Advertisement
ಕೊಲ್ಲಿ ರಾಷ್ಟ್ರಗಳಿಂದ ಆಗಮಿಸಿದ ಕಾರಡ್ಕ, ಅಜಾನೂರು, ಪಳ್ಳಿಕೆರೆ, ಚೆಂಗಳ, ಮಂಗಲ್ಪಾಡಿ, ವರ್ಕಾಡಿ ನಿವಾಸಿಗಳಿಗೆ ಮತ್ತು ಮಹಾರಾಷ್ಟ್ರದಿಂದ ಬಂದ ಮಂಗಲ್ಪಾಡಿ ನಿವಾಸಿಗೆ ಸೋಂಕು ಬಾಧಿಸಿದೆ. ಕಾಸರಗೋಡು ಮೆಡಿಕಲ್ ಕಾಲೇಜು ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 30 ವರ್ಷದ ಕಾಂಞಂಗಾಡ್ ನಿವಾಸಿ, ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 51 ವರ್ಷದ ಮಂಗಲ್ಪಾಡಿ ನಿವಾಸಿ ಗುಣಮುಖರಾಗಿದ್ದಾರೆ.
ಕೇರಳದಲ್ಲಿ ಶನಿವಾರ 127 ಮಂದಿಯಲ್ಲಿ ಕೋವಿಡ್ ದೃಢವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇದೇ ವೇಳೆ 57 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಶನಿವಾರ ಸೋಂಕು ಶಂಕಿತ 258 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 219 ಮಂದಿಯ ವಿರುದ್ಧ ಕೇಸು
ಜಿಲ್ಲೆಯಲ್ಲಿ ಶನಿವಾರ ಮಾಸ್ಕ್ ಧರಿಸದ 219 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.