Advertisement
ಕಾಲಿಕಡವು ಮೈದಾನದಲ್ಲಿ ನಡೆಯುತ್ತಿರುವ ಗದ್ದಿಕ – 2018 ಸಾಂಸ್ಕೃತಿಕೋತ್ಸವಕ್ಕೆ ಹೆಚ್ಚುವರಿ ಆಕರ್ಷಿಸುವ ನಿಟ್ಟಿನಲ್ಲಿ ಇಲ್ಲಿನ ಪರಂಪರಾಗತ ವಿಶಿಷ್ಟ ವಿಶೇಷ ಆಹಾರ ಮಳಿಗೆ ಜನತೆಯನ್ನು ತನ್ನತ್ತ ಸೆಳೆಯುತ್ತಿದೆ. ಇಂದಿನ ಯಾಂತ್ರಿಕ ಯುಗದಲ್ಲಿ ನಾವು ಕೇಳಿಯೂ ಅರಿಯದ ಪೌಷ್ಠಿಕ ಆಹಾರ ವೈವಿಧ್ಯವನ್ನು ಉಣಮಡಿಸುವ ವಿಶಾಲ ಸ್ಟಾಲೊಂದು ಇಲ್ಲಿ ತೆರೆದುಕೊಂಡಿದೆ. ಪೂರ್ಣ ಅರಣ್ಯಜನ್ಯವಾದ ಸಾಮಾಗ್ರಿಗಳಿಂದ ತಯಾರಿಸಿದ ಖಾದ್ಯಗಳು, ಪೇಯಗಳು ಇಲ್ಲಿ ಲಭ್ಯವಿದೆ. ಜೊತೆಗೆ ಜನಪ್ರಿಯ ಖಾದ್ಯಗಳೂ ಕೊಂಚ ವಿಭಿನ್ನ ಶೈಲಿಯಲ್ಲಿ ತಯಾರಿಸಿ ಬಡಿಸಲಾಗುತ್ತಿದೆ.
Related Articles
ಅರಣ್ಯದಲ್ಲಿ ಸಿಗುವ ಕಾರಪ್ಪ್ ಎನ್ನುವ ಮರದ ಎಲೆಯೊಂದಿಗೆ ಸಿಗಡಿ ಮೀನು ಸೇರಿಸಿ ಕಲ್ಲಿನಲ್ಲಿ ಅರೆದು ತಯಾರಿಸುವ ಕಾರಪ್ಪ್ ತೋರನ್(ಪಲ್ಯ) ಜನಜನಿತವಾಗಿದೆ. ಇದರಲ್ಲಿ ಅನೇಕ ಪೋಷಕಾಂಶಗಳು ಅಡಗಿಕೊಂಡಿವೆ ಎನ್ನುತ್ತಾರು ಇಲ್ಲಿನ ಪರಿಣತರು.
Advertisement
ಇಲ್ಲಿದೆ ದೊಡ್ಡ ಜಾತಿಯ ಇರುವೆ ಚಣ್ಣಿ ಮಾಂಸಾಹಾರಿ ವಿಭಾಗದ ಜನತೆಗೆ ವಿಶೇಷ ಆಕರ್ಷಣೆ ನೀಡುವ ಇರುವೆಯಿಂದ ತಯಾರಿಸಿದ ಚಣ್ಣಿ ಈ ಮೇಳದಲ್ಲಿ ಬಹುಬೇಡಿಕೆಯನ್ನು ಹೊಂದಿದೆ. ಇದು ಪರಿಶಿಷ್ಟ ಜನಾಂಗದಲ್ಲಿ ಸೇರಿರುವ ಮಾವಿಲರ ವಿಶೇಷ ಆಹಾರ ಪದಾರ್ಥವಾಗಿದ್ದು ಪ್ರಕೃತಿದತ್ತ ಔಷಧವೂ ಆಗಿದೆ ಎಂದು ಮಳಿಗೆಯ ಪ್ರತಿನಿಧಿಗಳು ತಿಳಿಸುತ್ತಾರೆ. ಕಾಡಿನಿಂದ ಸಂಗ್ರಹಿಸುವ ದೊಡ್ಡ ಜಾತಿಯ ಕೆಂಪು ಇರುವೆಗಳನ್ನು ಸಂಗ್ರಹಿಸಿ, ತೊಳೆದು ಶುಚಿಗೊಳಿಸಿ, ಹಳೆ ಕ್ರಮದ ಅರೆಯುವ ಕಲ್ಲಿನಲ್ಲಿ ಅರೆಯಲಾಗುತ್ತದೆ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹುಳಿ, ಖಾರ ಬೆರೆಸಿ ಮತ್ತು ಅರೆದು ಚಣ್ಣಿ ತಯಾರಿಸಲಾಗುತ್ತದೆ. ಬೇಯಿಸಿದ ಯಾ ಸುಟ್ಟ ಗೆಣಸು, ಮರಗೆಣಸುಗಳೊಂದಿಗೆ ಯಾ ಇನ್ನಿತರ ತಿನಿಸುಗಳೊಂದಿಗೆ ಇದನ್ನು ಉಣಬಡಿಸಲಾಗುತ್ತದೆ.