Advertisement
ಕಾಸರಗೋಡು-26, ಮಧೂರು -13, ಚೆಮ್ನಾಡ್-12, ಉದುಮ-11, ಕಾಞಂಗಾಡ್ -10, ಚೆಂಗಳ-8, ಮೊಗ್ರಾಲ್ ಪುತ್ತೂರು, ಪಳ್ಳಿಕ್ಕರೆ, ಅಜಾನೂರು – ತಲಾ 6, ಮುಳಿಯಾರು, ಕುಂಬಳೆ- ತಲಾ 5, ಎಣ್ಮಕಜೆ-3, ಪೈವಳಿಕೆ, ಪುತ್ತಿಗೆ, ಪಡನ್ನ, ನೀಲೇಶ್ವರ, ಕಯ್ಯೂರು ಚೀಮೇನಿ, ಕಾರಡ್ಕ, ಮಂಜೇಶ್ವರ, ಮಂಗಲ್ಪಾಡಿ – ತಲಾ 2, ಮಡಿಕೈ, ಕಿನಾನೂರು ಕರಿಂದಳಂ, ಪುಲ್ಲೂರು ಪೆರಿಯ, ಕುತ್ತಿಕೋಲು ತಲಾ -1 ಪ್ರಕರಣ ವರದಿಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 1,292 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸಂಬಂಧ 42 ಮಂದಿ ಮೃತಪಟ್ಟಿದ್ದಾರೆ.
ಕೇರಳದಲ್ಲಿ ಗುರುವಾರ 1,553 ಮಂದಿಗೆ ಸೋಂಕು ದೃಢವಾಗಿದೆ. 1,950 ಮಂದಿ ಗುಣಮುಖರಾಗಿದ್ದಾರೆ. 10 ಮಂದಿಯ ಸಾವಿಗೆ ಕೋವಿಡ್ ಕಾರಣ ಎನ್ನಲಾಗಿದೆ. ವಿದೇಶದಿಂದ ಬರುವವರಿಗೆ ನೋಂದಣಿ ಕಡ್ಡಾಯ
ವಿದೇಶದಿಂದ ಆಗಮಿಸುವವರು ಕೋವಿಡ್ 19 ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು. 14 ದಿನಗಳ ಕ್ವಾರಂಟೈನ್ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಗುರುವಾರ ನಡೆದ ಜಿಲ್ಲಾ ಮಟ್ಟದ ಕೊರೊನಾ ಕೋರ್ ಸಮಿತಿಯ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಅವರು ಈ ವಿಚಾರ ತಿಳಿಸಿದರು.
Related Articles
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ 61 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಆತಂಕ್ಕೆ ಕಾರಣವಾಗಿದೆ.
Advertisement
ಕೂಡಿಗೆ ಸೈನಿಕ ಶಾಲೆಯ 3 ವರ್ಷದ ಬಾಲಕಿ, ಗೋಣಿಕೊಪ್ಪ ಸೀಗೇತೋಡಿನ 10 ವರ್ಷದ ಬಾಲಕಿ, ಕುಶಾಲನಗರ ಕುಡ್ಲುರುವಿನ 10ರ ಬಾಲಕ ಮತ್ತು 11ರ ಬಾಲಕಿ, ಹೆಬ್ಟಾಲೆಯ ಕನಕ ಬಾಕ್‌ನ 17ರ ಬಾಲಕಿ, ಸುಂಟಿಕೊಪ್ಪ ಗುಂಡಿಗುಟ್ಟಿ ಪ್ರಾಥಮಿಕ ಶಾಲೆ ಬಳಿಯ 16ರ ಬಾಲಕಿ, ಚೆಟ್ಟಳ್ಳಿ ಶ್ರೀಮಂಗಲದ ಚೇರಳ ಮಸೀದಿ ಬಳಿಯ 11ರ ಬಾಲಕ, ವೀರಾಜಪೇಟೆ ಪಾಲಿಬೆಟ್ಟದ ಅತ್ತೂರು ನಲ್ಲಕೋಟೆ ಎಸ್ಟೇಟ್‌ನ 10 ವರ್ಷದ ಬಾಲಕಿಯಲ್ಲಿ ಸೋಂಕು ದೃಢವಾಗಿದೆ.