Advertisement

Kasaragod ವಿಷ ಸೇವನೆ : ತಾಯಿ ಮತ್ತು ಇಬ್ಬರು ಮಕ್ಕಳ ಸ್ಥಿತಿ ಗಂಭೀರ

05:46 PM Aug 28, 2023 | Team Udayavani |

ಕಾಸರಗೋಡು: ವಿಷ ಸೇವಿಸಿದ ಬೇಕಲ ಮೌವ್ವಲ್‌ನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಪಳ್ಳಿಕೆರೆ ಪರಯಂಗಾನಂ ನಿವಾಸಿ ಶೆರೀಫ್‌ ಅರಯಾಲ್‌ ಅವರ ಪತ್ನಿ ಸರೀನ ಮತ್ತು ಆಕೆಯ 7 ಮತ್ತು 4 ವರ್ಷದ ಇಬ್ಬರು ಗಂಡು ಮಕ್ಕಳನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಆ.27 ರಂದು ರಾತ್ರಿ 8 ಗಂಟೆಗೆ ಮಕ್ಕಳಿಗೆ ವಿಷ ನೀಡಿ ಸರೀನ ವಿಷ ಸೇವಿಸಿದ್ದು, ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶೆರೀಫ್‌ ನೀಡದ ಹೇಳಿಕೆಯಂತೆ ಸರೀನ ವಿರುದ್ಧ ಬೇಕಲ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

ವಿವಾಹ ವಿಚ್ಚೇಧನಕ್ಕಾಗಿ ಪತ್ನಿ ತನ್ನನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದಳೆಂದೂ ಅದಕ್ಕೆ ಒಪ್ಪದ ದ್ವೇಷದಿಂದ ಇಬ್ಬರು ಮಕ್ಕಳಿಗೆ ವಿಷವುಣಿಸಿ ಸರೀನ ವಿಷ ಸೇವಿಸಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಪತ್ನಿಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿದ ಆರೋಪದಂತೆ ಪತಿಯ ವಿರುದ್ಧವೂ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next