ಕಾಸರಗೋಡು: ಹತ್ತು ಅಗ್ನಿಶಾಮಕ ದಳ ಕೇಂದ್ರಗಳು ಬೇಕಿರುವ ಕಾಸರಗೋಡು ಜಿಲ್ಲೆಯಲ್ಲಿ ಕೇವಲ ಐದು ಕೇಂದ್ರಗಳಿವೆ. ದೊಡ್ಡ ದುರಂತ ಸಂಭವಿ ಸಿದಾಗ ಸಕಾಲದಲ್ಲಿಗೆ ತಲುಪಲು ಅಗ್ನಿಶಾಮಕ ದಳಕ್ಕೆ ಸಮಸ್ಯೆಯಾಗುತ್ತಿದೆ.
ಒಂದು ನಿಮಿಷಕ್ಕೆ ಒಂದು ಕಿಲೋ ಮೀಟರ್ ಎಂಬ ರೀತಿಯಲ್ಲಿ ಸಂಚರಿಸುವುದು ಅಗ್ನಿಶಾಮಕ ದಳದ ರಕ್ಷಣ ಕಾರ್ಯದಲ್ಲಿನ ಗೋಲ್ಡನ್ ಅವರ್ ಆಗಿದೆ. ಆದರೆ ದೂರ ಹೆಚ್ಚು ಇರುವ ಕಡೆಗೆ ಈ ಮಾನದಂಡದಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ.
13 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಜಿಲ್ಲೆಯ ಉಪ್ಪಳ, ಕಾಸರಗೋಡು, ಕುತ್ತಿಕ್ಕೋಲು, ಕಾಂಞಂಗಾಡ್, ತೃಕ್ಕರಿಪುರಗಳಲ್ಲಿ ಒಟ್ಟು ಐದು ಘಟಕಗಳಿವೆ. ಕುತ್ತಿಕ್ಕೋಲ್ ಮತ್ತು ಉಪ್ಪಳ ಘಟಕಗಳಲ್ಲಿ ಮಂಜೂರಾದ ಹುದ್ದೆಯ ಅರ್ಧದಷ್ಟು ನೌಕರರು ಮಾತ್ರ ಇದ್ದಾರೆ. 38 ಪಂಚಾಯತ್‌ಗಳಿಗೂ 3 ನಗರಸಭೆಗಳಿಗೂ ಸೇರಿ ಅಗ್ನಿಶಾಮಕ ದಳಕ್ಕೆ ಒಟ್ಟು 150 ಸಿಬಂದಿ ಇದ್ದಾರೆ.
ಕಾಸರಗೋಡು ಕೇಂದ್ರದಲ್ಲಿ ಟ್ರೈನಿಗಳನ್ನು ಹೊರತುಪಡಿಸಿದರೆ ಖಾಯಂ ಸಿಬಂದಿಯ ಸಂಖ್ಯೆ 20ಕ್ಕೂ ಕಡಿಮೆ. ಕಳೆದ ನಾಲ್ಕು ತಿಂಗಳಲ್ಲಿ 400ರಷ್ಟು ಫೋನ್ ಕರೆಗಳು ಇಲ್ಲಿಗೆ ಬಂದಿವೆ. ಇದರಲ್ಲಿ 250ಕ್ಕೂ ಹೆಚ್ಚು ಬೆಂಕಿ ಆಕಸ್ಮಿಕ ಘಟನೆಗೆ ಸಂಬಂಧಿಸಿದ್ದು. ಮಾನದಂಡ ಪ್ರಕಾರ 24 ಫಯರ್ ಆ್ಯಂಡ್ ರೆಸ್ಕೂ Â ಆಫೀರ್, 4 ಸೀನಿಯರ್ ಫಯರ್ ಆ್ಯಂಡ್ ರೆಸ್ಕೂ Â ಆಫೀಸರ್, ಸ್ಟೇಶನ್ ಆಫೀಸರ್, ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಸಹಿತ ಒಟ್ಟು 36 ನೌಕರರು ಬೇಕಾಗಿದ್ದಾರೆ.
45 ಕಿ.ಮೀ. ವ್ಯಾಪ್ತಿ: ಜಿಲ್ಲಾ ಕೇಂದ್ರವಾದ ಕಾಸರಗೋಡಿನಲ್ಲಿರುವ ಘಟಕದ ಸಿಬಂದಿ 45 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಏನೇ ಅವಘಡ ಸಂಭವಿಸಿದರೂ ಕಾರ್ಯಾಚರಣೆಗೆ ಧಾವಿಸಬೇಕಾಗುತ್ತದೆ.