Advertisement
ಕೇರಳ ರಾಜ್ಯದಲ್ಲಿ ಸೋಮವಾರ ಒಟ್ಟು 28 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ರೋಗ ಪೀಡಿತರ ಸಂಖ್ಯೆ 91ಕ್ಕೆ ಏರಿದೆ. ನಾಲ್ವರು ರೋಗ ಮುಕ್ತರಾಗಿದ್ದಾರೆ. 64,320 ಮಂದಿ ನಿಗಾದಲ್ಲಿದ್ದಾರೆ.
ರಾಜ್ಯದ ಎಲ್ಲ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಲಾಕ್‌ಡೌನ್ ಘೋಷಿಸಿರುವುದರಿಂದಾಗಿ ಯಾರೂ ಮನೆಯಿಂದ ಹೊರಗಿಳಿಯಬಾರದು. ಆವಶ್ಯಕತ ಸೇವೆಗಳಿಗೆ ವಿನಾಯಿತಿ ಇರಲಿದೆ. ಹೊಟೇಲ್‌ಗಳಲ್ಲಿ ಕುಳಿತು ಆಹಾರ ಸೇವನೆ ನಿಷೇಧಿಸಲಾಗಿದೆ. ಅಗತ್ಯವಿದ್ದಲ್ಲಿ ಹೋಮ್ ಡೆಲಿವರಿ ಕಲ್ಪಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜಧಾನಿ ತಿರುವನಂತಪುರದಲ್ಲಿ ಹೇಳಿದ್ದಾರೆ.