Advertisement

Kasaragod: ವಂದೇ ಭಾರತ್‌ಗೆ ಕಲ್ಲೆಸೆತ, ಹಳಿಯಲ್ಲಿ ಕಲ್ಲಿರಿಸಿದ ಇಬ್ಬರ ಬಂಧನ

08:35 PM Nov 19, 2024 | Team Udayavani |

ಕಾಸರಗೋಡು: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಾಡಿಗೆ ಕಲ್ಲೆಸೆದು ಹಾನಿಗೊಳಿಸಿದ ಮತ್ತು ರೈಲು ಹಳಿಯಲ್ಲಿ ಕಲ್ಲಿರಿಸಿ ಬುಡಮೇಲುಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

Advertisement

ಕಲ್ಲಿಕೋಟೆ ರೈಲ್ವೇ ಸಿ.ಐ ಸುಧೀರ್‌ ಮನೋಹರ್‌, ಕಾಸರಗೋಡು ರೈಲ್ವೇ ಎಸ್‌.ಎಚ್‌.ಒ ರೆಜಿಕುಮಾರ್‌, ಎಸ್‌.ಐ ಎಂ.ವಿ.ಪ್ರಕಾಶನ್‌ ನೇತೃತ್ವದಲ್ಲಿ ಬಂಧಿಸಲಾಗಿದೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಾಡಿಗೆ ಪೂಚ್ಚಕ್ಕಾಡ್‌ನ‌ಲ್ಲಿ ನ.8 ರಂದು ಕಲ್ಲೆಸೆದು ಹಾನಿಗೈದ ಸಂಬಂಧ 17 ರ ಹರೆಯದ ಅಪ್ರಾಪ್ತನನ್ನು ರೈಲ್ವೇ ಆರ್‌ಪಿಎಫ್‌ ಬಂಧಿಸಿದೆ. ಕಳನಾಡು ರೈಲು ಹಳಿಯಲ್ಲಿ ಕಳೆದ ವಾರ ಕಲ್ಲಿರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪತ್ತನಂತಿಟ್ಟ ನಿವಾಸಿ ಅಖೀಲ್‌ ಜೋನ್‌ ಮ್ಯಾಥ್ಯೂ(21)ನನ್ನು ಬಂಧಿಸಲಾಗಿದ್ದು, ಇವರ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ರೈಲ್ವೇ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next