Advertisement

ಕಾಸರಗೋಡು: 14 ಮಂದಿಗೆ ಸೋಂಕು

08:42 AM May 26, 2020 | mahesh |

ಕಾಸರಗೋಡು: ಜಿಲ್ಲೆಯಲ್ಲಿ 14 ಮಂದಿ ಸಹಿತ ಕೇರಳ ರಾಜ್ಯದಲ್ಲಿ ಸೋಮವಾರ 49 ಮಂದಿಗೆ ಕೋವಿಡ್ ವೈರಸ್‌ ಸೋಂಕು ದೃಢೀಕರಿಸಲಾಗಿದೆ. ಇವರಲ್ಲಿ 18 ಮಂದಿ ವಿದೇಶ, 25 ಮಂದಿ ಇತರ ರಾಜ್ಯಗಳಿಂದ ಮತ್ತು ಆರು ಮಂದಿಗೆ ಸಂಪರ್ಕದಿಂದ ಕೊರೊನಾ ಸೋಂಕು ಬಂದಿದೆ. ಇದೇ ಸಂದರ್ಭಚಿಕಿತ್ಸೆ ಪಡೆಯುತ್ತಿದ್ದ 12 ಮಂದಿ ರೋಗಮುಕ್ತರಾಗಿದ್ದಾರೆ.

Advertisement

ಕಾಸರಗೋಡು: 6 ಗುಣಮುಖ
ಜಿಲ್ಲೆಯಲ್ಲಿ ಸೋಮವಾರ 14 ಮಂದಿಗೆ ಕೋವಿಡ್‌ 19 ಸೋಂಕು ಖಚಿತವಾಗಿದ್ದು 6 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಸೋಂಕು ಖಚಿತಗೊಂಡವರಲ್ಲಿ 13 ಮಂದಿ ಮಹಾರಾಷ್ಟ್ರ ಮತ್ತು ಇನ್ನೊಬ್ಬರು ಕೊಲ್ಲಿ ರಾಷ್ಟ್ರದಿಂದ ಬಂದವರು. ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ 38 ವರ್ಷ ಪ್ರಾಯದ ಉದುಮ ನಿವಾಸಿಗೆ ಸೋಂಕು ಖಚಿತವಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ 8 ಮಂದಿ ಕುಂಬಳೆ, ಇಬ್ಬರು ವರ್ಕಾಡಿ ನಿವಾಸಿಗಳು, ವರ್ಕಾಡಿ, ಮೀಂಜ, ಉದುಮ, ಕುಂಬಾxಜೆ ನಿವಾಸಿಗಳಾದ ತಲಾ ಒಬ್ಬರಿಗೆ ರೋಗ ತಗಲಿದೆ. ಜಿಲ್ಲೆಯಲ್ಲಿ ಸೋಮವಾರ 6 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next