Advertisement

Kasaragod: ಆಪರೇಶನ್‌ ಬೈಕ್‌ ಸ್ಟಂಟ್‌ ; 35 ದ್ವಿಚಕ್ರ ವಾಹನಗಳು ವಶಕ್ಕೆ

12:00 AM Oct 15, 2023 | Team Udayavani |

ಕಾಸರಗೋಡು: ಕಾಸರಗೋಡು ಜಿಲ್ಲೆಯ ಸಹಿತ ಕೇರಳ ರಾಜ್ಯಾದ್ಯಂತ ಸಂಚಾರ ನಿಯಮ ಉಲ್ಲಂಘನೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಿ ಕೇರಳ ಪೊಲೀಸ್‌ ಮತ್ತು ಮೊಟಾರು ವಾಹನ ಇಲಾಖೆಗಳು ಜಂಟಿ ಕಾರ್ಯಾಚರಣೆ ಆರಂಭಿಸಿವೆ. ಇದರ ಅಂಗವಾಗಿ ಶನಿವಾರ ನಿಯಮ ಉಲ್ಲಂಘಿಸಿ ಪರಿವರ್ತನೆಗಳನ್ನು ಮಾಡಿರುವುದು ಮತ್ತು ಅಪಾಯಕಾರಿ ಸಾಹಸ ಪ್ರದರ್ಶಿಸಿರುವುದು ಹಾಗೂ ಅತಿಯಾದ ವೇಗದಲ್ಲಿ ವಾಹನ ಚಾಲನೆ ಆರೋಪದಡಿಯಲ್ಲಿ 35 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

ಜಂಟಿ ಕಾರ್ಯಾಚರಣೆ ತಂಡವು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, 3,59,250 ರೂ. ದಂಡ ವಿಧಿಸಲಾಗಿದೆ. ಈ ಕಾರ್ಯಾಚರಣೆಗೆ “ಆಪರೇಶನ್‌ ಬೈಕ್‌ ಸ್ಟಂಟ್‌’ ಎಂದು ಹೆಸರಿಡಲಾಗಿದ್ದು, ದ್ವಿಚಕ್ರ ವಾಹನ ಚಾಲನೆಯ ವೇಳೆ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುವುದು ಮತ್ತು ಅತಿಯಾದ ವೇಗ, ವಾಹನಗಳಲ್ಲಿ ನಿಯಮ ಉಲ್ಲಂ ಸಿ ಬದಲಾವಣೆ ಮಾಡುವುದನ್ನು ತಡೆಯಲು ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಕೇರಳ ಪೊಲೀಸರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದೇ ಕಾರ್ಯಾಚರಣೆಯ ಅಂಗವಾಗಿ 30 ಮಂದಿಯ ವಾಹನ ಚಾಲನೆ ಪರವಾನಿಗೆ ರದ್ದುಗೊಳಿಸಲು ಕೂಡ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಾಹನ ಸಂಚಾರ ನಿಯಮ ಉಲ್ಲಂ ಸುವವರ ವಿರುದ್ಧ ವಿವಿಧ ಸಾಮಾಜಿಕ ಜಾಲತಾಣಗಳ ಮುಖಾಂತರ ಕೂಡ ನಿಗಾ ಇರಿಸಲಾಗುತ್ತಿದೆ. ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್‌ ಮಾಡಲಾದ ವೀಡಿಯೋಗಳ ಆಧಾರದಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸುವ ಸವಾರರ ವಾಹನಗಳ ನೋಂದಣಿ ಸಂಖ್ಯೆ ಇತ್ಯಾದಿ ಪತ್ತೆಹಚ್ಚಲಾಗುತ್ತಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next