Advertisement

Kasaragod 50 ಸಾವಿರ ರೂ.ಚಾಕಲೇಟ್‌ ಕಳವು!

12:39 AM Jan 16, 2024 | Team Udayavani |

ಕಾಸರಗೋಡು: ಕಾಂಞಂಗಾಡ್‌ ನಗರದ ಅಂಗಡಿಯೊಂದರಿಂದ 50 ಸಾವಿರ ರೂ. ಮೌಲ್ಯದ ಚಾಕಲೇಟ್‌ ಕಳವು ಮಾಡಿದ ಘಟನೆ ನಡೆದಿದೆ.

Advertisement

ಕಾಂಞಂಗಾಡ್‌ ಕೋಟಚ್ಚೇರಿ ಆ್ಯಕ್ಸಿಸ್‌ ಬ್ಯಾಂಕ್‌ ಸಮೀಪದ ಮೊನಾರ್ಕ್‌ ಎಂಟರ್‌ಪ್ರೈಸಸ್‌ ಅಂಗಡಿಯ ಶಟರ್‌ ಮುರಿದು ಒಳನುಗ್ಗಿ 42,430 ರೂ. ಮೌಲ್ಯದ ಡೈರಿ ಮಿಲ್ಕ್ ಚಾಕಲೇಟ್‌ ಕಳವು ಹಾಗೂ 1,680 ರೂ. ನಗದು ಕಳವು ಮಾಡಲಾಗಿದೆ.

ಈ ಬಗ್ಗೆ ಅಂಗಡಿ ಮಾಲಕ ಅಬ್ದುಲ್‌ ಪೊಲೀಸರಿಗೆ ದೂರು ನೀಡಿದ್ದಾರೆ.ಹತ್ತಿರದ ಬಟ್ಟೆ ಅಂಗಡಿಯ ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ದಾಖಲಾಗಿದೆ.

20 ವರ್ಷಕ್ಕೂ ಕೆಳಗಿನ ಬಾಲಕ ರಸ್ತೆಯಲ್ಲಿ ನಿಂತು ವೀಕ್ಷಿಸುತ್ತಿರುವ ಹಾಗೂ ಇನ್ನಿಬ್ಬರು ಶಟರ್‌ ಮುರಿಯುವ ದೃಶ್ಯ ಕಂಡು ಬಂದಿದೆ. ಕಾಂಞಂಗಾಡ್‌ ಡಿವೈಎಸ್‌ಪಿ ಪಿ. ಬಾಲಕೃಷ್ಣನ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next