Advertisement

Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು

07:20 PM Jan 08, 2025 | Team Udayavani |

ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು
ಕಾಸರಗೋಡು: ಗೆಳೆಯರೊಂದಿಗೆ ಆಟ ಆಡುತ್ತಿದ್ದಾಗ ಬೀದಿ ನಾಯಿಯೊಂದನ್ನು ಕಂಡು ಹೆದರಿ ಓಡಿದ ಕಣ್ಣೂರು ತೂವಕ್ಕುನ್ನು ನಿವಾಸಿ ಮುಹಮ್ಮದ್‌ ಫಸಲ್‌ (9) ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ಸಂಭವಿಸಿದೆ. ಇತರ ಬಾಲಕರು ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ.

Advertisement

ಕಲ್ಯೋಟ್‌ ಕೊಲೆ ಪ್ರಕರಣ:ನಾಲ್ವರಿಗೆ ಜಾಮೀನು
ಕಾಸರಗೋಡು: ಪೆರಿಯಾ ಕಲ್ಯೋಟ್‌ನ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಾದ ಕೃಪೇಶ್‌ ಮತ್ತು ಶರತ್‌ಲಾಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಗೊಳಗಾದ ಉದುಮ ಮಾಜಿ ಶಾಸಕ ಕೆ.ವಿ. ಕುಂಞಿರಾಮನ್‌, ಕಾಂಞಂಗಾಡ್‌ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಕೆ. ಮಣಿಕಂಠನ್‌, ರಾಘವನ್‌ ವೆಳುತ್ತೋಳಿ ಮತ್ತು ಕೆ.ವಿ. ಭಾಸ್ಕರನ್‌ಗೆ ರಾಜ್ಯ ಹೈಕೋರ್ಟ್‌ ಜಾಮೀನು ನೀಡಿದೆ.

ಕೊಲ್ಲಿ ಉದ್ಯಮಿಯ ಕೊಲೆ: ಆರೋಪಿಗಳು ಪೊಲೀಸ್‌ ವಶಕ್ಕೆ
ಕಾಸರಗೋಡು: ಕೊಲ್ಲಿ ಉದ್ಯಮಿ ಪಳ್ಳಿಕ್ಕೆರೆ ಪೂಚಕ್ಕಾಡ್‌ನ‌ ಅಬ್ದುಲ್‌ ಗಫೂರ್‌ ಹಾಜಿ (55) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಬಾರ ಮೀತಲ್‌ ಮಾಂಞಾಡ್‌ ಬೈತುಲ್‌ ಫಾತಿಮ್‌ನ ಟಿ.ಎಂ. ಉಬೈಸ್‌ ಯಾನೆ ಉವೈಸ್‌ (32), ಪತ್ನಿ ಕೆ.ಎಚ್‌. ಶಮೀನ ಯಾನೆ ಚಿನ್ನುಮ್ಮ (34), ಪಳ್ಳಿಕ್ಕೆರೆ ಮುಕ್ಕೂಟ್‌ ಜಿಲಾನಿ ನಗರದ ಪಿ.ಎಂ. ಆಸ್ನೀಫ್‌ (43) ಮತ್ತು ಮಧೂರು ಕೊಲ್ಯದ ಆಯಿಷ (42) ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರಿಗೊಪ್ಪಿಸುವಂತೆ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ.

ಮರ ಕಡಿದು ಸಾಗಾಟ: ಇನ್ನೋರ್ವನ ಬಂಧನ
ಕಾಸರಗೋಡು: ಹೊಸದುರ್ಗ ಮಾವುಂಗಾಲ್‌ ರಾಜ್ಯ ಹೆದ್ದಾರಿಯ ಪುದಿಯಕಂಡದ ಸಾರ್ವಜನಿಕ ಪ್ರದೇಶದ ಮರವೊಂದನ್ನು ಕಡಿದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಪುದಿಯಕಂಡಂ ಮುರಳಿ ಆಲಿಯಾಸ್‌ ಗಿರಿಜಾ ಮುರಳಿ(53)ಯನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲು ಮೋನೋಚ್ಚಾಲ್‌ನ ಕೆ.ಎಸ್‌. ಗಿರೀಶನ್‌ (41) ಮತ್ತು ನಾರಾಯಣನ್‌(64)ನನ್ನು ಪೊಲೀಸರು ಬಂಧಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next