Advertisement
885 ಮಂದಿಗೆ ಸೋಂಕುಕೇರಳದಲ್ಲಿ ಶುಕ್ರವಾರ 885 ಮಂದಿಗೆ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 968 ಮಂದಿ ಗುಣಮುಖರಾಗಿದ್ದಾರೆ. ಸಂಪರ್ಕದ ಮೂಲಕ 724 ಮಂದಿಗೆ ರೋಗ ಬಾಧಿಸಿದೆ. ವಿದೇಶದಿಂದ ಬಂದ 64 ಮತ್ತು ಇತರ ರಾಜ್ಯಗಳಿಂದ ಬಂದ 68 ಮಂದಿಗೆ ರೋಗ ಬಾಧಿಸಿದೆ. ಓರ್ವ ವೈದ್ಯರ ಸಹಿತ 26 ಮಂದಿ ಆರೋಗ್ಯ ಕಾರ್ಯಕರ್ತರಿಗೂ ರೋಗ ಬಾಧಿಸಿದೆ.
ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಜಿಲ್ಲೆಯಲ್ಲಿ 163 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿದೆ. ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಜಿಲ್ಲೆಯಲ್ಲಿ 12 ಕೇಸ್ ದಾಖಲಿಸಲಾಗಿದೆ. ಮಧೂರು: 8 ಮಂದಿಗೆ ಪಾಸಿಟವ್
ಸಂಪರ್ಕ ಮೂಲಕ ಕೋವಿಡ್ ಸೋಂಕು ಅಧಿಕವಾಗಿರುವ ಮಧೂರು ಗ್ರಾಮ ಪಂಚಾಯತ್‌ನಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ಆರೋಗ್ಯ ಇಲಾಖೆ ಚುರುಕುಗೊಳಿಸಿದೆ. ಇಲ್ಲಿ ನಡೆಸಲಾದ ಆ್ಯಂಟಿಜೆನ್ ತಪಾಸಣೆ ಶಿಬಿರದಲ್ಲಿ 8 ಮಂದಿಗೆ ಕೋವಿಡ್ ಪಾಸಿಟವ್ ಪತ್ತೆಯಾಗಿದೆ.