Advertisement
ಈ ಮಧ್ಯೆ ನಾಲ್ಕೈದು ಗಂಟೆಗಳ ಅವಿರತ ಶ್ರಮದಿಂದ ರಕ್ಷಿಸಲ್ಪಟ್ಟ ಕಾರ್ಮಿಕನೊಬ್ಬ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಈ ಮೂಲಕ ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಸತತ 30 ಗಂಟೆಗಳ ಕಾರ್ಯಾಚರಣೆ ವೇಳೆ ಶುಕ್ರವಾರ ನಸುಕಿನ 3.30ರ ಸುಮಾರಿಗೆ ಅವಶೇಷಗಳಡಿ ಸುಭಾಷ್ ಎಂಬಾತ ಸಿಲುಕಿರುವುದು ಗೊತ್ತಾಯಿತು. ಆದರೆ, ಈತ ಹೆಚ್ಚು ಗಾಯಗೊಂಡಿರಲಿಲ್ಲ. ಸುಭಾಷ್ ರಕ್ಷಣೆಗಾಗಿ ಕ್ಷೀಪ್ರವಾಗಿ ಅವಶೇಷಗಳನ್ನು ತೆರವುಗೊಳಿಸಿದಾಗ ಯಾವುದೇ ಅಪಾಯವಿಲ್ಲದೇ ಹೊರಬಂದಿದ್ದಾನೆ. ಈತನ ಮಾಹಿತಿ ಮೇರೆಗೆ ಪಕ್ಕದಲ್ಲೇ ಬಿದ್ದಿದ್ದ ಹಜರತ್‌ಗಾಗಿ ಕಾರ್ಯಾಚರಣೆ ಮುಂದುವರಿಸಲಾಯಿತ್ತು. ಅಲ್ಲದೇ ಆತನ ಸ್ಥಿತಿ ಬಗ್ಗೆ ಸುಭಾಷ್ ವಿವರಿಸಿದ್ದ. ಹೀಗಾಗಿ ಹಜರತ್ ಸಿಲುಕಿರುವ ಜಾಗವನ್ನು ಕೊರೆದು ಸಿಬ್ಬಂದಿ ಕುಡಿಯಲು ನೀರು, ಗ್ಲೂಕೋಸ್ ಕೊಟ್ಟು ನಾವಿದ್ದೇವೆ ಎಂದು ಧೈರ್ಯ ತುಂಬಿದ್ದೇವು. ಹೀಗೆ ಐದು ಗಂಟೆಗಳ ಅವಿರತ ಶ್ರಮದಿಂದ 8.30ರ ಸುಮಾರಿಗೆ ಹಜರತ್‌ನನ್ನು ಹೊರತರಲಾಯಿತು. ಅಷ್ಟರಲ್ಲಿ ಈತನ ಸೊಂಟ ಮತ್ತು ಬೆನ್ನಿನ ಮೇಲೆ ಕಲ್ಲು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ