ಕಾಸರಗೋಡು: ಅಂತಾರಾಷ್ಟ್ರೀಯ ಮಾದಕ ವಸ್ತು ಸಾಗಾಟ ಪ್ರಕರಣದಲ್ಲಿ ಉಪ್ಪಳ ನಿವಾಸಿ ಶಾಮೀಲಾದ ಬಗ್ಗೆ ಮಾಹಿತಿ ಲಭಿಸಿದೆ. ಇದರಂತೆ ಡಿಆರ್‌ಐ ಉಪ್ಪಳ ನಿವಾಸಿ ಆದಿಲ್‌ನನ್ನು ವಶಕ್ಕೆ ತೆಗೆದುಕೊಂಡಿದೆ.
ಗುಜರಾತ್‌ನಲ್ಲಿ ಭಾರೀ ಪ್ರಮಾಣದ ಮಾದಕ ವಸ್ತುವನ್ನು ಇತ್ತೀಚೆಗೆ ವಶಪಡಿಸಲಾಗಿತ್ತು. ಪಾಕಿಸ್ತಾನದಿಂದ ಬಂದ ಬೋಟ್‌ನಲ್ಲಿ ಮಾದಕ ವಸ್ತುವಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಗುಜರಾತ್ ಪೊಲೀಸರು ಕಾರ್ಯಾಚರಣೆ ನಡೆಸಿ ಬೋಟ್ ವಶಪಡಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಉಪ್ಪಳ ನಿವಾಸಿಯೂ ಮಾದಕ ವಸ್ತು ಸಾಗಾಟದಲ್ಲಿ ಶಾಮೀಲಾದ ಬಗ್ಗೆ ಸೂಚನೆ ಲಭಿಸಿತ್ತು.
ಇದರಂತೆ ಆದಿಲ್‌ನನ್ನು ಡಿಆರ್‌ಐ ಕಸ್ಟಡಿಗೆ ತೆಗೆದುಕೊಂಡಿತ್ತು. ಇದೇ ವೇಳೆ ಜೂ.1 ರಂದು ರಾತ್ರಿ 10.30 ಕ್ಕೆ ಡಿಆರ್‌ಐ ಕಸ್ಟಡಿಯಿಂದ ಈತ ಪರಾರಿಯಾಗಿದ್ದ. ಬಚ್ಚಲು ಕೊಠಡಿಗೆ ತೆರಳುವುದಾಗಿ ತಿಳಿಸಿ ಹೋದ ಆದಿಲ್ ಪರಾರಿಯಾಗಿದ್ದ. ಡಿಆರ್‌ಐ ತನಿಖೆ ನಡೆಸಿದರು ಆತ ಪತ್ತೆಯಾಗಲಿಲ್ಲ. ಕೂಡಲೇ ಅಧಿಕಾರಿಗಳು ಕಾಸರಗೋಡು, ಚಂದೇರ ಸಹಿತ ವಿವಿಧ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದರು.
ಇದರಂತೆ ಚಂದೇರ ಎಸ್.ಐ. ಲಕ್ಷ್ಮನ್ ನೇತೃತ್ವದಲ್ಲಿ ಪೊಲೀಸರು ಈತನನ್ನು ಗುರುವಾರ ಮುಂಜಾನೆ 2 ಗಂಟೆಗೆ ಚೆರ್ವತ್ತೂರು ಜಂಕ್ಷನ್‌ನಿಂದ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಬಂಧಿಸಲಾಯಿತು.
ಈತನನ್ನು ಪೊಲೀಸರು ಡಿಆರ್‌ಐ ಗೆ ಹಸ್ತಾಂತರಿಸಿದೆ.