Advertisement

Kasaragod: ಆರಾಧನಾಲಯಗಳ ಸರಣಿ ಕಳವಿನ ಹಿಂದೆ ಒಂದೇ ತಂಡ?

07:49 PM Nov 05, 2024 | Team Udayavani |

ಕಾಸರಗೋಡು: ವಿದ್ಯಾನಗರ, ಬದಿಯಡ್ಕ, ಮಂಜೇಶ್ವರ ಮತ್ತು ಮೇಲ್ಪರಂಬ ಪೊಲೀಸ್‌ ಠಾಣೆಗಳ ವ್ಯಾಪ್ತಿಯ ಆರಾಧನಾಲಯಗಳಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದ ಸರಣಿ ಕಳವು ಕೃತ್ಯಗಳನ್ನು ಒಂದೇ ತಂಡ ನಡೆಸಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಈ ಎರಡು ದಿನಗಳಲ್ಲಾಗಿ ಹತ್ತರಷ್ಟು ಆರಾಧನಾಲಯಗಳು ಮತ್ತು ವ್ಯಾಪಾರ ಸಂಸ್ಥೆಗಳಿಂದ ಕಳವಾಗಿದೆ.
ಮಾನ್ಯ ಶ್ರೀ ಅಯ್ಯಪ್ಪ ಭಜನ ಮಂದಿರ, ಮೀಯಪದವು ಶ್ರೀ ಅಯ್ಯಪ್ಪ ಭಜನ ಮಂದಿರ, ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನ, ನೆಲ್ಲಿಕಟ್ಟೆಯ ಶ್ರೀ ನಾರಾಯಣ ಗುರು ಮಂದಿರ, ವರ್ಕಾಡಿ ಬಜಲಕರಿಯ ಬಾಲ ಯೇಸು ಪ್ರಾರ್ಥನಾ ಮಂದಿರ, ಪಾವಳದ ಕೊರಗಜ್ಜ ಕಟ್ಟೆ, ಮೂರುಗೋಳಿ ಸಮೀಪದ ಪಾಡಿಯ ಬಶೀರ್‌ ಅವರ ಜನರಲ್‌ ಸ್ಟೋರ್‌, ವರ್ಕಾಡಿಯ ಇಗರ್ಜಿ ಮೊದಲಾದಡೆಗಳಿಂದ ಕಳವು ಮಾಡಲಾಗಿತ್ತು.

ಈ ಪರಿಸರದ ಸಿಸಿ ಕೆಮರಾಗಳಲ್ಲಿ ಕಳ್ಳರದೆಂದು ಸಂಶಯಿಸಲಾಗುತ್ತಿರುವ ದೃಶ್ಯ ಗೋಚರಿಸಿದರೂ ಅವರು ಹೆಲ್ಮೆಟ್‌ ಧರಿಸಿದ್ದರಿಂದ ಗುರುತು ಹಚ್ಚಲು ಸಾಧ್ಯವಾಗಲಿಲ್ಲ. ವಾಹನದಲ್ಲಿ ಬಂದು ಕಳವು ನಡೆಸುತ್ತಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next