ ತೆರೆಯುವ ಮೂಲಕ ಜಿಲ್ಲಾಧಿಕಾರಿ ಇವರನ್ನು ನಿರೀಕ್ಷಿಸಲು ಸಾಧ್ಯವಾಗುತ್ತದೆ.

ಕಾಸರಗೋಡು ಆ್ಯಪ್‌ ತರಬೇತಿ
ಜಿಲ್ಲಾಧಿಕಾರಿ ಕಚೇರಿಯ ವಿವಿಧ ಇಲಾಖೆಗಳ ಸಿಬಂದಿಗೆ “ಕಾಸರಗೋಡು ಕನೆಕ್ಟ್’ ಆ್ಯಪ್‌ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಉದ್ಘಾಟಿಸಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರಿ ಕಚೇರಿಗಳ ಕುರಿತಾದ ಎಲ್ಲ ಮಾಹಿತಿಗಳೂ ಸಾರ್ವಜನಿಕರಿಗೂ ತಿಳಿಯುವಂತೆ, ಜಿಲ್ಲೆಯ ಸರಕಾರಿ ನೌಕರರ ಕರ್ತವ್ಯ, ಅವಧಿಯ ಚಟುವಟಿಕೆಗಳನ್ನು ಗಮನಿಸುವ, ಸಿಬಂದಿ ಕಚೇರಿಯಲ್ಲಿ ಈ ಅವ ಧಿಯಲ್ಲಿ ಹಾಜರಿದ್ದರೋ ಇತ್ಯಾದಿ ವಿಚಾರಗಳಲ್ಲಿ ಕಾಸರಗೋಡು ಕನೆಕ್ಟ್ ಆ್ಯಪ್‌ ಪೂರಕವಾಗಲಿದೆ. 

Advertisement

ಆ್ಯಪ್‌ನ ಸಿ.ಇ.ಒ. ಅಭಿಲಾಷ್‌ ಸತ್ಯನ್‌ ತರಗತಿ ನಡೆಸಿದರು. ಹೆಚ್ಚುವರಿ ದಂಡನಾಧಿಕಾರಿ ಎನ್‌. ದೇವಿದಾಸ್‌, ಮಾಜಿಕ ನ್ಯಾಯ ಅಧಿಕಾರಿ ಬಿ. ಭಾಸ್ಕರನ್‌, ಜಿಲ್ಲಾ ಮಹಿಳಾ ಶಿಶು ಕಲ್ಯಾಣ ಅಧಿಕಾರಿ ಡೀನಾ ಭರತನ್‌, ಜೂನಿಯರ್‌ ವರಿಷ್ಠಾಧಿಕಾರಿ ವಿನೋದ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಕನೆಕ್ಟ್ ಆ್ಯಪ್‌ ಸಾಕಾರಗೊಳಿಸಿದವರು
ಸ್ಟಾರ್ಟ್‌ ಅಪ್‌ ಮಿಷನ್‌ ಸಂಸ್ಥೆ ಫೈನೆಕ್ಟ್Õ ಇನ್ನೋವೇಶನ್‌ ಕೇರಳ ಐಟಿ ಮಿಷನ್‌ನ ಸಹಕಾರದೊಂದಿಗೆ ಆ್ಯಪ್‌ ಸಿದ್ಧಪಡಿಸಲಾಗಿದೆ. 

ಉಳಿಯತ್ತಡ್ಕ ನಿವಾಸಿ ಅಭಿಲಾಷ್‌ ಸತ್ಯನ್‌, ಚಟ್ಟಂಚಾಲ್‌ ನಿವಾಸಿ ಆರ್‌.ಕೆ. ಷಿದಿನ್‌, ಚೆರ್ಕಳ ನಿವಾಸಿ ಜಿತ್ತು ಜೋಯಿ ಕಾಸರಗೋಡು ಕನೆಕ್ಟ್ ಆ್ಯಪ್‌ ಎಂಬ ಸಂಕಲ್ಪವನ್ನು ಸಾಕಾರಗೊಳಿಸಿದವರು.

Advertisement

Udayavani is now on Telegram. Click here to join our channel and stay updated with the latest news.

Next