Advertisement

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

08:59 PM Dec 20, 2024 | Team Udayavani |

ಕಾರ್ಮಿಕ ಆತ್ಮಹತ್ಯೆ
ಉಪ್ಪಳ: ಉತ್ತರ ಪ್ರದೇಶದ ಬಹರಿಯ ಜಿಲ್ಲೆಯ ಅತಿಯಾಪುರ್‌ ಕುಂಡಸಾರ್‌ ನಿವಾಸಿ ಇದ್ರೀಸ್‌ ಅವರ ಪುತ್ರ, ಹೊಟೇಲ್‌ ಕಾರ್ಮಿಕ ನೂರಾಲಿ (21) ಕ್ವಾರ್ಟರ್ಸ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಒಂದು ಸ್ಕೂಟರ್‌ನಲ್ಲಿ ನಾಲ್ವರ ಸವಾರಿ: 12 ಸಾವಿರ ರೂ. ದಂಡ
ಕಾಸರಗೋಡು: ಒಂದು ಸ್ಕೂಟರ್‌ನಲ್ಲಿ ನಾಲ್ಕು ಮಂದಿ ಪ್ರಯಾಣಿಸಿದ ಆರೋಪದಂತೆ ಸ್ಕೂಟರ್‌ನ ವಾರಸುದಾರನಿಗೆ ಮೋಟಾರು ವಾಹನ ಇಲಾಖೆ 12 ಸಾವಿರ ರೂ. ದಂಡ ವಿಧಿಸಿದೆ.

ಕಾಂಞಂಗಾಡ್‌ ಮೇಲಾಂಗೋಡ್‌ನ‌ಲ್ಲಿ ಅನ್ಯ ರಾಜ್ಯ ಕಾರ್ಮಿಕರಾದ ನಾಲ್ವರು ಒಂದೇ ಸ್ಕೂಟರ್‌ನಲ್ಲಿ ಪ್ರಯಾಣಿಸಿದ ಬಗ್ಗೆ ಕಾಂಞಂಗಾಡ್‌ ಮೋಟಾರ್‌ ವಾಹನ ಇನ್‌ಸ್ಪೆಕ್ಟರ್‌ ಎಂ. ವಿಜಯನ್‌ಗೆ ದೂರು ಲಭಿಸಿತ್ತು. ಅದರಂತೆ ಸ್ಕೂಟರ್‌ ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗಿದೆ. ಚಾಲಕನಿಗೆ ಲೆಸನ್ಸ್‌ ಇರಲಿಲ್ಲ. ನಾಲ್ವರಲ್ಲಿ ಯಾರೂ ಹೆಲ್ಮೆಟ್‌ ಧರಿಸಿರಲಿಲ್ಲ.

ವ್ಯಕ್ತಿ ನಾಪತ್ತೆ
ಉಪ್ಪಳ: ಪೇಟೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ ಬಾಯಾರು ಗಾಳಿಯಡ್ಕ ಆವಳ ಕಲ್ಲಡ್ಕದ ಮೋಹನ (66) ನಾಪತ್ತೆಯಾಗಿದ್ದಾರೆ.

ಡಿ. 16ರಂದು ಬೆಳಗ್ಗೆ 10 ಗಂಟೆಗೆ ಬಾಯಾರು ಪೇಟೆಗೆ ತೆರಳಿದ್ದರು. ಆ ಬಳಿಕ ಮನೆಗೆ ವಾಪಸಾಗಿಲ್ಲ. ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ಗಾಂಜಾ, ಮದ್ಯ, ಹುಳಿರಸ ವಶಕ್ಕೆ
ಕಾಸರಗೋಡು: ನೀಲೇಶ್ವರ ರೇಂಜ್‌ ಅಬಕಾರಿ ದಳ ತೃಕ್ಕರಿಪುರ ಕೋಯಂಕರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 12 ಗ್ರಾಂ ಗಾಂಜಾ ವಶಪಡಿಸಿದ್ದು, ಈ ಸಂಬಂಧ ಬಿಹಾರ ಅರಾರಿ ಜಿಲ್ಲೆಯ ಖುವಾರಿಯಾ ಪಂಚಾಯತ್‌ನ ನಿವಾಸಿ ಗಫಾರ್‌ ಅಸ್ಸಾರಿ(26)ಯನ್ನು ಬಂಧಿಸಿದೆ.

ನೀಲೇಶ್ವರ ರೇಂಜ್‌ ಅಬಕಾರಿ ದಳ ವೆಳ್ಳರಿಕುಂಡು ಕೊಟ್ಟಮಲದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 40 ಲೀಟರ್‌ ಹುಳಿ ರಸ ವಶಪಡಿಸಿಕೊಂಡಿದೆ. ಮಾಲೋಂ ಗ್ರಾಮದಲ್ಲಿ ಹೊಸದುರ್ಗ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 40 ಲೀಟರ್‌ ಹುಳಿ ರಸ ವಶಪಡಿಸಿದೆ.

ಚೆರ್ಕಳದಲ್ಲಿ ಬಚ್ಚಿಡಲಾಗಿದ್ದ 5.75 ಲೀಟರ್‌ ಮದ್ಯವನ್ನು ಕಾಸರಗೋಡು ಅಬಕಾರಿ ದಳ ವಶಪಡಿಸಿದೆ. ಹೊಸದುರ್ಗ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 2.7 ಲೀಟರ್‌ ಮದ್ಯ ವಶಪಡಿಸಿಕೊಂಡಿದ್ದು, ಈ ಸಂಬಂಧ ಹೊಸದುರ್ಗ ಶ್ರೀಕೃಷ್ಣ ಮಂದಿರ ಬಳಿಯ ನಿವಾಸಿ ಶಿವಾನಂದ(54)ನನ್ನು ಬಂಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next