Advertisement

Kasaragod: ಗಾಯಕಿಯ ಮಾನಭಂಗ ದೂರು: ಗಾಯಕ ರಿಯಾಸ್‌ ಬಂಧನ

08:17 PM Oct 06, 2024 | Team Udayavani |

ಕಾಸರಗೋಡು: ಗಾಯಕಿಯ ಮಾನಭಂಗ ನಡೆಸಿರುವುದಾಗಿ ನೀಡಿದ ದೂರಿನಂತೆ ಮಾಪಿಳಪ್ಪಾಟು ಗಾಯಕ ಆಲಂಪಾಡಿಯ ರಿಯಾಸ್‌ ಯಾನೆ ಪಟ್ಟುರುಮಾಲ್‌ ರಿಯಾಸ್‌ನನ್ನು ಚಿತ್ತಾರಿಕ್ಕಲ್‌ ಪೊಲೀಸರು ಬಂಧಿಸಿದ್ದಾರೆ.

Advertisement

26ರ ಹರೆಯದ ಮಹಿಳೆ ನೀಡಿದ ದೂರಿನಂತೆ ಬಂಧಿಸಲಾಗಿದೆ. ಇವರಿಬ್ಬರೂ ವಿವಾಹ ಸಮಾರಂಭಗಳಲ್ಲಿ ಗಾನ ಮೇಳ ಪ್ರಸ್ತುತ ಪಡಿಸುತ್ತಿದ್ದರು. ಈ ರೀತಿ ತೆರಳುತ್ತಿದ್ದಾಗ ರಿಯಾಸ್‌ ತನ್ನನ್ನು ಮಾನಭಂಗಪಡಿಸಿದ್ದಾಗಿ ದೂರು ನೀಡಿದ್ದರು. ವಿಷಯ ಬಹಿರಂಗಪಡಿಸದಿರಲು ಹಣ ನೀಡಬೇಕೆಂದು ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next