Advertisement
ವಿದ್ಯಾನಗರದಲ್ಲಿ ನ್ಯಾಯವಾದಿಯೋರ್ವರನ್ನು ಭೇಟಿಯಾಗಿ ನ್ಯಾಯಾಲಯಕ್ಕೆ ಹಾಜರಾಗಲು ತೆರಳುತ್ತಿದ್ದಾಗ ದಾರಿ ಮಧ್ಯೆ ಪ್ರಕರಣದ ತನಿಖೆ ನಡೆಸಲು ನೇಮಿಸಿದ್ದ ಮಹಿಳಾ ಪೊಲೀಸರು ವಿದ್ಯಾನಗರ ಪೊಲೀಸರ ನೆರವಿನೊಂದಿಗೆ ಆಕೆಯನ್ನು ಬಂಧಿಸಿದರು. ಆ ಬಳಿಕ ಸಚಿತಾಳನ್ನು ವಿದ್ಯಾನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಸಮಗ್ರ ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ಸೂಚನೆ ನೀಡಿದ್ದಾರೆ.
ಸಿಪಿಸಿಆರ್‌ಐ, ಕೇಂದ್ರೀಯ ವಿದ್ಯಾಲಯ, ಎಸ್.ಬಿ.ಐ, ಕರ್ನಾಟಕದ ಅಬಕಾರಿ, ಅರಣ್ಯ ಇಲಾಖೆ ಮೊದಲಾದೆಡೆ ಉದ್ಯೋಗ ಭರವಸೆ ನೀಡಿ ಹಣ ಪಡೆದು ವಂಚಿಸಲಾಗಿತ್ತೆಂದು ದೂರು ನೀಡಲಾಗಿತ್ತು. ಉಡುಪಿ ಕೇಂದ್ರೀಕರಿಸಿ ರಿಕ್ರೂಟಿಂಗ್ ಸಂಸ್ಥೆ ನಡೆಸುತ್ತಿರುವ ವ್ಯಕ್ತಿ ಮೂಲಕ ಸಚಿತಾ ವಂಚಿಸಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನೆರಡು ಕೇಸು ದಾಖಲು
ಕಾಸರಗೋಡು: ಸಚಿತಾ ರೈ ವಿರುದ್ಧ ಬದಿಯಡ್ಕ ಪೊಲೀಸರು ಇನ್ನೆರಡು ಕೇಸುಗಳನ್ನು ದಾಖಲಿಸಿದ್ದಾರೆ. ನೆಕ್ರಾಜೆ ಮಾವಿನಕಟ್ಟೆ ನಿವಾಸಿ ರಹಿಯಾನತ್ (35) ಮತ್ತು ಕುಂಬಾxಜೆ ಉಬ್ರಂಗಳದ ಡಯಾನ (27) ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.
Related Articles
Advertisement