ಕಾಸರಗೋಡು: ಕಣ್ಣೂರು ತಳಾಪ್ಪಿಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಿನಿ ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರರಾದ ಕಾಸರಗೋಡು ಮೊಗ್ರಾಲ್‌ಪುತ್ತೂರು ಕಂಬಾರು ಬೆದ್ರಡ್ಕ ನಿವಾಸಿಗಳಾದ ಮನಾಫ್(24) ಮತ್ತು ಗೆಳೆಯ ಲತೀಫ್(23) ಸಾವಿಗೀಡಾದರು.
ಕಣ್ಣೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬೈಕ್ ಹಾಗು ಮಂಗಳೂರಿನಿಂದ ಆಯಿಕರಕ್ಕೆ ತೆರಳುತ್ತಿದ್ದ ಮಿನಿ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಢಿಕ್ಕಿ ಹೊಡೆದ ಮಿನಿ ಲಾರಿಯ ಚಾಲಕ ಕಣ್ಣೂರು ನಿವಾಸಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ತಳಂಗರೆ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಆಗಿದ್ದ ಮನಾಫ್ ಒಂದು ವಾರ ರಜೆ ಪಡೆದಿದ್ದರು. ಗೆಳೆಯ ಲತೀಫ್ ಅವರ ಜೊತೆಯಲ್ಲಿ ಕಣ್ಣೂರಿಗೆ ಹೋಗಿ ವಾಪಸಾಗುತ್ತಿದ್ದಾಗ ದುರಂತ ಸಂಭವಿಸಿತು. ನಾಲ್ಕು ಮಂದಿ ಗೆಳೆಯರು ಕಣ್ಣೂರಿಗೆ ಹೋಗಿದ್ದರು. ಈ ಪೈಕಿ ಇಬ್ಬರು ಮೊದಲೇ ವಾಪಸಾಗಿದ್ದರು.
ಚೌಕಿ ಬದರ್ ನಗರದ ಮುಹಮ್ಮದ್-ಸಫಿಯ ದಂಪತಿಗಳ ಪುತ್ರ ಮನಾಫ್ ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಬದರ್‌ನಗರದ ರಫೀಕ್-ಜಮೀಲ ದಂಪತಿಗಳ ಪುತ್ರ ಲತೀಫ್.