Advertisement

Kasaragod ಗಾಂಜಾ ಸಾಗಾಟ: ತಲೆಮರೆಸಿಕೊಂಡಿದ್ದ ಮಹಿಳೆ ಮತ್ತೆ ಗಾಂಜಾ ಸಹಿತ ಬಂಧನ

12:01 AM Oct 21, 2023 | Team Udayavani |

ಕಾಸರಗೋಡು: ಕಳೆದ ವರ್ಷ ಕಾಸರಗೋಡು ಅಬಕಾರಿ ದಳ ಅಡ್ಕ ಪರಿಸರದಿಂದ 4 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣದ ಆರೋಪಿ ಬಂದ್ಯೋಡ್‌ ಅಡ್ಕದ ಅಬ್ದುಲ್‌ ಸಮೀರ್‌ ಅವರ ಪತ್ನಿ ಸುಹರಾಬಿ (37)ಯನ್ನು ಕಾಸರಗೋಡು ಎಕ್ಸೈಸ್‌ ಎನ್‌ಫೋರ್ಸ್‌ಮೆಂಟ್‌ ಆ್ಯಂಡ್‌ ಆ್ಯಂಟಿ ನಾರ್ಕೋಟಿಕ್‌ ಸ್ಪೆಷಲ್‌ ಸ್ಕ್ವಾಡ್‌ನ‌ವರು ಬಂಧಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಆಕೆಯ ಕೈಯಲ್ಲಿ 30 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಅದನ್ನು ವಿಶೇಷ ಪಡೆ ವಶಪಡಿಸಿಕೊಂಡಿದೆ. ಆಕೆಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next