ಕಾಸರಗೋಡು: ಮಹತ್ವಾಕಾಂಕ್ಷೆಯ ಕಾಸರಗೋಡು – ಕೋವಳಂ ಜಲ ಸಾರಿಗೆ ಶೀಘ್ರವೇ ಆರಂಭಗೊಳ್ಳಲಿದ್ದು, ಈ ಮೂಲಕ ಹಲವು ವರ್ಷಗಳ ಕನಸು ನನಸಾಗಲಿದೆ. ಮುಂದಿನ ವರ್ಷ ಮೇ ತಿಂಗಳಲ್ಲಿ ಜಲ ಸಾರಿಗೆ ಆರಂಭಿಸಲು ಉದ್ದೇಶಿಸಲಾಗಿದೆ.
ತಿರುವನಂತಪುರದ ಕೋವಳಂನಿಂದ ಕಾಸರಗೋಡು ತನಕ ರಾಷ್ಟ್ರೀಯ ಜಲ ಸಾರಿಗೆ ಯೋಜನೆ ಮುಂದಿನ ವರ್ಷ ಮೇ ತಿಂಗಳೊಳಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಬಳಿಕ ಕ್ರೂಸ್‌ಗಳ, ಸ್ಪೀಡ್ ಬೋಟ್‌ಗಳ ಸಂಚಾರ ಶುರುವಾಗಲಿದೆ.
ಯೋಜನೆಯಂತೆ ಆರಂಭಿಕ ಹಂತದಲ್ಲಿ ತಿರುವನಂತಪುರದಿಂದ ಕೊಚ್ಚಿ ತನಕ ಕ್ರೂಸ್ ಹಡಗು ಮತ್ತು ವಾಟರ್ ಟ್ಯಾಕ್ಸಿಯಲ್ಲಿ ಪ್ರಯಾಣಿಸಬಹುದು. ಬಳಿಕ ಈ ಸೌಕರ್ಯ ಕಾಸರಗೋಡು ವರೆಗೆ ವಿಸ್ತರಣೆಯಾಗಲಿದೆ.
ಟಿ.ಎಸ್.ಕೆನಲ್(ಕಾಲುವೆ) ಗಳ ಮೂಲಕ ಜಲ ಸಾರಿಗೆ ಯೋಜನೆ ರೂಪಿತವಾಗಿದೆ. ಮಿನಿ ಕ್ರೂಸ್, ವಾಟರ್ ಟ್ಯಾಕ್ಸಿಗಳು ಇರಲಿವೆ. ಇವುಗಳ ವೇಗ ಗರಿಷ್ಠ 120 ಕಿ.ಮೀ. ನಿಗದಿಪಡಿಸಲಾಗುತ್ತದೆ.
ವಾಟರ್ ಟ್ಯಾಕ್ಸಿಯಲ್ಲಿ 15 ಮಂದಿಗೆ ಪ್ರಯಾಣಿಸಬಹುದು. ಮಿನಿ ಕ್ರೂಸ್‌ನಲ್ಲಿ 100 ಆಸನಗಳ ಸೌಕರ್ಯವಿರುತ್ತದೆ. ಅದು ಪೂರ್ಣ ಹವಾನಿಯಂತ್ರಿಯವಾಗಿದೆ. ಇವುಗಳೊಂದಿಗೆ 40 ಆಸನ ಗಳಿಗರುವ ಮಿನಿ ಕ್ರೂಸ್‌ಗಳೂ ಸಂಚರಿಸಲಿವೆ. ಇವುಗಳ ವೇಗ 15 ನಾಟಿಕಲ್ ಮೈಲ್ ಆಗಿರಲಿದೆ (27 ಕಿ.ಮೀ. ರೈಲು ಹಾಗು ಬಸ್‌ಗಳಲ್ಲಿ ತಲುಪುವ ಮುನ್ನವೇ ಜಲ ಸಾರಿಗೆಯಲ್ಲಿ ನಿಗದಿತ ಪ್ರದೇಶ ತಲುಪಲಿದೆ. ಇದರಿಂದ ಇಡೀ ಕೇರಳ ಕರಾವಳಿಯ ಸೌಂದರ್ಯ ಸವಿಯುವುದರೊಂದಿಗೆ ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. ಜತೆಗೆ ಸುಲಭ ಸಂಚಾರ ವ್ಯವಸ್ಥೆ ಲಭ್ಯವಾಗಲಿದೆ.