ಕಾಸರಗೋಡು: ಕ್ರಿಸ್ಮಸ್ ಆಚರಣೆ ನಡೆಯುತ್ತಿದ್ದಂತೆ ತಿರುವನಂತಪುರ ನೆಯ್ನಾಟಿಂಗರ ಚೆಂಗಲ್ ಸರಕಾರಿ ಯು.ಪಿ. ಶಾಲೆಯ ತರಗತಿ ಕೊಠಡಿಯಲ್ಲಿ 7 ನೇ ತರಗತಿ ವಿದ್ಯಾರ್ಥಿನಿ ನೇಹಾ (12) ಳಿಗೆ ಹಾವು ಕಡಿದ ಘಟನೆ ನಡೆದಿದೆ. ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಾವನ್ನು ಶಾಲಾ ಅಧಿಕಾರಿಗಳು ಹೊಡೆದು ಸಾಯಿಸಿದ್ದಾರೆ.
Advertisement
ಸಾರಿಗೆ ಸಚಿವರ ಹೇಳಿಕೆಗೆ ಬಸ್ ಮಾಲಕರ ಖಂಡನೆ ಕಾಸರಗೋಡು: ಖಾಸಗಿ ಬಸ್ಗಳು ಅಪಘಾತಕ್ಕೀಡಾದರೆ ಅದರ ಪರ್ಮಿಟ್ ಅಮಾನತುಗೊಳಿಸಲಾಗುವುದೆಂದು ಸಾರಿಗೆ ಖಾತೆ ಸಚಿವ ಕೆ.ಬಿ.ಗಣೇಶ್ ಕುಮಾರ್ ನೀಡಿರುವ ಹೇಳಿಕೆಯನ್ನು ಪ್ರತಿಭಟಿಸಿ ಖಾಸಗಿ ಬಸ್ ಮಾಲಕರು ರಂಗಕ್ಕಿಳಿದಿದ್ದಾರೆ. ಸಚಿವರ ಇಂತಹ ಹೇಳಿಕೆ ಖಾಸಗಿ ಬಸ್ ವಲಯವನ್ನು ಪತನದತ್ತ ಸಾಗಿಸುವಂತೆ ಮಾಡುವ ಗುರಿ ಹೊಂದಿದೆ ಎಂದು ಆರೋಪಿಸಿದ್ದಾರೆ.